ಕರ್ನಾಟಕ

karnataka

By

Published : Dec 28, 2020, 12:33 PM IST

ETV Bharat / state

ಸಚಿವ ಸಂಪುಟ ಸಭೆ.. ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ನಿಯಮ ಸುಗ್ರೀವಾಜ್ಞೆಗೆ ಅನುಮೋದನೆ ಸಾಧ್ಯತೆ

ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗದೇ ಉಳಿದ ಗೋ ಹತ್ಯೆ ನಿಷೇಧ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆ ಇದೆ..

banglore
ಗೋ ಹತ್ಯೆ ನಿಷೇಧ ಮಸೂದೆ

ಬೆಂಗಳೂರು :ಮಹತ್ವದ ಸಚಿವ ಸಂಪುಟ ಸಭೆ ಆರಂಭವಾಗಿದ್ದು, ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗದೇ ಉಳಿದ ಗೋ ಹತ್ಯೆ ನಿಷೇಧ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆ ಇದೆ.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಜಾನುವಾರು ಸಂರಕ್ಷಣೆ ಮತ್ತು ಪ್ರತಿಬಂಧಕ ನಿಯಮದ ಸುಗ್ರೀವಾಜ್ಞೆ ಹೊರಡಿಸಲು ಅನುಮೋದನೆ ನೀಡುವ ಬಗ್ಗೆ ಚರ್ಚೆ ನಡೆಯಲಿದೆ. ಮುಂದಿನ ಅಧಿವೇಶನ ನಡೆಸುವ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ‌ ತೀರ್ಮಾನಿಸಲಾಗುತ್ತದೆ. ಒಂದು ವೇಳೆ ಸಂಪುಟ ಸಭೆಯಲ್ಲಿ ಅಧಿವೇಶನ ನಡೆಸಲು ತೀರ್ಮಾನವಾಗದಿದ್ರೆ, ಗೋ ಹತ್ಯೆ ನಿಷೇಧ ನಿಯಮ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗುತ್ತದೆ.

ಉಳಿದಂತೆ ಕರ್ನಾಟಕ ಖಾಸಗಿ ಭದ್ರತಾ ಏಜೆನ್ಸಿ(ಖಾಸಗಿ ಏಜೆನ್ಸಿ ಹಣ ಸಾಗಾಣಿಕೆ)ನಿಯಮ 2020, ಕರ್ನಾಟಕ ರಾಜ್ಯ ಪೊಲೀಸ್ ಸಚಿವಾಲಯ ಸೇವಾ ನಿಯಮಾವಳಿ(ತಿದ್ದುಪಡಿ)2020, ತೋಟಗಾರಿಕಾ ವಿಶ್ವವಿದ್ಯಾನಿಲಯ(ತಿದ್ದುಪಡಿ)ನಿಯಮಾವಳಿ 2020ಗೆ ಸಚಿವ ಸಂಪುಟ ಅನುಮೋದನೆ ನೀಡುವ ಸಾಧ್ಯತೆ ಇದೆ. ಅಂತೆಯೇ ಕರ್ನಾಟಕ ಮುನ್ಸಿಪಲ್ ಮತ್ತು ಇತರೆ ಕಾನೂನುಗಳ ತಿದ್ದುಪಡಿ ವಿಧೇಯಕ 2020ಕ್ಕೆ ಸುಗ್ರೀವಾಜ್ಞೆ ಮೂಲಕ ಜಾರಿ ಸಾಧ್ಯತೆ ಇದೆ.

ಕರ್ನಾಟಕ ನಾಗರಿಕ ಸೇವೆ(ಅನುಕಂಪ ಆಧಾರಿತ ನೇಮಕಾತಿ)ತಿದ್ದುಪಡಿ ಮಸೂದೆ 2020, ಕರ್ನಾಟಕ ಸರ್ಕಾರಿ ನೌಕರರ(ಮೆಡಿಕಲ್ ಹಾಜರಾತಿ)ಮಸೂದೆ 2020, ಕರ್ನಾಟಕ ನಾಗರೀಕ ಸೇವಾ(ನಿರ್ಬಂಧ)ತಿದ್ದುಪಡಿ ಮಸೂದೆ, ಕರ್ನಾಟಕ ನಾಗರೀಕ ಸೇವಾ(ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ )ನಿಯಮಾವಳಿ 2020, ಕರ್ನಾಟಕ ಸಾನ್ಯ ಸೇವೆಗಳು (ಮೋಟಾರು ವಾಹನ) ನೇಮಕಾತಿ ನಿಯಮಾವಳಿ 2020, ಬೆಂಗಳೂರು ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾನಿಲಯ(ತಿದ್ದು ಪಡಿ)ನಿಯಮಾವಳಿ 2020, ಕರ್ನಾಟಕ ಸೊಸೈಟೀಸ್ ನೋಂದಣಿ (ತಿದ್ದುಪಡಿ)ನಿಯಮಾವಳಿ 2020ಕ್ಕೆ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ಓದಿ: ಜನವರಿ 1 ರಿಂದ ಶಾಲೆ ಆರಂಭ ನಿರ್ಧಾರದಲ್ಲಿ ಬದಲಾವಣೆ ಇಲ್ಲ: ಸಿಎಂ

ತುರ್ತು ಸಂದರ್ಭ ಪ್ರತಿಕ್ರಿಯಾ ವ್ಯವಸ್ಥೆ 100ರ ಬದಲಾಗಿ 112 ನಂಬರ್ ಜಾರಿಗೊಳಿಸಲು 35.47ಕೋ ಟಿ ರೂ. ಯೋಜನೆಗೆ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಶಿವಮೊಗ್ಗದಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಬೆಟಾಲಿಯನ್​ಗೆ 50 ಎಕರೆ ಜಮೀನು ಮಂಜೂರು, ಬೇಲೂರು ತಾಲೂಕಿನ ರಣಘಟ್ಟ ಪಿಕ್ ಕುಡಿಯುವ ನೀರಿನ ಯೋಜನೆ 125.46 ಕೋಟಿ ರೂ. ಯೋಜನೆ, ಕೋಲಾರ ನಗರ, ಮಾಲೂರು, ಬಂಗಾರಪೇಟೆಗೆ ಕುಡಿಯುವ ನೀರು ಸರಬರಾಜಿಗೆ 127.76ಕೋಟಿ ರೂ. ಯೋಜನೆ, ಜಪಾನೀಸ್ ಅನುದಾನದಿಂದ ಅಡ್ವಾನ್ಸ್ ಟ್ರಾಫಿಕ್ಸ್ ಇನ್ಫಾರ್ಮೇಷನ್ ಮತ್ತು ಮ್ಯಾನೇಜ್ಮೆಂಟ್ ವ್ಯವಸ್ಥೆ ಜಾರಿಗೆ ಸಂಪುಟ ಅನುಮೋದನೆ ನೀಡುವ ಸಾಧ್ಯತೆ ಇದೆ.

ಎಪಿಎಂಸಿ ಆವರಣದ ಹೊರಗಡೆಯೂ ತೆರಿಗೆ ಕಡಿತಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತೀಚೆಗೆ ಎಪಿಎಂಸಿ ಆವರಣ ಹೊರತುಪಡಿಸಿಯೂ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದ್ದದನ್ನು ಕಡಿತಗೊಳಿಸಲು ವರ್ತಕರು ಹಾಗೂ ಗ್ರಾಹಕರ ಒತ್ತಾಯದ ಮೇರೆಗೆ ಸಂಪುಟ ಅನುಮೋದನೆ ನೀಡಲಿದೆ.

ABOUT THE AUTHOR

...view details