ಪ್ರತೀ ಹಂತದ ಲಾಕ್ಡೌನ್ ಅವಧಿಯಲ್ಲಿ ಬೆಂಗಳೂರಿನ ಕೋವಿಡ್ ಸೋಂಕಿತರ ಸಂಖ್ಯೆ ಎಷ್ಟು? - 282 ಪ್ರಕರಣಗಳು
ಮೊದಲ ಘಟನೆಯಿಂದ ಲಾಕ್ಡೌನ್ 4.0 ವರೆಗೆ ಆದ 282 ಪ್ರಕರಣಗಳು ಯಾವ ಯಾವ ಲಾಕ್ಡೌನ್ ಅವಧಿಯಲ್ಲಿಯಲ್ಲಾಗಿದೆ ಎಂದು ಅಂಕಿ - ಅಂಶ ಬಿಡುಗಡೆ ಮಾಡಿದೆ. ಲಾಕ್ಡೌನ್ ನಾಲ್ಕನೇ ಹಂತ ಸಡಿಲಿಕೆಯಿಂದ ಇಡೀ ರಾಜ್ಯದಲ್ಲಿ ಹಠಾತ್ತನೇ ಸೋಂಕಿತರ ಸಂಖ್ಯೆ ಏರಿಕೆಯಾದರೂ ಬೆಂಗಳೂರಲ್ಲಿ ಮಾತ್ರ ನಿಯಂತ್ರಣದಲ್ಲಿರುವುದು ಇದರಲ್ಲಿ ಗೊತ್ತಾಗಿದೆ.
ಪ್ರತೀ ಹಂತದ ಲಾಕ್ಡೌನ್ ಅವಧಿಯಲ್ಲಿ ಬೆಂಗಳೂರಿನ ಕೋವಿಡ್ ಸೋಂಕಿತರ ಸಂಖ್ಯೆ ಎಷ್ಟು
By
Published : May 26, 2020, 8:49 PM IST
ಬೆಂಗಳೂರು: ಮಹತ್ವದ ದಿನಗಳಲ್ಲಿ ಕರ್ನಾಟಕ ಮತ್ತು ಬಿಬಿಎಂಪಿ ವ್ಯಾಪ್ತಿಯ ಕೋವಿಡ್-19 ಸೋಂಕಿತ ಪ್ರಕರಣಗಳ ವಿವರಗಳನ್ನು ಬಿಬಿಎಂಪಿ ಬಿಡುಗಡೆ ಮಾಡಿದೆ. ಒಂದು ಕಾಲು ಕೋಟಿ ಜನಸಂಖ್ಯೆ ಇರುವ ನಗರದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ ಎಂಬುದನ್ನು ಇದು ಸಾಬೀತುಪಡಿಸಿದೆ.
ಬಿಬಿಎಂಪಿ ವ್ಯಾಪ್ತಿಯ ಕೋವಿಡ್-19 ಸೋಂಕಿತ ಪ್ರಕರಣಗಳ ವಿವರ
ಮೊದಲ ಘಟನೆಯಿಂದ ಲಾಕ್ಡೌನ್ 4.0 ವರೆಗೆ ಆದ 282 ಪ್ರಕರಣಗಳು ಯಾವ ಯಾವ ಲಾಕ್ಡೌನ್ ಅವಧಿಯಲ್ಲಾಗಿದೆ ಎಂದು ಅಂಕಿ ಅಂಶ ಬಿಡುಗಡೆ ಮಾಡಿದೆ. ಲಾಕ್ಡೌನ್ ನಾಲ್ಕನೇ ಹಂತ ಸಡಿಲಿಕೆಯಿಂದ ಇಡೀ ರಾಜ್ಯದಲ್ಲಿ ಹಠಾತ್ತನೇ ಸೋಂಕಿತರ ಸಂಖ್ಯೆ ಏರಿಕೆಯಾದ್ರೂ ಬೆಂಗಳೂರಲ್ಲಿ ಮಾತ್ರ ನಿಯಂತ್ರಣದಲ್ಲಿರುವುದು ಇದರಲ್ಲಿ ಗೊತ್ತಾಗಿದೆ.
ಕರ್ನಾಟಕ ಮತ್ತು ಬೆಂಗಳೂರಿನ ಕೊರೊನಾ ಸೋಂಕಿತರ ವಿವರ:
ಲಾಕ್ಡೌನ್
ಅವಧಿ
ಕರ್ನಾಟಕ
ಬೆಂಗಳೂರು
0.0
24-03-2020
51
32
1.0
14-04-2020
260
71
2.0
03.05.2020
606
153
3.0
17.05.2020
1146
239
4.0
26-05-2020
2282
282
ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿ ಕಡಿತ
ಕಂಟೇನ್ಮೆಂಟ್ ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದೆ. ಹಿಂದೆ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದ್ರೆ ಇಡೀ ಅಪಾರ್ಟ್ ಮೆಂಟ್ ಕಂಟೇನ್ಮೆಂಟ್ ಮಾಡಲಾಗುತ್ತಿತ್ತು. ಆದ್ರೆ ಈಗ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ಮಹಡಿ, ಅದರ ಮೇಲಿನ ಮತ್ತು ಕೆಳಗಿನ ಮಹಡಿಯನ್ನು ಮಾತ್ರ ಕಂಟೇನ್ಮೆಂಟ್ ಮಾಡಲಾಗುತ್ತದೆ.
ಜೊತೆಗೆ ಇತರಡೆ ಸೋಂಕಿತ ವ್ಯಕ್ತಿ ವಾಸವಾಗುತ್ತಿದ್ದ ನೂರು ಮೀಟರ್ ಸುತ್ತಮುತ್ತ ಕಂಟೇನ್ಮೆಂಟ್ ಮಾಡಲಾಗುತ್ತಿದ್ದು, ಈಗ ಮನೆಯ ಎದುರಿನ ಬೀದಿ ಮಾತ್ರ ನಿಯಂತ್ರಿತ ವಲಯ ಹಾಗೂ ಈ ಹಿಂದೆ ಇದ್ದ ಒಂದು ಕಿ.ಮೀ ವ್ಯಾಪ್ತಿಯನ್ನು ಬಫರ್ ಝೋನ್ ಮಾಡಲಾಗುತ್ತಿದ್ದು, ಈಗ 200 ಮೀಟರ್ ವ್ಯಾಪ್ತಿ ಪ್ರದೇಶ ಮಾತ್ರ ಬಫರ್ ಝೋನ್ ಮಾಡಲಾಗುತ್ತಿದೆ.
ಇನ್ನು ಸ್ಲಂ ಪ್ರದೇಶದಲ್ಲಿ ವ್ಯಕ್ತಿಗೆ ಕೊರೊನಾ ಕಂಡುಬಂದರೆ ಮನೆಯಿರುವ ಬೀದಿ ಹಾಗೂ ಅಕ್ಕಪಕ್ಕದ ಬೀದಿಯನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಗುರುತಿಸಲಾಗುತ್ತದೆ.