ಕರ್ನಾಟಕ

karnataka

ETV Bharat / state

ಪಿಯು ಬೋರ್ಡ್ ಬಳಿ ಉಪನ್ಯಾಸಕರ ಧರಣಿ: ಸ್ಥಳಕ್ಕೆ ಆಗಮಿಸಿದ ಹೆಚ್.ಡಿ ಕುಮಾರಸ್ವಾಮಿ..‌ - protes news

ಉಪನ್ಯಾಸಕರ ನೇಮಕಾತಿ 2015ರಿಂದ ಶುರುವಾಗಿದೆ. ಪರೀಕ್ಷೆ ದಿನಾಂಕ, ಮುಂದೂಡಿಕೆ ಹೀಗೆ ಒಂದೂವರೆ‌ ಸಾವಿರ ಉಪನ್ಯಾಸಕರ ನೇಮಕಾತಿ ನಡೆಯುತ್ತಲೇ ಇದೆ. ‌ಸಂಕಷ್ಟದಲ್ಲಿರುವ ಇವರೆಲ್ಲರಿಗೂ ಎಲ್ಲಾ ಸಂದರ್ಶನ ಮುಗಿದಿದೆ. ಆಗಸ್ಟ್​ನಲ್ಲಿ ಕೊಡಬೇಕಾಗಿದ್ದ ಆರ್ಡರ್ ಕಾಪಿ‌ ಇನ್ನೂ ಕೊಟ್ಟಿಲ್ಲ. ಒಂದು ವರ್ಷದೊಳಗೆ ನೇಮಕಾತಿ‌ ಆಗದಿದ್ದರೆ ಆರ್ಡರ್ ಕ್ಯಾನ್ಸಲ್ ಆಗುವ ನಿಯಮವಿದೆ. ಈಗ ಆರ್ಡರ್ ಸ್ಥಗಿತವಾಗಿದ್ದು ಇವರೆಲ್ಲರೂ 5 ವರ್ಷಗಳಿಂದ ಆತಂಕದಲ್ಲಿದ್ದಾರೆ.

HD kumaraswamy
ಹೆಚ್.ಡಿ ಕುಮಾರಸ್ವಾಮಿ

By

Published : Oct 13, 2020, 3:44 PM IST

ಬೆಂಗಳೂರು:ಮಲ್ಲೇಶ್ವರಂನ ಪಿಯು ಬೋರ್ಡ್ ಬಳಿಹೊಸದಾಗಿ ನೇಮಕಗೊಂಡಿರುವ 1,200 ಮಂದಿ ಉಪನ್ಯಾಸಕರು ಅಂತಿಮ ನೇಮಕಾತಿ ಆದೇಶ ಪತ್ರ ನೀಡುವಂತೆ ಆಗ್ರಹಿಸಿ, ಧರಣಿ ಮುಂದುವರೆಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಭೇಟಿ ನೀಡಿ, ಸಮಸ್ಯೆ ಆಲಿಸಿದರು.‌

ಬಳಿಕ ಮಾತನಾಡಿದ ಅವರು, ಉಪನ್ಯಾಸಕರ ನೇಮಕಾತಿ 2015ರಿಂದ ಶುರುವಾಗಿದೆ. ಪರೀಕ್ಷೆ ದಿನಾಂಕ, ಮುಂದೂಡಿಕೆ ಹೀಗೆ ಒಂದೂವರೆ‌ ಸಾವಿರ ಉಪನ್ಯಾಸಕರ ನೇಮಕಾತಿ ನಡೆಯುತ್ತಲೇ ಇದೆ. ‌ಸಂಕಷ್ಟದಲ್ಲಿರುವ ಇವರೆಲ್ಲರಿಗೂ ಎಲ್ಲಾ ಸಂದರ್ಶನ ಮುಗಿದಿದೆ. ಕಳೆದ ಆಗಸ್ಟ್​ನಲ್ಲಿ ಕೊಡಬೇಕಾಗಿದ್ದ ಆರ್ಡರ್ ಕಾಪಿ‌ ಇನ್ನೂ ಕೊಟ್ಟಿಲ್ಲ. ಒಂದು ವರ್ಷದೊಳಗೆ ನೇಮಕಾತಿ‌ ಆಗದಿದ್ದರೆ ಆರ್ಡರ್ ಕ್ಯಾನ್ಸಲ್ ಆಗುವ ನಿಯಮವಿದೆ. ಈಗ ಆರ್ಡರ್ ಸ್ಥಗಿತವಾಗಿದ್ದು ಇವರೆಲ್ಲರೂ ಆತಂಕದಲ್ಲಿದ್ದಾರೆ.

ಕೋವಿಡ್​ನಿಂದ ಕಾಲೇಜುಗಳು ಮುಚ್ಚಿದೆ, ಹೊಸ ಆದೇಶ ನಂತರ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಹೇಳುತ್ತಿದೆ. ಆರ್ಡರ್ ಈಗ ಕೊಡಿ, ಆಮೇಲೆ ಜಾಯಿನ್ ಆಗ್ತಿವಿ ಅಂತ ನ್ಯಾಯಯುತವಾಗಿ ಬೇಡಿಕೆ ಇಟ್ಟಿದ್ದಾರೆ. ನಾನು ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ. ಇವರೇನು ಲೆಕ್ಚರ್ ಪೋಸ್ಟ್ ಈಗಲೇ ಕೊಡಿ, ಸಂಬಳ ಕೊಡಿ ಎಂದು ಕೇಳುತ್ತಿಲ್ಲ. ಕೋವಿಡ್ ಸಂಬಂಧಿತ ಕೆಲಸಕ್ಕೂ ಇವರು ತಯಾರಿದ್ದಾರೆ. ಆರ್ಡರ್ ಕಾಪಿ ಅಷ್ಟೇ ಕೇಳುತ್ತಿದ್ದಾರೆ, ಸರ್ಕಾರಕ್ಕೆ ಸಲಹೆ ನೀಡಿದ್ದೇನೆ. ಕೆಲಸದ ಆದೇಶ ನೀಡಲು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details