ಕರ್ನಾಟಕ

karnataka

By

Published : Sep 29, 2019, 11:29 AM IST

ETV Bharat / state

ವಾಹ್‌! ಎಂಥಾ ಟಿಕ್‌ಟಾಕ್‌ರೀ ಇದು.. ಅಸ್ಥಿ ಪಂಜರಕೂ ಜೀವ ತಂದ 'ಐ ಲವ್ ಯೂ' ಸಂಗೀತ ನಿರ್ದೇಶಕ ಡಾ.ಕಿರಣ್..

ಟಿಕ್​ಟಾಕ್ ಮಾಡುವ ಸಲುವಾಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳುಂಟು. ಆದರೆ, ಈಗ ಸೆಲೆಬ್ರಿಟಿ ಒಬ್ಬರು ಪ್ರಾಣವೇ ಇಲ್ಲದ ಅಸ್ಥಿ ಪಂಜರದ ಜೊತೆ ಟಿಕ್​ಟಾಕ್ ಮಾಡಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

ಸಂಗೀತ ನಿರ್ದೇಶಕ ಡಾ ಕಿರಣ್

ಬೆಂಗಳೂರು:ಸದ್ಯ ಈಗ ಎಲ್ಲಿ ನೋಡಿದ್ರೂ ಟಿಕ್‌ಟಾಕ್‌ನದ್ದೇ ಹವಾ.. ಮಕ್ಕಳಿಂದ ಹಿಡಿದು ಮುದುಕರವರೆಗೂ ಟಿಕ್​ಟಾಕ್ ಮಾಡ್ಕೊಂಡು ಟೈಂಪಾಸ್ ಮಾಡುತ್ತಿದ್ದಾರೆ. ಈ ಟಿಕ್​ಟಾಕ್​ ಎಷ್ಟರ ಮಟ್ಟಿಗೆ ಇಂದಿನ ಯುವ ಪೀಳಿಗೆಯನ್ನು ಆಕರ್ಷಿಸಿದೆ ಎಂದರೆ, ಟಿಕ್‌ಟಾಕ್ ಮಾಡುವ ಸಲುವಾಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳುಂಟು. ಆದರೆ, ಈಗ ಸೆಲೆಬ್ರಿಟಿ ಒಬ್ಬರು ಪ್ರಾಣವೇ ಇಲ್ಲದ ಅಸ್ಥಿ ಪಂಜರದ ಜೊತೆ ಟಿಕ್​ಟಾಕ್ ಮಾಡಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

ಟಿಕ್​ಟಾಕ್​ ಮಾಡಿದ ಐ ಲವ್ ಯೂ ಸಂಗೀತ ನಿರ್ದೇಶಕ ಡಾ. ಕಿರಣ್..

ವೃತ್ತಿಯಲ್ಲಿ ವೈದ್ಯರಾಗಿರುವ ಸಂಗೀತ ನಿರ್ದೇಶಕ ಡಾ. ಕಿರಣ್ ತೋಟಂಬೈಲು, ಸಿಲಿಕಾನ್​ ಸಿಟಿಯ ಬಿಜಿಎಸ್ ಕಾಲೇಜಿನಲ್ಲಿ ಕೆಲಸ ಮಾಡುತ್ತಾರೆ. ಅಲ್ಲದೆ ಫ್ರೀ ಟೈಮ್​ನಲ್ಲಿ ಸಂಗೀತ ನಿರ್ದೇಶನವನ್ನೂ ಮಾಡುತ್ತಾರೆ. ಡಾಕ್ಟರ್ ಕಿರಣ್ ತೋಟಂಬೈಲು ಐ ಲವ್ ಯೂ ಚಿತ್ರಕ್ಕೆ ಸಂಗೀತ ನೀಡಿದ್ದು, ಈ ಚಿತ್ರದ ಹಾಡುಗಳು ಈಗಾಗಲೇ ಟಿಕ್​ಟಾಕ್​ನಲ್ಲಿ ಸಖತ್ ಸೌಂಡ್ ಮಾಡ್ತಿವೆ. ಅದರಲ್ಲೂ ಬಂಗಾರದಲ್ಲಿ ಗೊಂಬೆ ಮಾಡಿದ ಶೃಂಗಾರವೆಲ್ಲ ನಿಂಗೆ ನೀಡಿದ ಎರಡು ಟಿಕ್​ಟಾಕ್​ನಲ್ಲಿ ಸಖತ್ ಫೇಮಸ್ ಆಗಿದ್ದು, ಎಷ್ಟೋ ಜೋಡಿಗಳು ಹುಚ್ಚೆದ್ದು ಈ ಹಾಡನ್ನು ಟಿಕ್​ಟಾಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇನ್ನು, ಈಗ ಇದೇ ಹಾಡು ಡಾಕ್ಟರ್ ಕಿರಣ್ ತೋಟಂಬೈಲು ಅವರನ್ನು ಆವರಿಸಿದ್ದು. ತಾವೂ ಒಂದು ಕೈ ನೋಡೇ ಬಿಡೋಣ ಎಂದು. ಅವರೇ ಕಂಪೋಸ್ ಮಾಡಿದ ಹಾಡಿಗೆ ಆಸ್ಪತ್ರೆಯೊಳಗೆ ಫ್ರೀಟೈಂನಲ್ಲಿ ಟಿಕ್​ಟಾಕ್ ಮಾಡಿದ್ದಾರೆ. ಆದರೆ, ಡಾ. ಕಿರಣ್ ಈ ಹಾಡಿನಲ್ಲಿ ಅಸ್ಥಿ ಪಂಜರದ ಜೊತೆ ರೋಮ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದಾರೆ. ಇದೇ ಟಿಕ್​ಟಾಕ್ ಹಾಡು ಈಗ‌ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ABOUT THE AUTHOR

...view details