ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ರಾಜೀನಾಮೆ ಕೊಡಲು ಹೊರಟ ಶಾಸಕರನ್ನು ತಡೆಯುವ ಕುರಿತು ಕಡೆಯ ಪ್ರಯತ್ನಗಳ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ ಚರ್ಚಿಸಿದ್ದಾರೆ.
ಡಿಕೆಶಿ ಎಂಟ್ರಿ ಕೊಟ್ಟಿದ್ದಾರೆ, ಕಾದು ನೋಡೋಣ: ಸಿದ್ದರಾಮಯ್ಯ - kannadanews
ರಾಜೀನಾಮೆ ಕೊಡಲು ಹೊರಟ ಶಾಸಕರ ಮನವೊಲಿಸಲು ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ಸರ್ಕಾರಕ್ಕೆ ಏನೂ ಆಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಪರಮೇಶ್ವರ್, ಈಶ್ವರ್ ಖಂಡ್ರೆ, ಜಮೀರ್ ಅಹ್ಮದ್, ಶಿವರಾಜ್ ತಂಗಡಗಿ, ರೋಷನ್ ಬೇಗ್ ಸಭೆಯಲ್ಲಿದ್ದರು. ಸಭೆ ನಂತರ ಮಾತನಾಡಿದ ಸಿದ್ದರಾಮಯ್ಯ, ರಾಜೀನಾಮೆ ಕೊಡಲು ಹೊರಟ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ, ಆದ್ರೆ ಸಿಗುತ್ತಿಲ್ಲ. ಡಿಕೆಶಿ ಎಂಟ್ರಿ ಕೊಟ್ಡಿದ್ದಾರೆ. ಕಾದು ನೋಡೋಣ. ಡಿಕೆಶಿ ನಾಲ್ಕು ಜನ ಶಾಸಕರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸರ್ಕಾರದ ಅಸ್ತಿತ್ವಕ್ಕೆ ಏನೂ ಆಗೋದಿಲ್ಲ. ಯಾರ ರಾಜೀನಾಮೆಯೂ ಅಂಗೀಕಾರ ಆಗಿಲ್ಲ. ವೇಣುಗೋಪಾಲ್ ಬರ್ತಿದ್ದಾರೆ. ಸರ್ಕಾರ ಏನೂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಎಲ್ಲರ ಮನವೊಲಿಸೋ ಪ್ರಯತ್ನ ಮಾಡಿದ್ದೇವೆ. ಶಾಸಕರು ಕೂಡ ಸ್ಪಂದನೆ ಮಾಡಿದ್ದಾರೆ. ನೋಡೋಣ ಏನಾಗುತ್ತೆ ಅಂತ. ರಾಮಲಿಂಗಾರೆಡ್ಡಿ ತಮ್ಮ ಮೇಲೆ ಗರಂ ಆಗಿರೋದು ಊಹಾಪೋಹ. ಅವರು ಯಾವ ಕಾರಣಕ್ಕಾಗಿ ರಾಜೀನಾಮೆ ಕೊಡಲು ಹೋಗಿದ್ದಾರೆ ಅಂತ ಆಲೋಚನೆ ಮಾಡಬೇಕಾಗಿದೆ. ನಮ್ಮ ಮುಂದೆ ಎಲ್ಲ ಆಯ್ಕೆಗಳು ಇವೆ ಎಂದರು.