ಕರ್ನಾಟಕ

karnataka

ETV Bharat / state

ಬಾಲಕನ ‌ಕಿಡ್ನಾಪ್​ ಪ್ರಕರಣ ಸುಖಾಂತ್ಯ.. ಹೇಗಿತ್ತು ಗೊತ್ತಾ ಪೊಲೀಸರ ಸಿನಿಮಾ ಶೈಲಿಯ ಕಾರ್ಯಾಚರಣೆ?

ಬಾಲಕನೋರ್ವನನ್ನು ಅಪಹರಣ ಮಾಡಿ ಆತನ ಅಪ್ಪ-ಅಮ್ಮನಿಗೆ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಖದೀಮರನ್ನು ಸಿನಿಮೀಯ ಶೈಲಿಯಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Nepal-based Gaurav Singh arrested
ನೇಪಾಳ ಮೂಲದ ಗೌರವ್ ಸಿಂಗ್ ಬಂಧಿತ ಆರೋಪಿ

By

Published : Jun 8, 2022, 7:22 PM IST

ಬೆಂಗಳೂರು:ಬಾಲಕನನ್ನು‌ ಅಪಹರಿಸಿ 50 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಕಾರ್ಯಪ್ರವೃತ್ತರಾದ ಹೆಣ್ಣೂರು ಠಾಣೆಯ ಪೊಲೀಸರು, ರಾತ್ರೋರಾತ್ರಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಬಾಲಕನನ್ನು ರಕ್ಷಿಸಿ ಪೋಷಕರ ಮಡಿಲಿಗೆ‌ ಒಪ್ಪಿಸುವ ಮೂಲಕ‌ ಪ್ರಕರಣ ಸುಖಾಂತ್ಯ ಕಂಡಿದೆ.

ನೇಪಾಳ ಮೂಲದ ಗೌರವ್ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಆರೋಪಿಯ ಸಂಬಂಧಿಯಾಗಿರುವ ದುರ್ಗಾ ಹಾಗೂ ಮಂಗಿತಾ ಎಂಬುವರು ಭಾಗಿಯಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಪೊಲೀಸರು‌‌ ಶೋಧ‌ ಕಾರ್ಯ ನಡೆಸುತ್ತಿದ್ದಾರೆ. ಹೊರಮಾವಿನ ಆಗರದಲ್ಲಿ ಬಾಲಕನ ತಂದೆ-ತಾಯಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಬಾಲಕನ ಅಪ್ಪ ಬಿಎಂಟಿಸಿ ಬಸ್ ಚಾಲಕನಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಂಗಳವಾರ ಸಂಜೆ ಮನೆ ಬಳಿ ಬಾಲಕ ಆಟವಾಡುವಾಗ ಮಂಗಿತಾ ಎಂಬ ಮಹಿಳೆ ಆತನನ್ನು ಮೇನ್​ರೋಡ್​ವರೆಗೂ ಕರೆದುಕೊಂಡು ಹೋಗಿದ್ದಾಳೆ.

50 ಲಕ್ಷ ರೂ.ಗೆ ಡಿಮ್ಯಾಂಡ್​​:ಅಲ್ಲಿಂದ ದುರ್ಗಾ ಎಂಬ ಮಹಿಳೆ ಸ್ವಿಮ್ಮಿಂಗ್​ ಪೂಲ್​ಗೆ ಹೋಗೋಣ ಬಾ ಎಂದು‌ ಕರೆದೊಯ್ದಿದ್ದಾಳೆ‌‌. ಅಲ್ಲಿಂದ ಆಟೋ‌‌ ಮೂಲಕ ಜಿಗಣಿಯ ಜೆ‌.ಆರ್.ಫಾರ್ಮ್ ನಲ್ಲಿ‌ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಸಂಬಂಧಿಕ ಗೌರವ್ ಸಿಂಗ್ ಬಳಿ ಒಪ್ಪಿಸಿದ್ದಾಳೆ.‌ ನಿರ್ಜನ ಪ್ರದೇಶವಾಗಿದ್ದರಿಂದ ಫಾರ್ಮ್ ಹೌಸ್​ ಮಾಲೀಕನು ಸೆಕ್ಯೂರಿಟಿ ಗಾರ್ಡ್​ ಆಗಿ ಗೌರವ್​ ಸಿಂಗ್​ನನ್ನು ನೇಮಿಸಿದ್ದರು. ಕಿಡ್ನ್ಯಾಪ್ ಮಾಡಿ ಬಾಲಕನನ್ನು ಒತ್ತೆಯಾಳುವನ್ನಾಗಿ ಮಾಡಿಕೊಂಡ ಗೌರವ್ ಪೋಷಕರಿಗೆ‌ ಕರೆ ಮಾಡಿ, ನಿಮ್ಮ ಮಗನನ್ನು ಕಿಡ್ನ್ಯಾಪ್‌ ಮಾಡಲಾಗಿದೆ. ಮಗನನ್ನು ಸುರಕ್ಷಿತವಾಗಿ ಬಿಡಬೇಕಾದರೆ 50 ಲಕ್ಷ ರೂ. ಕೊಡಬೇಕೆಂದು ಡಿಮ್ಯಾಂಡ್ ಮಾಡಿದ್ದ. ಆತಂಕಗೊಂಡ‌ ಪೋಷಕರು ಹೆಣ್ಣೂರು ಪೊಲೀಸರಿಗೆ ಸುದ್ದಿ‌ ಮುಟ್ಟಿಸಿದ್ದಾರೆ.

ಇದನ್ನೂ ಓದಿ:ಮಂಗಳೂರಿಗೆ ಸಂದರ್ಶನಕ್ಕಾಗಿ ಬಂದಿದ್ದ ಯುವತಿಗೆ ಕಿರುಕುಳ: ಆರೋಪಿ ಬಂಧನ

ಕಾರ್ಯಪ್ರವೃತ್ತರಾದ ಪೊಲೀಸರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಎರಡು ತಂಡ ರಚಿಸಿ ಫೀಲ್ಡ್ ಗಿಳಿದಿದ್ದಾರೆ. ಒಂದು ತಂಡ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದರೆ ಮತ್ತೊಂದು ತಂಡ ಕರೆ ಬಂದಿದ್ದ ಅಪಹರಣಕಾರರ ಜಾಡಿನ ಪತ್ತೆಗೆ ಮುಂದಾಗಿದ್ದರು. ಜಿಗಣಿ ಬಳಿಯ ಫಾರ್ಮ್ ಹೌಸ್​​ನಲ್ಲಿ ಅಪಹರಣಕಾರರು ಇರುವ ಬಗ್ಗೆ ಮಾಹಿತಿ ಅರಿತ‌ ಇನ್ ಸ್ಪೆಕ್ಟರ್ ವಸಂತ ಕುಮಾರ್ ಆ್ಯಂಡ್ ಟೀಮ್‌ ಸ್ಥಳಕ್ಕೆ ದೌಡಾಯಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಬಾಲಕನನ್ನ ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ABOUT THE AUTHOR

...view details