ಬೆಂಗಳೂರು: ನಾಳೆ ಸಿಎಂ ಜೊತೆ ಸಭೆ ನಿಗದಿಯಾಗಿದ್ದು, ವೈಟ್ ಟ್ಯಾಪಿಂಗ್ ಪೂರ್ಣಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ವೈಟ್ ಟ್ಯಾಪಿಂಗ್ ಪೂರ್ಣಗೊಳಿಸುವಂತೆ ಬಿಬಿಎಂಪಿ ಮೇಯರ್ರಿಂದಲೇ ಸಿಎಂಗೆ ಪ್ರಸ್ತಾವನೆ
ನಾಳೆ ಸಿಎಂ ಜೊತೆ ಸಭೆ ನಿಗದಿಯಾಗಿದ್ದು, ವೈಟ್ ಟ್ಯಾಪಿಂಗ್ ಪೂರ್ಣಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಒಂದೆಡೆ ಕಾಂಗ್ರೆಸ್ ಅವಧಿಯಲ್ಲಿ ಆರಂಭಿಸಿದ್ದ ವೈಟ್ ಟ್ಯಾಪಿಂಗ್ನಲ್ಲಿ ಅಕ್ರಮ ನಡೆದಿದೆಯೆಂದು ಸರ್ಕಾರ ತನಿಖೆಗೆ ಒಪ್ಪಿಸಿದೆ. ಪರಿಣಾಮ ನಗರದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ವೈಟ್ ಟ್ಯಾಪಿಂಗ್ ಕಾಮಗಾರಿಯಿಂದ ನಗರದ ಜನ ಪರದಾಡುವಂತಾಗಿತ್ತು. ಈ ಬಗ್ಗೆ ಪಾಲಿಕೆ ಸದಸ್ಯರು ಮೇಯರ್ ಗೌತಮ್ ಕುಮಾರ್ಗೆ ಒತ್ತಡ ಹಾಕಿದ್ದಾರೆ. ಇನ್ನು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಮೇಲ್ಸೇತುವೆಗಳ ನಿರ್ವಹಣೆಯನ್ನು ಆರಂಭಿಸಲಾಗುವುದು. ಸುಮನಹಳ್ಳಿ ಮೇಲ್ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವೇ ಎಂಬ ವರದಿ ನಾಳೆಯೊಳಗೆ ಕೈಸೇರಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.