ಕರ್ನಾಟಕ

karnataka

ETV Bharat / state

ವಿವಾದಿತ ಭೂಸುಧಾರಣೆ 2ನೇ ತಿದ್ದುಪಡಿ ವಿಧೇಯಕಕ್ಕೆ ಪರ್ಯಾಲೋಚನೆ - Karnataka Land Reforms

ಮೊನ್ನೆ ವಿವಾದಿತ ವಿಧೇಯಕವನ್ನು ಆರ್.ಅಶೋಕ್ ಮಂಡಿಸಿದ್ದರು. ಆದರೆ ವಿಧೇಯಕದ ಮೇಲಿನ ಚರ್ಚೆ ಸಾಧ್ಯವಾಗಿರಲಿಲ್ಲ. ಕೊನೆಯ ಕ್ಷಣದಲ್ಲಿ ಆರ್.ಅಶೋಕ್ ವಿಧೇಯಕವನ್ನು ಪರ್ಯಾಲೋಚಿಸಲು ಮುಂದಾದರು. ಈ ಸಂದರ್ಭ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಶಾಸಕರು ಸದನದಿಂದ ಹೊರಹೋಗಿದ್ದರು.

vidhansoudh
ವಿಧಾನಸೌಧ

By

Published : Sep 26, 2020, 5:02 AM IST

Updated : Sep 26, 2020, 6:24 AM IST

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಕೃಷಿಕರಲ್ಲದವರು ಕೃಷಿ ಜಮೀನು ಖರೀದಿಸುವ ವಿವಾದಿತ ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಪರ್ಯಾಲೋಚಿಸಲು ಮುಂದಾದರು.

ಮೊನ್ನೆ ವಿವಾದಿತ ವಿಧೇಯಕವನ್ನು ಆರ್.ಅಶೋಕ್ ಮಂಡಿಸಿದ್ದರು. ಆದರೆ ವಿಧೇಯಕದ ಮೇಲಿನ ಚರ್ಚೆ ಸಾಧ್ಯವಾಗಿರಲಿಲ್ಲ. ಕೊನೆಯ ಕ್ಷಣದಲ್ಲಿ ಆರ್.ಅಶೋಕ್ ವಿಧೇಯಕವನ್ನು ಪರ್ಯಾಲೋಚಿಸಲು ಮುಂದಾದರು. ಈ ಸಂದರ್ಭ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಶಾಸಕರು ಸದನದಿಂದ ಹೊರಹೋಗಿದ್ದರು.

2020ನೇ ಸಾಲಿನ ಕರ್ನಾಟಕ ಭೂ ಸುಧಾರಣೆಗಳ ವಿಧೇಯಕವು 1961ರ ಅಧಿನಿಯಮ 79ಎ, 79ಬಿ, 79ಸಿ ಪ್ರಕರಣಗಳನ್ನು ಬಿಟ್ಟುಬಿಡಲು ಪ್ರಸ್ತಾಪಿಸಲಾಗಿದೆ. ಈ ಹಳೆ ಕಾಯ್ದೆಯಿಂದ ಲಂಚಾವತಾರ ಹೆಚ್ಚಾಗಿದೆ. ಈ ಹಳೆ ನಿಯಮದಡಿ ಸುಮಾರು 84 ಸಾವಿರ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರ್.ಅಶೋಕ್ ಸಮರ್ಥಿಸಿಕೊಂಡರು.

ಭೂ ಸುಧಾರಣೆ ಕಾಯ್ದೆಗೆ 34 ಬಾರಿ ತಿದ್ದುಪಡಿ ತರಲಾಗಿದೆ. ಕೃಷಿ ಉತ್ಪಾದನೆ ಹೆಚ್ಚಿಸಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯತ್ತ ಬರಲು ಇದನ್ನು ತಂದಿದ್ದೇವೆ. ಹಳೆ ಕಾಯ್ದೆ ಕೇವಲ ಅಧಿನಿಯಮ 79ಗೆ ಮಾತ್ರ ಸೀಮಿತವಾಗಿದೆ. 79 ನಿಯಮ‌ ಉಲ್ಲಂಘಿಸಿದ ಸುಮಾರು 84000 ಪ್ರಕರಣ ದಾಖಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಅಧಿಕಾರಿಗಳು ದುಡ್ಡು ಮಾಡುತ್ತಿದ್ದಾರೆ ಎಂದು ವಿವರಿಸಿದರು.

ನೆರೆ ರಾಜ್ಯ ಆಂಧ್ರ, ಗುಜರಾತ್​ನಲ್ಲಿ ಈ ಕಠಿಣ‌ ನಿಯಮ ಇಲ್ಲ. ನಮ್ಮಲ್ಲಿ ಈ ಕಠಿಣ ನಿಯಮದ ಹಿನ್ನೆಲೆ ಹಲವರು ಬೇರೆ ರಾಜ್ಯಕ್ಕೆ ಹೋಗಿ ಜಮೀನು ಖರೀದಿ ಮಾಡುತ್ತಿದ್ದಾರೆ. ಆಧುನಿಕ ಕೃಷಿ ಬರಬೇಕು. ಕೃಷಿ ಮಾಡಲು ಆಸೆ ಇರುವವರಿಗೆ ಇದು ಅನುಕೂಲವಾಗಲಿದೆ. ರಾಜ್ಯದಲ್ಲಿ 11.79 ಲಕ್ಷ ಹೆಕ್ಟೇರ್ ಭೂಮಿ ಬೀಡು ಬಿಡಲಾಗಿದೆ. ಅದನ್ನು ಸದ್ಬಳಕೆ ಮಾಡಲು ಈ ತಿದ್ದುಪಡಿ ಅನುವು ಮಾಡಿಕೊಡಲಿದೆ. ರಾಜ್ಯದಲ್ಲಿ ಒಂದು ಶೇಕಡಾಗಿಂತಲೂ ಕಡಿಮೆ ಜಮೀನನ್ನು ಕೈಗಾರಿಕೆಗಳಿಗೆ ಕೊಡಲಾಗಿದೆ ಎಂದು ವಿವರಿಸಿದರು.

ವಿಷಯ ತಿಳಿದು ಕೂಡಲೇ ಪ್ರತಿಪಕ್ಷ ನಾಯಕ ಕಲಾಪಕ್ಕೆ ಆಗಮಿಸಿದರು. ನಿಮಗೆ ಶಾಸಕಾಂಗ ಸಭೆ ಇರುವ ಹಿನ್ನೆಲೆ ಕಲಾಪ ನಾಳೆಗೆ ಮುಂದೂಡಲಾಗುತ್ತದೆ ಎಂದು ತಿಳಿದು ನಾವು ಹೊರ ಹೋಗಿದ್ದೆವು. ಆದರೆ ಈಗ ನಮ್ಮ ಅನುಪಸ್ಥಿತಿಯಲ್ಲಿ ನೀವು ವಿವಾದಿತ ವಿಧೇಯಕವನ್ನು ಪ್ರಸ್ತಾಪಿಸಿದ್ದೀರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ವಿಧೇಯಕ ಸಂಬಂಧ ಚರ್ಚೆಗೆ ನಾಳೆ ಅವಕಾಶ ನೀಡುವುದಾಗಿ ಸ್ಪೀಕರ್ ಕಾಗೇರಿ ಕಲಾಪವನ್ನು ನಾಳೆಗೆ ಮುಂದೂಡಿದ್ದರು.

Last Updated : Sep 26, 2020, 6:24 AM IST

ABOUT THE AUTHOR

...view details