ಕರ್ನಾಟಕ

karnataka

ETV Bharat / state

ಭೀಮಾತೀರದ ಸಹೋದರರ ಹತ್ಯೆ ಕೇಸ್​... ಬಾಡಿ ವಾರೆಂಟ್ ಮೇಲೆ ಆರೋಪಿಯನ್ನ ನಗರಕ್ಕೆ ಕರೆತಂದ ಸಿಸಿಬಿ - Kannada news

ಭೀಮಾತೀರದ ಹಂತಕ ಚಡಚಣ ಸಹೋದರರ ಹತ್ಯೆ ಪ್ರಕರಣದ ಆರೋಪಿಯನ್ನು ಇದೀಗ ಬಾಡಿ ವಾರೆಂಟ್ ಮೇಲೆ ಸಿಸಿಬಿ ಪೊಲೀಸರು ನಗರಕ್ಕೆ ಕರೆತಂದಿದ್ದಾರೆ.

ಆರೋಪಿ ಭಾಷಾಸಾಬ್ ನದಾಫ್

By

Published : May 10, 2019, 1:32 AM IST

ಬೆಂಗಳೂರು : ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಆರೋಪದಡಿ ವಿಜಯಪುರ ಜೈಲಿನಲ್ಲಿರುವ ಆರೋಪಿ ಭಾಷಾಸಾಬ್ ನದಾಫ್ ನನ್ನು ಬಾಡಿ ವಾರೆಂಟ್ ಮೇಲೆ ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆ ತಂದಿದ್ದಾರೆ.

ಭೀಮಾತೀರದ ಹಂತಕ ಚಡಚಣ ಸಹೋದರರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಭಾಷಾಸಾಬ್ ನದಾಫ್ ಅಂದಿನ ಪಿಎಸ್ಐ ಗೋಪಾಲ್ ಹಳ್ಳೂರಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಪುರೈಕೆ ಮಾಡಿದ್ದ ಎನ್ನಲಾಗಿತ್ತು. 2018ರ ಅಗಸ್ಟ್​​ನಲ್ಲಿ ಭಾಷಾಸಾಬ್​ನನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.

ಬೆಂಗಳೂರಿನಲ್ಲಿ ನಡೆದ ಶೂಟೌಟ್ ಪ್ರಕರಣವೊಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಶಂಕೆ ಹಿನ್ನೆಲೆಯಲ್ಲಿ ಬಾಡಿ ವಾರಂಟ್ ಮೇಲೆ ಬೆಂಗಳೂರಿಗೆ ಸಿಸಿಬಿ ಕರೆದುಕೊಂಡು ಬಂದಿದ್ದಾರೆ.

ABOUT THE AUTHOR

...view details