ಕರ್ನಾಟಕ

karnataka

ETV Bharat / state

ಫಿಂಗರ್ ಫ್ರಿಂಟ್ ಆ್ಯಪ್: 12 ವರ್ಷದ ಬಳಿಕ ಪತ್ತೆಯಾದ ಕೊಲೆ ಆರೋಪಿ - ​​ ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಕೊಲೆ ಆರೋಪಿ ಪೊಲೀಸರ ಫಿಂಗರ್​ ಪ್ರಿಂಟ್​ ಆ್ಯಪ್​ ಮೂಲಕ 12 ವರ್ಷದ ಬಳಿಕ ಪತ್ತೆಯಾಗಿದ್ದಾನೆ.

the-murder-accused-was-found-through-the-police-app
ಫಿಂಗರ್ ಫ್ರಿಂಟ್ ಆ್ಯಪ್ : 12 ವರ್ಷದ ಬಳಿಕ ಪತ್ತೆಯಾದ ಕೊಲೆ ಆರೋಪಿ

By

Published : Nov 16, 2022, 4:27 PM IST

ಬೆಂಗಳೂರು: 12 ವರ್ಷದ ನಂತರ ಕೊಲೆ ಆರೋಪಿಯೊಬ್ಬ ಪೊಲೀಸರ ಆ್ಯಪ್ ಮೂಲಕ ಪತ್ತೆಯಾಗಿದ್ದಾನೆ. ನೂತನ ತಂತ್ರಜ್ಞಾನ MCCTNS ಬೆರಳುಮುದ್ರೆ ಆಪ್ ಮುಖಾಂತರ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗಷ್ಟೇ M.CCTNS ಆ್ಯಪ್ ಬಳಕೆ ಮಾಡಲು ಪೊಲೀಸರು ಪ್ರಾರಂಭಿಸಿದ್ದರು. ಇದರಲ್ಲಿ ಪ್ರತಿ ಆರೋಪಿಯ ಫಿಂಗರ್​​ ಪ್ರಿಂಟ್​​ನ ಜೊತೆಗೆ ಆರೋಪಿಗಳ ಮಾಹಿತಿಯನ್ನು ಆಪ್ ನಲ್ಲಿ ನಮೂದಿಸಲಾಗಿತ್ತು. ಈ ಆ್ಯಪ್​ನ ಸಹಾಯದಿಂದ ಆರೋಪಿ ರಮೇಶ್​ನನ್ನು ಪತ್ತೆ ಹಚ್ಚಲಾಗಿದೆ. ಯಶವಂತಪುರ ಪಿಎಸ್​​​​ಐ ರಾಜು ಅವರು ರಾತ್ರಿ ಗಸ್ತಿನಲ್ಲಿದ್ದಾಗ ಅನುಮಾನಸ್ಫಾದವಾಗಿ ಓಡಾಡುತ್ತಿದ್ದ ರಮೇಶ್​ನ ಫಿಂಗರ್​ ಪ್ರಿಂಟ್ ಪರಿಶೀಲಿದಾಗ ಆರೋಪಿ ಮೇಲಿನ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣದ ಹಿನ್ನೆಲೆ: 2005ರಲ್ಲಿ ತಿಗಳರಪಾಳ್ಯದ ಬಾಲಾಜಿನಗರದಲ್ಲಿ ಶಂಕರಪ್ಪ ಎಂಬುವವರನ್ನು ಕೊಲೆ ಮಾಡಿ ಆರೋಪಿ ರಮೇಶ್​ ಜೈಲು ಸೇರಿದ್ದ. ಬಳಿಕ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ರಮೇಶ ಪೊಲೀಸರ ಕೈಗೂ ಸಿಗದೇ, ಕೋರ್ಟ್​​​ಗೂ ಹಾಜರಾಗದೇ ತಲೆಮರೆಸಿಕೊಂಡಿದ್ದ.

ಈ ಹಿನ್ನೆಲೆ 2010ರಲ್ಲಿ ರಮೇಶ ವಿರುದ್ದ ನ್ಯಾಯಾಲಯವು NDW (ಜಾಮೀನುರಹಿತ ವಾರೆಂಟ್) ಜಾರಿ ಮಾಡಿತ್ತು. ಸದ್ಯ 12 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಆ್ಯಪ್ ಮೂಲಕ ಪತ್ತೆಯಾಗಿದ್ದಾನೆ. ಸದ್ಯ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ :ಪತ್ರ ಬರೆದು ತ್ರಿವಳಿ ತಲಾಖ್: ಡೆಹ್ರಾಡೂನ್‌ನಲ್ಲಿ ವ್ಯಕ್ತಿ ವಿರುದ್ಧ ಪ್ರಕರಣ

ABOUT THE AUTHOR

...view details