ಬೆಂಗಳೂರು: ಬಾಗಿಲಿಗೆ ಆಟೋಮೆಟಿಕ್ ಲಾಕ್ ಅಳವಡಿಸಿದ್ದರಿಂದ ಕಳ್ಳತನ ಮಾಡಲು ಹೋಗಿದ್ದ ವ್ಯಕ್ತಿ ಮನೆಗೆ ಒಳಗೆ ನುಗ್ಗಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಘಟನೆ ಹೆಚ್ಎಎಲ್ ಠಾಣಾ ವ್ಯಾಪ್ತಿಯ ವಿಭೂತಿಪುರದ ಮನೆಯೊಂದರಲ್ಲಿ ನಡೆದಿದೆ.
ಕದಿಯಲು ಬಂದು ಸಂಕಷ್ಟಕ್ಕೆ ಸಿಲುಕಿದ ಕಳ್ಳನನ್ನ ಆಸ್ಪತ್ರೆಗೆ ಸೇರಿಸಿದ ಮನೆ ಮಾಲೀಕ! - ಬೆಂಗಳೂರು ಕಳ್ಳತನ ಪ್ರಕರಣ
ಬಾಗಿಲಿಗೆ ಆಟೋಮೆಟಿಕ್ ಲಾಕ್ ಅಳವಡಿಸಿದ್ದರಿಂದ ಕಳ್ಳತನ ಮಾಡಲು ಹೋಗಿದ್ದ ವ್ಯಕ್ತಿ ಮನೆಯೊಳಗೆ ಸಿಲುಕಿಕೊಂಡಿರುವ ಘಟನೆ ಹೆಚ್ಎಎಲ್ ಠಾಣಾ ವ್ಯಾಪ್ತಿಯ ವಿಭೂತಿಪುರದ ಮನೆಯೊಂದರಲ್ಲಿ ನಡೆದಿದೆ.
ಸ್ವಸ್ತಿಕ್ ಕಳ್ಳತನ ಮಾಡಲು ಹೋಗಿ ಸಿಲುಕಿಕೊಂಡಿರುವ ಆರೋಪಿ. ಮನೆ ಮಾಲೀಕ ಮೋಹನ್ ಹಾಗೂ ಆತನ ಕುಟುಂಬಸ್ಥರು ದೇವಸ್ಥಾನಕ್ಕೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತ ಸ್ವಸ್ತಿಕ್ ಮನೆಯೊಳಗೆ ನುಗ್ಗಿದ್ದ ಎನ್ನಲಾಗ್ತಿದೆ. ಕಳ್ಳತನ ಮಾಡಿ ಮನೆಯ ಪ್ರವೇಶ ದ್ವಾರದಿಂದ ಹೊರ ಬರಲು ಮುಂದಾಗಿದ್ದ. ಆದ್ರೆ ಬಾಗಿಲಿಗೆ ಆಟೋಮೆಟಿಕ್ ಲಾಕ್ ಅಳವಡಿಸಿದ್ದರಿಂದ ಬಾಗಿಲು ಓಪನ್ ಆಗದೆ ಚಡಪಡಿಸಿದ್ದಾನೆ. ಕಳ್ಳತನದ ಬಳಿಕ ತಪ್ಪಿಸಿಕೊಳ್ಳಲಾಗದೆ ರೂಂಗೆ ಹೋಗಿ ಫ್ಯಾನ್ಗೆ ಶಾಲ್ ಕಟ್ಟಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಮನೆಯ ಸಿಲಿಂಡರ್ ಪೈಪ್ ತೆಗೆದು ಬೆಂಕಿ ಹಚ್ಚಿಕೊಂಡು ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ.
ಮನೆ ಮಾಲೀಕರು ದೇವಸ್ಥಾನದಿಂದ ವಾಪಸ್ ಬಂದಾಗ ಮನೆಗೆ ಬೆಂಕಿ ಬಿದ್ದಿರುವುದನ್ನು ಕಂಡು ಕೂಡಲೇ ನಂದಿಸಿದ್ದಾರೆ. ಮನೆಯೊಳಗೆ ಗಾಯಗೊಂಡು ಬಿದ್ದಿದ್ದ ಕಳ್ಳ ಸ್ವಸ್ತಿಕ್ನನ್ನು ಮಾಲೀಕನೇ ಆಸ್ಪತ್ರೆಗೆ ಸೇರಿಸಿದ್ದಾರೆ. ಬಳಿಕ ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.