ಬೆಂಗಳೂರು: ಮೇಯರ್ ಗಂಗಾಂಬಿಕೆ ಅವರ ಅಧಿಕಾರ ಅವಧಿ ಮುಗಿಯುವ ಮೊದಲೇ ಸರ್ಕಾರಿ ವಾಹನವನ್ನು ವಾಪಾಸ್ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಮೇಯರ್ ವೈಯಕ್ತಿಕ ವಾಹನದಲ್ಲಿ ಓಡಾಡುವ ಪರಿಸ್ಥಿತಿ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಅಧಿಕಾರಿಗಳ ನಿಯಮವೇ ಅರ್ಥವಾಗೋದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಅಧಿಕಾರವಧಿ ಮುಗಿಯುವ ಮೊದಲೇ ಕಾರು ವಾಪಸ್: ಮೇಯರ್ ಅಸಮಾಧಾನ!
ಮೇಯರ್ ಗಂಗಾಂಬಿಕೆ ಅವರ ಅಧಿಕಾರ ಅವಧಿ ಮುಗಿಯುವ ಮೊದಲೇ ಸರ್ಕಾರಿ ವಾಹನವನ್ನು ವಾಪಾಸ್ ತೆಗೆದುಕೊಳ್ಳಲಾಗಿದ್ದು, ಅಧಿಕಾರಿಗಳ ನಿಯಮವೇ ಅರ್ಥವಾಗೋದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಉಪಚುನಾವಣೆ ಘೋಷಣೆಯಾದ ಹಿನ್ನೆಲೆ ಮಾದರಿ ನೀತಿ ಸಂಹಿತೆಯಂತೆ ಮೇಯರ್, ಆಡಳಿತ ಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಸರ್ಕಾರಿ ಕಾರ್ ಗಳನ್ನು ಬಳಸದಂತೆ ವಾಪಾಸ್ ಪಡೆದಿದ್ದಾರೆ. ಆದರೆ ಇದೇನು ಜನರಲ್ ಎಲೆಕ್ಷನ್ ಅಲ್ಲ. ಉಪಚುನಾವಣೆ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ್ದಾದರೂ ವಾಹನ ಹಿಂತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಸಂಧರ್ಭದಲ್ಲೂ ಒಂದೂವರೆ ತಿಂಗಳು ವಾಹನ ಇರಲಿಲ್ಲ. ಇದರಿಂದ ದಿನ ನಿತ್ಯದ ಕೆಲಸ ಮಾಡಲು ಫಜೀತಿಯಾಗುತ್ತಿತ್ತು. ಸೀಮಿತ ಕ್ಷೇತ್ರಗಳಲ್ಲಿ ಮಾತ್ರ ಉಪಚುನಾವಣೆ ಎಂಬ ಬಗ್ಗೆ ಸ್ಪಷ್ಟನೆ ಕೊಟ್ಟರೂ ಸಹ ಕಾರು ಕೊಟ್ಟು ಬಿಡಬೇಕಾ? ಬೇಡವಾ? ಎಂಬ ಬಗ್ಗೆ ಗೊಂದಲವಿದೆ. ಗೊಂದಲ ಮುಗಿಯುವಷ್ಟರಲ್ಲಿ ನನ್ನ ಅವಧಿಯೇ ಮುಗಿದು ಹೋಗುತ್ತದೆ ಎಂದು ಆಕ್ರೋಶ ಹೊರಹಾಕಿದರು.