ಕರ್ನಾಟಕ

karnataka

ETV Bharat / state

'ದಿ ಕಾಶ್ಮೀರ್​ ಫೈಲ್ಸ್​' ಚಿತ್ರ ವೀಕ್ಷಿಸಲು ಮಂತ್ರಿಮಾಲ್​ಗೆ ಬಸ್​ನಲ್ಲಿ ಬಂದ ಶಾಸಕರು, ಸದಸ್ಯರು - ದಿ ಕಾಶ್ಮೀರ ಫೈಲ್

ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ವೀಕ್ಷಿಸಲು ಮಂತ್ರಿ ಮಾಲ್​ಗೆ ಆಗಮಿಸಿದ ಶಾಸಕರು ಮತ್ತು ಪರಿಷತ್ ಸದಸ್ಯರು ಸಂಜೆ 6:30ರ ಚಿತ್ರ ಪ್ರದರ್ಶನಕ್ಕೆ ವಿಶೇಷ ಬಸ್​ನಲ್ಲಿ ಬಂದಿಳಿದರು.

The Kashmir File film view by council members and MLAs
ಪರಿಷತ್ ಸದಸ್ಯರು ಮತ್ತು ಶಾಸಕರಿಂದ ದಿ ಕಾಶ್ಮೀರ ಫೈಲ್ ಚಿತ್ರ ವೀಕ್ಷಣೆ

By

Published : Mar 15, 2022, 8:23 PM IST

Updated : Mar 15, 2022, 9:16 PM IST

ಬೆಂಗಳೂರು:ವಿಧಾನಸಭೆಯ ಶಾಸಕರು ಮತ್ತು ವಿಧಾನ ಪರಿಷತ್​ ಸದಸ್ಯರೆಲ್ಲರೂ ಇಂದು 'ದಿ ಕಾಶ್ಮೀರ್​ ಫೈಲ್ಸ್​' ಚಿತ್ರ ವೀಕ್ಷಣೆಗಾಗಿ ನಗರದ ಮಂತ್ರಿ ಮಾಲ್​ಗೆ ಆಗಮಿಸಿದರು. ಈ ವೇಳೆ ಪೊಲೀಸರು ಹೈ ಅಲರ್ಟ್ ಇದ್ದು, ಟ್ರಾಫಿಕ್​ ನಿಯಂತ್ರಿಸುತ್ತಿದ್ದಾರೆ.

ಪರಿಷತ್ ಸದಸ್ಯರು ಮತ್ತು ಶಾಸಕರಿಂದ ದಿ ಕಾಶ್ಮೀರ ಫೈಲ್ ಚಿತ್ರ ವೀಕ್ಷಣೆ

ಸಂಜೆ 6:30ರ ಚಿತ್ರ ಪ್ರದರ್ಶನಕ್ಕೆ ಶಾಸಕರು ಎರಡು ಬಸ್ಸಿನಲ್ಲಿ ಆಗಮಿಸಿದ್ದಾರೆ. ಸಿನಿಮಾ ವೀಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವ ಸಾಧ್ಯತೆಯಿದೆ.

ಸಿನಿಮಾ ವೀಕ್ಷಣೆಗೆ ಶಾಸಕರ ಜೊತೆ ಬಸ್ಸಿನಲ್ಲಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಜಿ ಸಚಿವ ಲಕ್ಷ್ಮಣ್ ಸವದಿ, ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಮಾಧುಸ್ವಾಮಿ, ಪ್ರಭು ಚೌವ್ಹಾಣ್, ಶಾಸಕರಾದ ಎಸ್, ಆರ್ ವಿಶ್ವನಾಥ್, ರೇಣುಕಾಚಾರ್ಯ, ಬಸವರಾಜ ಮತ್ತಿಮನಿ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ಸಿನಿಮಾ ವೀಕ್ಷಣೆಗೆ ಬಂದಿದ್ದಾರೆ.

ಇದನ್ನೂ ಓದಿ:ಬ್ಯಾಂಕ್​ಗಳಲ್ಲಿ ಕನ್ನಡ ಕಡೆಗಣಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ನಾಗಾಭರಣ ಎಚ್ಚರಿಕೆ

Last Updated : Mar 15, 2022, 9:16 PM IST

ABOUT THE AUTHOR

...view details