ಕರ್ನಾಟಕ

karnataka

ETV Bharat / state

ಲಾಠಿ ಚಾರ್ಜ್ ಪ್ರಶ್ನಿಸಿದ ವಕೀಲನಿಗೆ ದಂಡ: ತೀರ್ಪು ಪರಿಶೀಲಿಸಬೇಕಿದೆ ಎಂದ ಹೈಕೋರ್ಟ್ - lathi charge case

ಲಾಠಿ ಪ್ರಹಾರ ಮಾಡಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ವಕೀಲರೊಬ್ಬರಿಗೆ ದಂಡ ವಿಧಿಸಿದ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೈಕೋರ್ಟ್​ ಅಭಿಪ್ರಾಯ ಪಟ್ಟಿದೆ.

police
police

By

Published : May 21, 2021, 10:36 PM IST

ಬೆಂಗಳೂರು:ಲಾಕ್​ಡೌನ್ ಮಾರ್ಗಸೂಚಿಗಳನ್ನು ಜಾರಿ ಮಾಡುವ ವೇಳೆ ಲಾಠಿ ಪ್ರಹಾರ ಮಾಡಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ವಕೀಲರೊಬ್ಬರಿಗೆ ದಂಡ ವಿಧಿಸಿದ ತೀರ್ಪನ್ನು ಪರಿಶೀಲಿಸುವ ಅಗತ್ಯವಿದೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಲಾಕ್​ಡೌನ್ ಮಾರ್ಗಸೂಚಿ ಜಾರಿಗೊಳಿಸುವ ವೇಳೆ ಲಾಠಿ ಪ್ರಹಾರ ಮಾಡುತ್ತಿರುವ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿ, ವಿಚಾರಣೆಗೆ ಒಳಪಡಿಸಲು ನಿರ್ದೇಶಿಸುವಂತೆ ಕೋರಿ ವಕೀಲರಾದ ಬಾಲಕೃಷ್ಣನ್ ಪಿಐಎಲ್ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರ ವಕೀಲರಿಗೆ ಒಂದು ಸಾವಿರ ದಂಡ ವಿಧಿಸಿ, ಅರ್ಜಿ ವಜಾಗೊಳಿಸಿತ್ತು.

ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠದಲ್ಲಿ ಪೊಲೀಸರ ಲಾಠಿ ಪ್ರಹಾರಕ್ಕೆ ನಿಯಂತ್ರಣ ಕೋರಿ ವಕೀಲ ಎನ್ ಪಿ ಅಮೃತೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದೆ. ಈ ಅರ್ಜಿಗೆ ಹೆಚ್ಚುವರಿ ಹೇಳಿಕೆ ದಾಖಲಿಸಿದ್ದ ಅಮೃತೇಶ್, ಪೊಲೀಸರ ಲಾಠಿ ಪ್ರಹಾರಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಬೇರೊಂದು ವಿಭಾಗೀಯ ಪೀಠ ವ್ಯತಿರಿಕ್ತ ತೀರ್ಪು ನೀಡಿದೆ. ಆ ಬಳಿಕ ಪೊಲೀಸರು ಮತ್ತೆ ಲಾಠಿ ಜಳಪಿಸುತ್ತಿದ್ದಾರೆ ಎಂದು ವಿವರಿಸಿದ್ದರು.

ಈ ಹೆಚ್ಚುವರಿ ಲಿಖಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಪೀಠ, ಪೊಲೀಸರು ಲಾಠಿ ಚಾರ್ಜ್​ ಮಾಡುತ್ತಿರುವ ಕುರಿತು ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಅನಗತ್ಯ ಬಲ ಪ್ರಯೋಗಿಸದಂತೆ ಡಿಜಿ ಅಂಡ್ ಐಜಿ ಸುತ್ತೋಲೆ ಹೊರಡಿಸಿದ್ದಾರೆ. ಲಾಠಿ ಚಾರ್ಜ್ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ವಕೀಲ ಬಾಲಕೃಷ್ಣನ್ ಅವರ ಅರ್ಜಿ ವಜಾ ಮಾಡಿ, ದಂಡ ವಿಧಿಸಿರುವ ತೀರ್ಪನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಮೇ. 25ಕ್ಕೆ ಮುಂದೂಡಿತು.

ಇನ್ನು ಪೊಲೀಸರು ಕೋವಿಡ್ ಮಾರ್ಗಸೂಚಿಗಳ ಜಾರಿಯಲ್ಲಿ ಸಾರ್ವಜನಿಕರ ಮೇಲೆ ಅನಗತ್ಯವಾಗಿ ಲಾಠಿ ಚಾರ್ಚ್ ಮಾಡಿದ್ದರೆ, ಆ ಕುರಿತು ಮಾಹಿತಿ ನೀಡುವಂತೆ ಅರ್ಜಿದಾರ ಪರ ವಕೀಲರಿಗೆ ಸೂಚಿಸಿತು. ಹಾಗೆಯೇ ಲಾಠಿಚಾರ್ಜ್ ಕುರಿತಂತೆ ಮಾಧ್ಯಮಗಳ ವರದಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ABOUT THE AUTHOR

...view details