ಕರ್ನಾಟಕ

karnataka

ETV Bharat / state

ಮಕ್ಕಳಾಗದ್ದಕ್ಕೆ ಬೇಸರ... ನಾಯಿಯೊಂದಿಗೆ ಅಪಾರ್ಟ್​ಮೆಂಟ್​ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ!

ನಗರದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ವ್ಯಕ್ತಿವೋರ್ವ ಮಕ್ಕಳಾಗಿಲ್ಲವೆಂದು ನೊಂದು ಹೆಂಡತಿ ಮತ್ತು ಸಾಕು ನಾಯಿಯನ್ನ ಕೊಂದು ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೆಂಡತಿ ಮತ್ತು ಸಾಕು ನಾಯಿಯನ್ನ ಕೊಂದು ಅಪಾರ್ಟ್ ಮೆಂಟ್ ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

By

Published : Apr 2, 2019, 8:00 PM IST

ಬೆಂಗಳೂರು : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿವೋರ್ವ ತನ್ನ ಹೆಂಡತಿyನ್ನು ಕೊಂದು, ಮಹಡಿಯಿಂದ ಸಾಕು ನಾಯಿಯೊಂದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ.

ಸದಾಶಿವನಗರದ ನಿವಾಸಿ ಅತುಲ್ ಉಪಾಧ್ಯಾಯ ಎಂಬ ಟ್ರಾನ್ಸಪೋರ್ಟ್ ಉದ್ಯಮಿ ಕಳೆದ 20 ವರ್ಷಗಳಿಂದ ಬೆಂಗಳೂರಲ್ಲಿ ವಾಸವಾಗಿದ್ದರು. ಮದುವೆಯಾಗಿ 25 ವರ್ಷವಾದ್ರು ಮಕ್ಕಳಾಗಿಲ್ಲವೆಂದು ಮನನೊಂದ ಅತುಲ್, ಹೆಂಡತಿಯನ್ನ ಡಂಬಲ್ಸ್​​ನಿಂದ ಚಚ್ಚಿ ನಂತರ ನಾಯಿಯೊಂದಿಗೆ ಅಪಾರ್ಟ್​ಮೆಂಟ್​ನಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೆಂಡತಿ ಮತ್ತು ಸಾಕು ನಾಯಿಯನ್ನ ಕೊಂದು ಅಪಾರ್ಟ್ ಮೆಂಟ್ ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅತುಲ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತಿದ್ದ ಎಂದು ಹೇಳಲಾಗುತ್ತಿದೆ. ಸದಾಶಿವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details