ಕರ್ನಾಟಕ

karnataka

ETV Bharat / state

ಯಾವುದೇ ಪ್ರಕರಣಗಳ ತನಿಖೆ ಕುಂಠಿತಗೊಂಡಿಲ್ಲ: ಡಿಜಿ ಪ್ರವೀಣ್ ಸೂದ್ - ಯಾವುದೇ ಪ್ರಕರಣಗಳ ತನಿಖೆ ಕುಂಠಿತಗೊಂಡಿಲ್ಲ

ನಗರದಲ್ಲಿ ಯಾವುದೇ ಪ್ರಕರಣಗಳ ತನಿಖೆ ಕುಂಠಿತಗೊಂಡಿಲ್ಲ. ಚಾರ್ಜ್​ಶೀಟ್​ ಸಲ್ಲಿಸಿದಾಗ ನಮ್ಮ ತನಿಖೆಯ ವೇಗ ತಿಳಿಯುತ್ತೆ ಅಂತಾ ಡಿಜಿ ಪ್ರವೀಣ್ ಸೂದ್ ಹೇಳಿದರು.

DG Praveensud
ಡಿಜಿ ಪ್ರವೀಣ್ ಸೂದ್

By

Published : Oct 14, 2020, 12:35 PM IST

Updated : Oct 14, 2020, 12:54 PM IST

ಬೆಂಗಳೂರು: ಕೋರಮಂಗಲ ಕೆಎಸ್​​ಆರ್​ಪಿ ಮೈದಾನದಲ್ಲಿ 276 ಪೊಲೀಸ್ ಕಾನ್ಸ್​ಟೇಬಲ್​ಗಳು ಪಥ ಸಂಚಲನ ನಡೆಸಿದ್ರು. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಈ ಪರೇಡ್ ಜರುಗಿತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಜಿ ಪ್ರವೀಣ್ ಸೂದ್, ಸಾಮಾನ್ಯ ಸಮಯದಲ್ಲಿ ತರಬೇತಿ ನೀಡುವುದು ಕಷ್ಟ, ಅಂಥದ್ದರಲ್ಲಿ ಕೋವಿಡ್ ಬಿಕ್ಕಟ್ಟಿನ ವೇಳೆ ಅಂತರ ಕಾಯ್ದುಕೊಂಡು ಟ್ರೈನಿಂಗ್ ನೀಡಿರೋದು ನಿಜಕ್ಕೂ ಶ್ಲಾಘನೀಯ. 276 ಪೊಲೀಸ್ ಕಾನ್ಸ್​​ಟೇಬಲ್​ಗಳು ಇಂದು ತರಬೇತಿ ಮುಗಿಸಿ ಇಲಾಖೆಗೆ ಸೇರ್ಪಡೆಗೊಂಡಿದ್ದಾರೆ. ಎಲ್ಲರೂ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಿಸಿದ್ರು.

ಕೋರಮಂಗಲ ಕೆಎಸ್​​ಆರ್​ಪಿ ಮೈದಾನದಲ್ಲಿ ಪರೇಡ್

ಬೆಂಗಳೂರಿನಲ್ಲಿ ಉಗ್ರರ ಕರಿ ನೆರಳು ವಿಚಾರವಾಗಿ ಮಾತನಾಡಿದ ಡಿಜಿ, ಈಗಾಗಲೇ ನಗರದಲ್ಲಿ ಮೂವರು ಶಂಕಿತ ಉಗ್ರರನ್ನ ಬಂಧಿಸಲಾಗಿದೆ. ರಾಜ್ಯ ಪೊಲೀಸರು, ಎನ್​ಐಎ ಒಂದೇ ಮಾದರಿಯಲ್ಲಿ ತನಿಖೆ ನಡೆಸುತ್ತಿವೆ. ಎನ್​​ಐಎ ತನಿಖೆಗೆ ನಮ್ಮ ಪೊಲೀಸರು ಕೂಡ ಸಹಕಾರ ನೀಡುತ್ತಿದ್ದಾರೆ ಎಂದರು.

ಕೋರಮಂಗಲ ಕೆಎಸ್​​ಆರ್​ಪಿ ಮೈದಾನದಲ್ಲಿ ಪರೇಡ್

ಡಿಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ವಿಚಾರವಾಗಿ ಎನ್​ಐಎ ತನಿಖೆ ನಡೆಸುತ್ತಿದೆ. ಅವರಿಗೆ ಸಹಕಾರ ನೀಡಲು ಡಿವೈಎಸ್​ಪಿ ಱಂಕ್​ನ ಕೆಲ ಅಧಿಕಾರಿಗಳನ್ನ ನೇಮಿಸಲಾಗಿದೆ. ಸದ್ಯ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪದ ತನಿಖೆ ಕುಂಠಿತವಾಗಿಲ್ಲ. ನಮ್ಮ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.

ನ್ಯಾಯಾಲಯಕ್ಕೆ ನಿಗದಿತ ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸುತ್ತೇವೆ. ಈ ಹಿನ್ನೆಲೆ ಸಾಕ್ಷ್ಯಾಧಾರ ಕಲೆ ಹಾಕುವಲ್ಲಿ ನಮ್ಮ ಅಧಿಕಾರಿಗಳು ನಿರತರಾಗಿದ್ದಾರೆ ಎಂದು ಡಿಜಿ ಸ್ಪಷ್ಟಪಡಿಸಿದರು.

Last Updated : Oct 14, 2020, 12:54 PM IST

ABOUT THE AUTHOR

...view details