ಕರ್ನಾಟಕ

karnataka

ETV Bharat / state

ಅಂಬರೀಶ್ ಅಂತಿಮ ಯಾತ್ರೆ ಸವಾಲಾಗಿತ್ತು, ಸಮರ್ಥವಾಗಿ ಎದುರಿಸಿದ ತೃಪ್ತಿ- ಎಲ್ರಿಗೂ ಥ್ಯಾಂಕ್ಸ್‌ ಎಂದ ಟಿ.ಸುನೀಲ್‌ಕುಮಾರ್ - Kannada news

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಟಿ.ಸುನೀಲ್ ಕುಮಾರ್ ಅವರು ಇಂದು ಅಲೋಕ್‌ ಕುಮಾರ್ ಅವರಿಗೆ ಆಧಿಕಾರ ಹಸ್ತಾಂತರಿಸಿದ್ದಾರೆ. ಕಳೆದ ಎರಡು ವರ್ಷಗಳ ಕಾಲ ಆಯುಕ್ತರಾಗಿದ್ದ ವೇಳೆ ತಮಗಾದ ಅನುಭವಗಳ ಬಗ್ಗೆ ಸುನೀಲ್‌ಕುಮಾರ್ ಅವರು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.

ನೇಮಕಾತಿ ವಿಭಾಗದ ಹೆಚ್ಚುವರಿ ಡಿಜಿಪಿ. ಟಿ.ಸುನೀಲ್ ಕುಮಾರ್

By

Published : Jun 17, 2019, 8:12 PM IST

ಬೆಂಗಳೂರು :ಕಳೆದ ಎರಡು ವರ್ಷಗಳಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಟಿ.ಸುನೀಲ್ ಕುಮಾರ್ ಅವರು ಇಂದು ಅಲೋಕ್‌ ಕುಮಾರ್ ಅವರಿಗೆ ಆಧಿಕಾರ ಹಸ್ತಾಂತರಿಸಿದ್ದಾರೆ. ಕಳೆದ ಎರಡು ವರ್ಷಗಳ ಕಾಲ ಆಯುಕ್ತರಾಗಿದ್ದ ವೇಳೆ ತಮಗಾದ ಅನುಭವಗಳ ಬಗ್ಗೆ ಸುನೀಲ್ ಕುಮಾರ್ ಅವರು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.

ಅಲೋಕ್‌ ಕುಮಾರ್ ಅವರಿಗೆ ಬೆಂಗಳೂರು ಪೊಲೀಸ್‌ ಕಮಿಷನರ್ ಅಧಿಕಾರ ಹಸ್ತಾಂತರಿಸಿದ ಬಳಿದ ಮಾತನಾಡಿದ ಅವರು, ಸರ್ಕಾರ ನನಗೆ ಅವಕಾಶ ಕೊಟ್ಟಿದಕ್ಕೆ ಧನ್ಯವಾದಗಳು. ನಾನು ನನ್ನ ಸಹೋದ್ಯೊಗಿಳು ಸೇರಿ ಆದಷ್ಟು ಅಪರಾಧ ಪ್ರಕರಣಗಳನ್ನು ಇಳಿಮುಖ ಮಾಡಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಕ್ಕೆ ಸಂತೋಷವಿದೆ. ಮಹಾನಗರ ಜನತೆ ನನಗೆ ತುಂಬಾ ಬೆಂಬಲ ಕೊಟ್ಟಿದ್ದಾರೆ, ಅವರಿಗೂ ಧನ್ಯವಾದಳನ್ನು ಸಲ್ಲಿಸುತ್ತೇನೆ ಎಂದರು.

ನೇಮಕಾತಿ ವಿಭಾಗದ ಹೆಚ್ಚುವರಿ ಡಿಜಿಪಿ ಟಿ.ಸುನೀಲ್ ಕುಮಾರ್ ಜತೆ ಈಟಿವಿ..

ನನ್ನ ಪ್ರತಿ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗೆ ಧನ್ಯವಾದಗಳು. ಆದಷ್ಟು ಅಪರಾಧ ಇಳಿಕೆ ಮಾಡುವ‌ ಕ್ರಮ ಕೈಗೊಂಡಿದ್ದೇನೆ. ಐಪಿಎಲ್ ಮ್ಯಾಚ್, ಬಂದ್, ಭಯೋತ್ಪಾದಕ ಕೃತ್ಯಗಳನ್ನು ತಡೆದಿದ್ದೇವೆ. ನಟ ಅಂಬರೀಶ್ ಸತ್ತ ದಿನದಂದೇ ನನಗೆ ಬಹಳ ಸವಾಲು ಆಗಿತ್ತು. ಸುಮಾರು 13 ಕಿ.ಮೀ‌ ಅಂತಿಮ ಯಾತ್ರೆ ನಡೆಸಿದ್ದು ಸವಾಲಿನ ಸಂಗತಿಯಾಗಿತ್ತು ಎಂದು ಅನುಭವ ಹಂಚಿಕೊಂಡರು.

ABOUT THE AUTHOR

...view details