ಕರ್ನಾಟಕ

karnataka

ETV Bharat / state

ಮೇಯರ್ ಫಂಡ್ ಬಿಡುಗಡೆಗೆ ಶಾಸಕರ ಅಡ್ಡಿ ಆರೋಪ: ಮಹಾ ಪೌರರ ಸಮಜಾಯಿಷಿ ಹೀಗಿದೆ

ಬೆಂಗಳೂರಿನ ಅಭಿವೃದ್ಧಿಗೆ ಮೇಯರ್ ಅನುದಾನದಲ್ಲಿ ವಿವೇಚನೆಗೆ ಅಂತ ಮೀಸಲಿಡುವ ಹಣದ ವಿಚಾರವಾಗಿ ಗಂಭೀರ ಆರೋಪ ಕೇಳಿ ಬಂದಿದೆ.

By

Published : Jul 3, 2019, 7:39 AM IST

ಮೇಯರ್ ಫಂಡ್ ಬಿಡುಗಡೆಗೆ ಶಾಸಕರ ಅಡ್ಡಿ ಆರೋಪ

ಬೆಂಗಳೂರು:ಬೆಂಗಳೂರಿನ ಅಭಿವೃದ್ಧಿಗೆ ಮೇಯರ್ ಅನುದಾನದಲ್ಲಿ ವಿವೇಚನೆಗೆ ಅಂತ ಮೀಸಲಿಡುವ ಹಣದ ವಿಚಾರವಾಗಿ ಗಂಭೀರ ಆರೋಪ ಕೇಳಿ ಬಂದಿದೆ.

ಬೆಂಗಳೂರು ಅಭಿವೃದ್ಧಿಗೆ ಮೇಯರ್ ಅನುದಾನದಲ್ಲಿ ಒಂದಿಷ್ಟು ಅವರ ವಿವೇಚನೆಗೆ ಅಂತಾ ಹಣವನ್ನು ಮೀಸಲಿಡಲಾಗುತ್ತದೆ. ಆ ಹಣವನ್ನು ಮೇಯರ್ ಯಾವ ವಾರ್ಡ್​​ನಲ್ಲಿ ಕೆಲಸಕ್ಕೆ ಹಣ ಅವಶ್ಯಕತೆ ಇರುತ್ತೋ ಅಂಥಹ ವಾರ್ಡ್​ಗಳಿಗೆ ಅನುದಾನ ನೀಡಲಾಗುತ್ತಿದೆ. ಸದ್ಯ ಈ ವಿಚಾರವಾಗಿ ಇದೀಗ ಶಾಸಕರ ಮೇಲೊಂದು ಗಂಭೀರ ಆರೋಪ ಕೇಳಿ ಬಂದಿದೆ. ಆರ್.ಆರ್.ನಗರ ಶಾಸಕ ಶಾಸಕ ಮುನಿರತ್ನ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಭೈರತಿ ಬಸವರಾಜು ಅವರ ಕ್ಷೇತ್ರದಲ್ಲಿರುವ ಬಿಜೆಪಿ ಪಕ್ಷದ ಪಾಲಿಕೆ ಸದಸ್ಯರ ವಾರ್ಡ್ಗಳಿಗೆ ಮೇಯರ್ ಅನುದಾನವನ್ನು ತಮ್ಮ ಅನುಮತಿ ಇಲ್ಲದೆ ಬಿಡುಗಡೆ ಮಾಡುವಂತಿಲ್ಲ ಅಂತ ಮೌಖಿಕ ಆದೇಶ ನೀಡಿದ್ದಾರೆ ಎಂದು ಜೆಪಿ ಪಾರ್ಕ್ ವಾರ್ಡ್ ಬಿಜೆಪಿ ಸದಸ್ಯೆ ಮಮತಾ ವಾಸುದೇವ್ ಆರೋಪಿಸುತ್ತಿದ್ದಾರೆ.

ಮೇಯರ್ ಫಂಡ್ ಬಿಡುಗಡೆಗೆ ಶಾಸಕರ ಅಡ್ಡಿ ಆರೋಪ

ಈ ಕುರಿತು ಪ್ರತಿಕ್ರಿಯಿಸಿರುವ ಮೇಯರ್​ ಗಂಗಾಂಬಿಕೆ ಇಂಥಹ ಸುಳ್ಳು ಆರೋಪಗಳನ್ನು ಅದ್ಯಾಕೆ ಮಾಡ್ತಾರೋ ಗೊತ್ತಿಲ್ಲ. ನನ್ನ ಬಳಿ ಅನುದಾನ ಬೇಕು ಅಂತಾ ಯಾರೂ ಬಂದಿಲ್ಲ. ಯಾವುದೇ ಕಡತಗಳೂ ಬಂದಿಲ್ಲ. ಹಣ ಕೇಳದೇ ಆರೋಪ ಮಾಡಿದರೆ ಹೇಗೆ..? ಮೇಯರ್ ಸ್ಥಾನದಲ್ಲಿದ್ದಾಗ ಎಲ್ಲಾ ಪಕ್ಷಗಳೂ ನಮಗೆ ಒಂದೇ. ಹಾಗಾಗಿ ಬಿಜೆಪಿ ಶಾಸಕರು, ಬಿಜೆಪಿ ಪಾಲಿಕೆ ಸದಸ್ಯರು ಇರುವ ವಾರ್ಡ್ ಗಳಿಗೂ ಹಣ ನೀಡಲಾಗಿದೆ, ಯಾವುದೇ ತಾರತಮ್ಯ ಇಲ್ಲ ಎಂದ್ರು.

ABOUT THE AUTHOR

...view details