ಬೆಂಗಳೂರು: ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಬ್ಯಾಂಕಿಂಗ್ ಇನ್ನೊಂದು ವಾರದೊಳಗೆ ಮುಗಿಯುವ ಸಾಧ್ಯತೆ ಇದೆ. ಜೊತೆ ಜೊತೆಯಲಿ ಧಾರಾವಾಹಿ ಏಪ್ರಿಲ್ 23ರವರೆಗೆ ಮಾತ್ರ ಪ್ರಸಾರವಾಗಲಿದ್ದು, ಈ ಬಗ್ಗೆ ಸ್ವತಃ ಧಾರವಾಹಿಯ ನಾಯಕ ನಟ ಅನಿರುದ್ಧ್ ಮಾಹಿತಿ ನೀಡಿದ್ದಾರೆ.
ಧಾರಾವಾಹಿಗಳ ಪ್ರಸಾರ ಕುರಿತು ಅನಿರುದ್ಧ್ ಹೇಳಿದ್ದೇನು? - jothe jotheyali serial
ಜೊತೆ ಜೊತೆಯಲಿ ಧಾರಾವಾಹಿ ಏಪ್ರಿಲ್ 23ರವರೆಗೆ ಮಾತ್ರ ಪ್ರಸಾರವಾಗಲಿದ್ದು, ಈ ಬಗ್ಗೆ ಸ್ವತಃ ಧಾರವಾಹಿಯ ನಾಯಕ ನಟ ಅನಿರುದ್ಧ್ ಮಾಹಿತಿ ನೀಡಿದ್ದಾರೆ.
ನಿಮಗೆಲ್ಲಾ ತಿಳಿದಿರುವಂತೆ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಶೂಟಿಂಗ್ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಏಪ್ರಿಲ್ ಮೂರಕ್ಕೆ ಬ್ಯಾಂಕಿಂಗ್ ಎಪಿಸೋಡುಗಳು ಪೂರ್ಣಗೊಳ್ಳಲಿವೆ. ಮುಂದಿನ ನಿರ್ಧಾರವನ್ನು ವಾಹಿನಿ ಕೈಗೊಳ್ಳಲಿದೆ ಎಂದು ಅನಿರುದ್ಧ್ ತಿಳಿಸಿದ್ದಾರೆ. ಕಳೆದ ಸೋಮವಾರದಿಂದ 20 ನಿಮಿಷಗಳ ಎಪಿಸೋಡ್ಗಳನ್ನು 14 ನಿಮಿಷಕ್ಕೆ ಇಳಿಸಲಾಗಿತ್ತು. ಆದರೂ, ಜೊತೆ ಜೊತೆಯಲಿ, ಗಟ್ಟಿಮೇಳ, ಕನ್ನಡತಿ, ಪಾರು, ಕಮಲಿ, ಸೇವಂತಿ, ಮನಸಾರೆ, ಪ್ರೇಮಲೋಕ ಸೇರಿದಂತೆ ಹಲವು ಧಾರಾವಾಹಿಗಳ ಬ್ಯಾಂಕಿಂಗ್ ಮುಗಿಯಲಿದೆ.
ಇನ್ನು ಏಪ್ರಿಲ್ ತಿಂಗಳ ಆರಂಭದಿಂದ ಚಿತ್ರೀಕರಣ ಆರಂಭಿಸಲು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತೀರ್ಮಾನ ಕೈಗೊಂಡಿತ್ತು. ಆದರೆ 21 ದಿನ ಮನೆಯಿಂದ ಹೊರ ಬರದಂತೆ ಸರ್ಕಾರ ಆದೇಶಿಸಿರುವ ಹಿನ್ನೆಲೆ ಚಿತ್ರೀಕರಣ ಕಷ್ಟವಾಗಲಿದೆ. ಶೂಟಿಂಗ್ ನಿಲ್ಲಿಸಿರೋದ್ರಿಂದ ಈಗಾಗಲೇ ಸಿಕ್ಕಾಪಟ್ಟೆ ಸಮಸ್ಯೆ ಆಗಿರೋದು ನಿಜ. ಆದರೆ ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ. ರಿಯಾಲಿಟಿ ಶೋಗಳ ಬ್ಯಾಂಕಿಂಗ್ ಇಲ್ಲ. ಹೀಗಾಗಿ, ಬೆಸ್ಟ್ ಎಪಿಸೋಡ್ ಹಾಗೂ ಎಪಿಸೋಡ್ ರಿಪೀಟ್ ಮಾಡುವ ಸಾಧ್ಯತೆಗಳಿವೆ ಎಂದಿದ್ದಾರೆ.