ಬೆಂಗಳೂರು : ಕೋವಿಡ್- 19 ಸಂಕಷ್ಟದ ಸಂದರ್ಭದಲ್ಲಿ ಕಷ್ಟದಲ್ಲಿರುವ ಬಡವರಿಗೆ ನೆರವಾಗಲಿ ಎಂದು ಮಹದೇವಪುರದ ಶೀಗೆಹಳ್ಳಿ ಸಮೀಪದ ಫುಟ್‌ಪಾತ್ ಮೇಲೆ ದಾನಿಗಳ ಮತ್ತು ಬಡವರ ಸೇತುವಾಗಿ ಆರಂಭಿಸಿದ ಕರುಣಾ ಗೋಡೆ ಎನ್ನುವ ಯೋಜನೆ ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯಗೂಡಾಗಿದೆ.
ಫುಟ್‌ಪಾತ್ ಮೇಲಿನ ಗೋಡೆಯಲ್ಲಿ ನಿರ್ಮಿಸಿರುವ ರ್ಯಾಪ್ ಬಳಿ ಬಟ್ಟೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿವೆ. ಬಳಸದೇ ಮನೆಯಲ್ಲಿ ಹಾಳಾಗುತ್ತಿರುವ ಅಗತ್ಯವಿಲ್ಲದ ವಸ್ತುಗಳಿದ್ದರೆ ಅದನ್ನು ದಾನಿಗಳು ತಂದು ಇಲ್ಲಿ ಇಡಲು ಅವಕಾಶ ಕಲ್ಪಿಸಲಾಗಿತ್ತು. ಅಗತ್ಯವಿದ್ದ ಬಡವರು ಅದನ್ನು ಬಳಕೆಗೆ ಕೊಂಡು ಹೋಗಲು ಅನುವು ಮಾಡಿಕೊಡಲಾಗಿತ್ತು. ಅದರಂತೆ ದಾನಿಗಳು ಬೃಹತ್ ಪ್ರಮಾಣದಲ್ಲಿ ಹಳೆಯ ಬಟ್ಟೆಗಳನ್ನು ರ್ಯಾಪ್‌ನಲ್ಲಿ ತಂದು ಇರಿಸಿದ್ದು, ಯಾರೂ ಕೂಡ ಕೊಂಡು ಹೋಗಿಲ್ಲ ಪರಿಣಾಮ ಬಟ್ಟೆ ಇನ್ನಿತರ ವಸ್ತುಗಳು ಗಾಳಿ ಮಳೆಗೆ ಒದ್ದೆಯಾಗಿ ಚೆಲ್ಲಾಪಿಲ್ಲಿಯಾಗಿ ರ್ಯಾಪ್‌ನಿಂದ ಕೆಳಗೆ ಹರಡಿ ಬಿದ್ದುಕೊಂಡಿವೆ.