ಬೆಂಗಳೂರು:ವಿಚಾರವಾದಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ಮಾಹಿತಿಯೊಂದು ಇದೀಗ ಹೊರಬಿದ್ದಿದೆ. ದೇಶದ ನಾಲ್ಕು ಹೈಪ್ರೊಫೈಲ್ ಕೇಸ್ಗಳಿಗೆ ಬೈಕ್ ಸಪ್ಲೈ ಮಾಡಿದ್ದು ಒಬ್ಬನೇ ಅನ್ನೋ ಅಂಶ ಎಸ್ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಗೌರಿ - ಕಲಬುರ್ಗಿ ಹತ್ಯೆಗೆೆ ಬೈಕ್ ಸಪ್ಲೈ ಮಾಡಿದ್ದು ಒಬ್ಬನೇ.. SIT ತನಿಖೆಯಲ್ಲಿ ಸತ್ಯಾಂಶ ಬಯಲು! - Bike Supply
ದೇಶದಲ್ಲಿ ನಡೆದ ನಾಲ್ಕು ವಿಚಾರವಾದಿಗಳ ಹತ್ಯೆಗೆ ಬೈಕ್ ಸಪ್ಲೈ ಮಾಡಿದ್ದು ಒಬ್ಬನೇ ಒಬ್ಬ. ಇಂತಹದ್ದೊಂದು ಅಂಶವನ್ನು ಎಸ್ಐಟಿ ಹೊರಹಾಕಿದೆ.
ಕಲಬುರ್ಗಿ ಹತ್ಯೆ ಸಂಬಂಧ ವಾಸುದೇವ್ ಎಂಬ ಆರೋಪಿಯನ್ನ ಎಸ್ಐಟಿ ಬಂಧಿಸಿದ್ದಾರೆ. ಆರೋಪಿ ವಾಸುದೇವ್ ತನಿಖಾಧಿಕಾರಿಗಳ ಎದುರು ಪನ್ಸಾರೆ, ದಾಬೋಲ್ಕರ್, ಕಲಬುರ್ಗಿ ಹಾಗೂ ಗೌರಿ ಹತ್ಯೆ ಪ್ರಕರಣಗಳಿಗೆ ಬೈಕ್ ಸಪ್ಲೈ ಮಾಡಿರುವ ವಿಚಾರವನ್ನ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಗೌರಿ ಹಾಗೂ ಕಲಬುರ್ಗಿ ಹತ್ಯೆಯ ಪ್ರಮುಖ ಆರೋಪಿ ಅಮೂಲ್ ಕಾಳೆ ಸೂಚನೆಯಂತೆ ತಾನು ಬೈಕ್ ಸಪ್ಲೈ ಮಾಡಿದ್ದೆ ಎಂದು ಎಸ್ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ. ವಾಸುದೇವ್ ಭಗವಾನ್ ಸೂರ್ಯವಂಶಿ ಮಹಾರಾಷ್ಟ್ರ ಮೂಲದವನಾಗಿದ್ದು ಮಹಾರಾಷ್ಟ್ರದಲ್ಲೇ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸ್ತಿದ್ದ. ಸದ್ಯ ಕಲಬುರ್ಗಿ ಕೇಸ್ ವಿಚಾರವಾಗಿ ಎಸ್ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.