ಕರ್ನಾಟಕ

karnataka

ETV Bharat / state

ಅಧಿಕಾರಗಳ ಬೇಜವಾಬ್ದಾರಿಯೇ ಹುಳಿಮಾವು ಕೆರೆ ದುರಂತಕ್ಕೆ ಕಾರಣ

ಕೆಲವು ಅಧಿಕಾರಿಗಳ ಬೇಜವ್ದಾರಿಯೇ ಕೆರೆ ನೀರು ಹರಿಯಲು ಕಾರಣ ಎಂದು ಹುಳಿಮಾವು ಕೆರೆಕಟ್ಟೆ ಒಡೆದ ದುರಂತಕ್ಕೆ ಶಾಸಕ ಸತೀಶ್​ ರೆಡ್ಡಿ ಕಾರಣ ನೀಡಿದ್ದಾರೆ.

By

Published : Nov 30, 2019, 8:10 AM IST

bng
ಹುಳಿಮಾವು ಕೆರೆಕಟ್ಟೆ ಒಡೆದ ಸ್ಥಳಕ್ಕೆ ಶಾಸಕ ಸತೀಶ್ ರೆಡ್ಡಿ ಭೇಟಿ ನೀಡಿದರು.

ಬೆಂಗಳೂರು:ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಭಾನುವಾರ ಹುಳಿಮಾವು ಕೆರೆಕಟ್ಟೆ ಒಡೆದು ಸಾವಿರಾರು ಮನೆಗಳು ಕೆರೆ ನೀರಿನಿಂದ ಜಲಾವೃತ್ತವಾಗಿತ್ತು. ಈ ದುರಂತಕ್ಕೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಹುಳಿಮಾವು ಕೆರೆಕಟ್ಟೆ ಒಡೆದ ಸ್ಥಳಕ್ಕೆ ಶಾಸಕ ಸತೀಶ್ ರೆಡ್ಡಿ ಭೇಟಿ ನೀಡಿದರು.

ಕೆರೆ ಸುತ್ತಮುತ್ತವಿರುವ ಅಪಾರ್ಟ್‍ಮೆಂಟ್‍ಗಳ ನೀರು ನೇರವಾಗಿ ಹುಳಿಮಾವು ಕೆರೆಗೆ ಹರಿಸಲಾಗುತ್ತಿತ್ತು, ಇತ್ತಿಚೆಗೆ ಕೆರೆಯಲ್ಲಿ ನೀರು ಹೆಚ್ಚಾದ ಕಾರಣ ಒಳಚರಂಡಿ ನೀರು ಸರಾಗವಾಗಿ ಹರಿಯದೇ ಅಪಾರ್ಟ್‍ಮೆಂಟ್ ಒಳಗೆ ಡ್ರೈನೆಜ್ ಸಮಸ್ಯೆ ತಲೆದೊರಿತ್ತು.

ಹೀಗಾಗಿ ಅಪಾರ್ಟ್‍ಮೆಂಟ್‍ನವರು ಜಲಮಂಡಳಿ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದರು. ಆದರೆ ಜಲ ಮಂಡಳಿ ಸಿಬ್ಬಂದಿ ಕೆರೆ ಅಭಿವೃದ್ದಿ ಪ್ರಾಧಿಕಾರಕ್ಕೆ ಪತ್ರವನ್ನ ವರ್ಗಾವಣೆ ಮಾಡಿ ಕೆರೆಯಲ್ಲಿ ನೀರು ಕಡಿಮೆ ಮಾಡಲು ಸೂಚಿಸಿದ್ದಾರೆ. ಅದರಂತೆ ಕೆರೆ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಕೆರೆಯಲ್ಲಿ ನೀರನ್ನು ಕಡಿಮೆ ಮಾಡಲು ಚಿಕ್ಕದಾಗಿ ಹಳ್ಳ ತೋಡಲು ಸೂಚಿಸಿದ್ದಾರೆ. ಇದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ.

ಈ ಘಟನೆಯಲ್ಲಿ 630 ಮನೆಗಳು ಹಾನಿಯಾಗಿದ್ದು ಅದರಲ್ಲಿ 319 ಮನೆಗಳು ಬಡವರ ಮನೆಗಳು ಎಂಬುದಾಗಿ ಸಿಎಂ ಮಾಹಿತಿ ನೀಡಿದ್ದರು, ಅಲ್ಲದೇ ನಿರಾಶ್ರಿತ ಕುಟುಂಬಕ್ಕೆ 50 ಸಾವಿರ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ ಇನ್ನೂ ಕೆಲ ಕುಟುಂಬಗಳಿಗೆ ಪರಿಹಾರದ ಹಣ ಸೇರಿಲ್ಲ. ಈ ಬಗ್ಗೆಯೂ ಶಾಸಕರು ಸಿಎಂ ರವರ ಗಮನ ಸೆಳೆಯುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡರು.

ಇನ್ನೂ ಕೆರೆ ಪಕ್ಕದಲ್ಲೇ ಬಫರ್ ಜೋನ್​ನಲ್ಲಿ ವಾಲ್ ಮಾರ್ಟ್ ಹಾಗೂ ಹೀರಾ ನಂದಿನಿ ಬಿಲ್ಡರ್​ಗಳು ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಾಣ ಮಾಡಿದ್ದು ಅವುಗಳನ್ನ ಸಹ ಸರ್ಕಾರ ತಮ್ಮ ವಶಕ್ಕೆ ಪಡೆಯಬೇಕೆಂದು ಶಾಸಕರು ತಿಳಿಸಿದರು. ಇದಲ್ಲದೇ ದುರಂತದಲ್ಲಿ 200ಕ್ಕೂ ಹೆಚ್ಚು ಕಾರುಗಳು ನೀರಿನಲ್ಲಿ ಮುಳುಗಿ ಹಾಳಾಗಿದ್ದು, ಇನ್ಯೂರೆನ್ಸ್ ಕಂಪನಿಗಳ ಜೊತೆ ಮಾತನಾಡುವ ಭರವಸೆ ನೀಡಿದರು.

ಮೆಲ್ನೋಟಕ್ಕೆ ಕೆರೆ ಅಭಿವೃದ್ದಿ ಅಧಿಕಾರಗಳ ಬೇಜವಬ್ದಾರಿತನಕ್ಕೆ ಹುಳಿಮಾವು ಕೆರೆ ಕಟ್ಟೆ ದುರಂತವಾಗಿದ್ದು ಸಾವಿರಾರು ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ABOUT THE AUTHOR

...view details