ಕರ್ನಾಟಕ

karnataka

ETV Bharat / state

ಕೋವಿಡ್ 3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ್ರೂ ಆತಂಕ ಮಾತ್ರ ದೂರ..

ಕೋವಿಡ್ ಮೂರನೇ ಅಲೆಯು ಜ್ವರ, ಕೆಮ್ಮು, ನೆಗಡಿಗಷ್ಟೇ ಸೀಮಿತವಾಗುತ್ತಾ? ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಏಕೆಂದರೆ, 50,000 ಕೇಸ್ ಬಂದ್ರೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿಲ್ಲ.‌ ಹೀಗಾಗಿ, ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಆದ್ರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದ್ರೆ, ಸರ್ಕಾರ ಟಫ್​ ರೂಲ್ಸ್ ಜಾರಿಗೆ ತರುವ ಸಾಧ್ಯತೆ ಇದೆ..

corona
ಕೋವಿಡ್

By

Published : Jan 24, 2022, 6:42 PM IST

Updated : Jan 25, 2022, 3:12 PM IST

ಬೆಂಗಳೂರು :ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಪ್ರಭಾವದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ನಿನ್ನೆ‌ ಒಂದೇ ದಿನ 50 ಸಾವಿರ ಹೊಸ ಪ್ರಕರಣ ಪತ್ತೆಯಾಗಿವೆ. ಇತ್ತ ಸೋಂಕಿತರ ಸಂಖ್ಯೆ ಇನ್ನಷ್ಟು ಉತ್ತುಂಗಕ್ಕೇರುವ ಸಾಧ್ಯತೆ ಬಗ್ಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಈ ಕೋವಿಡ್ ಮೂರನೇ ಅಲೆಯು ಜ್ವರ, ಕೆಮ್ಮು, ನೆಗಡಿಗಷ್ಟೇ ಸೀಮಿತವಾಗುತ್ತಾ? ಇಂತಹದೊಂದು ಪ್ರಶ್ನೆ ಸಹಜವಾಗಿ ಕಾಡುತ್ತೆ.‌ ಯಾಕೆಂದರೆ, 50,000 ಕೇಸ್ ಬಂದ್ರೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿಲ್ಲ.‌ ಹೀಗಾಗಿ, ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಆಸ್ಪತ್ರೆ ದಾಖಲಾತಿ ಹೆಚ್ಚಾದರೆ ಟಫ್ ರೂಲ್ಸ್ :ಆಸ್ಪತ್ರೆಗೆ ಸೋಂಕಿತರು ದಾಖಲಾಗುವ ಪ್ರಮಾಣ ಹೆಚ್ಚಾದರೆ ಟಫ್ ರೂಲ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಮುಂದಿನ ವಾರ ಆಸ್ಪತ್ರೆ ದಾಖಲಾತಿ ಮೇಲೆ 50:50 ರೂಲ್ಸ್ ತೆರವು ಮಾಡುವ ಸಾಧ್ಯತೆ ಇದೆ.

ಕೋವಿಡ್ 3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ್ರೂ ಆತಂಕ ಮಾತ್ರ ದೂರ..

ಇದನ್ನೂ ಓದಿ: ಕೊರೊನಾ ನಿರ್ಬಂಧ ಸಡಿಲಿಕೆ ಎಫೆಕ್ಟ್​.. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಪ್ರಯಾಣಿಕರ ದಟ್ಟಣೆ

ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯು ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ಸ್​​ನ ಯಾವ ಹಂತದಲ್ಲಿ ಜಾರಿ ಮಾಡಬೇಕೆಂದು ಸೂಚಿಸಿದೆ. ಆಸ್ಪತ್ರೆ ದಾಖಲಾತಿ ಹೆಚ್ಚಾದರೆ, ಆಕ್ಸಿಜನ್ ಬೆಡ್​ಗಳು ಪೂರ್ಣವಾದರೆ ಹಾಗೂ ಸಾವಿನ ಸಂಖ್ಯೆ ಏರಿಕೆಯಾದ ಸಂದರ್ಭದಲ್ಲಿ ಕಠಿಣ ಕ್ರಮ ಜಾರಿಗೆ ಶಿಫಾರಸು ಮಾಡಲಾಗಿದೆ.

ವಾರದ ಹಿಂದೆ ಪತ್ತೆಯಾಗಿರುವ ಕೋವಿಡ್ ಕೇಸ್‌ಗಳನ್ನ ಗಮನಿಸಿದ್ರೆ, ಸೋಂಕಿತರ ಸಂಖ್ಯೆ ಹೆಚ್ಚಾಗಿ ಇದ್ದರೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕಡಿಮೆ ಇದೆ. ಅದರ ಅಂಕಿ-ಅಂಶಗಳನ್ನ ನೋಡುವುದಾದ್ರೆ...

ವೀಕ್ಲಿ ಕೋವಿಡ್ ಕೇಸ್ ​ :

ಬೆಂಗಳೂರು ನಗರ

ದಿನಾಂಕ ಕೇಸ್ ಆಸ್ಪತ್ರೆ ದಾಖಲಾತಿ
ಜನವರಿ 16 21,071 72
ಜನವರಿ17 15,947 81
ಜನವರಿ 18 25,595 84
ಜನವರಿ 19 24,135 80
ಜನವರಿ 20 30,540 81
ಜನವರಿ 21 29,068 87
ಜನವರಿ 22 17,266 71

ಕರ್ನಾಟಕ

ದಿನಾಂಕ ಪ್ರಕರಣಗಳು ಆಸ್ಪತ್ರೆ ದಾಖಲಾತಿ
ಜನವರಿ 16 34,047 717
ಜನವರಿ 17 27,156 192
ಜನವರಿ 18 41,457 213
ಜನವರಿ 19 40,499 447
ಜನವರಿ 20 47,754 102
ಜನವರಿ 21 48,049 185
ಜನವರಿ 22 42,470 292

ರಾಜ್ಯದಲ್ಲಿ 50 ಸಾವಿರ ಕೇಸ್ ಬಂದರೂ ಆತಂಕ ಪಡಬೇಕಿಲ್ಲ.‌ ಮೂರನೇ ಅಲೆಗಿಂತ ಎರಡನೇ ಅಲೆಯೇ ಅತಿ ಭೀಕರವಾಗಿತ್ತು. 2ನೇ ಅಲೆಯಲ್ಲಿ 1.5 ಲಕ್ಷ ಟೆಸ್ಟಿಂಗ್‌ಗೆ 50 ಸಾವಿರ ಕೇಸ್ ಪತ್ತೆಯಾಗಿತ್ತು. ಹಾಗೆ 2ನೇ ಅಲೆಯಲ್ಲಿ ಆಸ್ಪತ್ರೆಯ ದಾಖಲಾತಿಯೂ ಹೆಚ್ಚಿತ್ತು. ಆದರೆ, 3ನೇ ಅಲೆಯಲ್ಲಿ 2.20 ಲಕ್ಷ ಟೆಸ್ಟಿಂಗ್‌ಗೆ 50 ಸಾವಿರ ಕೇಸ್ ದೃಢಪಟ್ಟಿವೆ. 2ನೇ ಅಲೆಗಿಂತ 3ನೇ ಅಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಕೂಡ ಇದೆ‌. ಅದರ ಅಂಕಿ-ಅಂಶಗಳನ್ನ ನೋಡುವುದಾದರೆ..

ಕೊರೊನಾ ಎರಡನೇ ಅಲೆ :

ಉತ್ತುಂಗಕ್ಕೆ- ಮೇ 5, 2021

ಗರಿಷ್ಠ ಕೇಸ್- 50,112

ಟೆಸ್ಟಿಂಗ್- 1, 55, 224

ಪಾಸಿಟಿವಿಟಿ- ಶೇ. 32.28

ಸೋಂಕಿತರ ಸಾವು- 346

ಕೊರೊನಾ ಮೂರನೇ ಅಲೆ

ಉತ್ತುಂಗ- ಜನವರಿ 23, 2022

ಗರಿಷ್ಠ ಕೇಸ್- 50,210

ಟೆಸ್ಟಿಂಗ್- 2,20,459

ಪಾಸಿಟಿವಿಟಿ- ಶೇ. 22.77

ಸೋಂಕಿರತ ಸಾವು -19

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 25, 2022, 3:12 PM IST

For All Latest Updates

TAGGED:

ABOUT THE AUTHOR

...view details