ಬೆಂಗಳೂರು: ಪ್ರವಾಸೋದ್ಯಮದಲ್ಲಿ ತೊಡಗಿಕೊಂಡ ಕ್ಷೇತ್ರಗಳು ಸ್ವಾವಲಂಬನೆ ಕಳೆದುಕೊಳ್ಳುತ್ತಿದ್ದು, ಲಾಕ್ ಡೌನ್ ತೆರವಿನ ಬಳಿಕ ಚೇತರಿಸಿಕೊಳ್ಳಲು ಕೆಲ ವರ್ಷಗಳ ಕಾಲಾವಧಿ ಪಡೆಯಲಿದೆ ಎಂಬ ಆತಂಕದ ಮಾತುಗಳು ಕೇಳಿ ಬರುತ್ತಿವೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡ ವಾಹನ ಮಾಲೀಕರು, ಟ್ರಾವಲ್ ಮಾಲೀಕರು, ಚಾಲಕರು ಕಳೆದ ಎರಡು ತಿಂಗಳಿಂದ ಚೀ ನಾದಲ್ಲಿ ಮಹಾಮಾರಿ ಕೊರೊನಾ ಕಾಣಿಸಿಕೊಂಡ ಮೇಲೆ ಅಂತಾರಾಷ್ಟ್ರೀಯ ಪ್ರವಾಸಿ ವೀಸಾ ಸ್ಥಗಿತ, ವಿಮಾನ ಯಾನ ನಿಲುಗಡೆ, ದೇಶದ ಹಾರ್ಬರ್ಗಳು ಸ್ಥಗಿತ, ಸಾಮಾಜಿಕ ಅಂತರ ಕಾಪಾಡುವುದು, ಜನತಾ ಕರ್ಪ್ಯೂ, ದೇಶದಾದ್ಯಂತ ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಗಳಿಂದ ಉದ್ಯಮವನ್ನು ನಂಬಿಕೊಂಡ ಕಾರ್ಮಿಕರು, ಮಾಲಿಕರು ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆ ಏಪ್ರಿಲ್ 14 ಕ್ಕೇ ಲಾಕ್ ಡೌನ್ ತೆರವಾದರೂ ಕೂಡ ಉದ್ಯಮ ಚೇತರಿಸಿಕೊಳ್ಳಲು ವರ್ಷಗಳ ಕಾಲಾವಧಿಯನ್ನು ಪಡೆಯಲಿದೆ. ಅದೇ ಲಾಕ್ಡೌನ್ ಮುಂದುವರಿದರೆ ಉದ್ಯಮ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದೆ.
ಕೇಂದ್ರ ಸರ್ಕಾರ ಪಿ.ಎಫ್ ಗೆ, ಸ್ವಲ್ಪ ಬಿಡುಗಡೆ ಕೊಟ್ಟಿದೆ, ಬ್ಯಾಂಕ್ ಲೋನ್ 3 ತಿಂಗಳ ಕಾಲಾವಕಾಶ ಕೊಟ್ಟಿದೆ. ಇದು ಅಲ್ಪಮಟ್ಟಿಗೆ ನಿರಾಳ ಎನಿಸಿದರೂ ಮುಂದಿನ ದಿನಗಳು ಸಾಕಷ್ಟು ಅತಂಕಗಳಿಂದ ಭಾರಿ ಸಾಹಸವನ್ನೇ ಮಾಡಬೇಕು ಎಂಬುದು ನಿಸ್ಸಂಶಯ ಎಂಬ ಮಾತು ಕೇಳಿಬರುತ್ತಿದೆ. ಇಎಸ್ಐ ಮೂಲಕ ಕಾರ್ಮಿಕರಿಗೆ ಶೇ.70 ಮತ್ತು ಟ್ರವಲ್ ಮಾಲಿಕರಿಗೆ ಶೇ.30 ಉಪಯೋಗಿಸುವ ಅವಕಾಶವನ್ನು ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೊಸ ಬೇಡಿಕೆ ಇಟ್ಟಿದೆ, ಅದು ಮಾತ್ರವಲ್ಲದೆ ಜಿಎಸ್ಟಿ ಕಟ್ಟಲು ಒಂದು ವರ್ಷದ ಕಾಲವಕಾಶ ಕೊಡಬೇಕು ಎಂದೂ ವಿನಂತಿಸಲಾಗಿದೆ.
ರಾಜ್ಯ ಸರಕಾರದ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಕಾರ್ಮಿಕ ಇಲಾಖೆಯಿಂದ ಚಾಲಕರಿಗೆ ಜೀವನ ನಡೆಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕಾಗಿದೆ. ಚಿಕ್ಕ ಪುಟ್ಟ ಉದ್ಯಮ ನಡೆಸುವವರಿಗೆ ವ್ಯಾಪಾರ ಪುನರ್ ಸ್ಥಾಪನೆ ಮಾಡವ ಉದ್ದೇಶದಿಂದ ಬ್ಯಾಂಕ್ ಮೂಲಕ ಬಡ್ಡಿ ರಹಿತ ಸಾಲ ಕೊಡುವ ಕಾರ್ಯವನ್ನು ಸರ್ಕಾರಗಳು ಮಾಡಬೇಕಾಗಿದೆ ಎಂಬ ವಿನಂತಿಯನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವಾಹನ ಮಾಲೀಕರು ಮಾಡಿದ್ದಾರೆ.
ಸರ್ಕಾರ ಸಹಕಾರ ನೀಡಲಿ:
ರಾಜ್ಯ ಹಣಕಾಸು ಇಲಾಖೆ ಪ್ರವಾಸಿ ವಾಹನಗಳ ಮೂರು ತಿಂಗಳ ತೆರಿಗೆ ವಿನಾಯಿತಿ ಘೋಷಣೆ ಮಾಡಬೇಕಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ದುಡಿಯುವ ಮಾಲೀಕರು ಮತ್ತು ಕಾರ್ಮಿಕರು ಸಾಂಕ್ರಾಮಿಕ ರೋಗ ಕರೊನಾದ ಹೊಡೆತದಿಂದ ಆರ್ಥಿಕವಾಗಿ ಸ್ವಾವಲಂಬನೇ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಕೊರೊನಾ ಹೊಡೆತದಿಂದ ಈಗಾಗಲೇ ಸಣ್ಣ ಉದ್ಯಮಗಳು ಸ್ಥಗಿತವಾಗಿದ್ದು, ಲಾಕ್ ಡೌನ್ ಮುಗಿದ ನಂತರವೂ ಅವು ಮತ್ತೆ ಆರಂಭಗೊಳ್ಳುವುದು ಅನುಮಾನ. ಹಾಗೆಯೇ ಸಾರಿಗೆ ಕ್ಷೇತ್ರದಲ್ಲಿ ಧುಡಿಯುತ್ತಿರುವ ಸಾಕಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಅಪಾಯವೂ ಇದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅಭಿಪ್ರಾಯ ಪಟ್ಟಿದ್ದಾರೆ.
ಹಲವಾರು ಟ್ರಾವೆಲ್ ಮಾಲಿಕರು ಚಾಲಕರ ಸಂಭಾವನೆ ಮತ್ತು ಕಚೇರಿ ಕರ್ಚು ವೆಚ್ಚಗಳನ್ನು ಇನ್ನೂ ಬರಿಸದೆ ಇರುವುದು ನೋಡಿದಾಗ ಉದ್ಯಮದ ಅರ್ಥಿಕ ಸ್ಥಿತಿ ದಯನೀಯಾವಾಗಿರುವುದು ಗೊಚರಿಸುತ್ತಿದೆ. ಐದು ಲಕ್ಷ ಚಾಲಕರು ಮತ್ತು ಐದು ಸಾವಿರ ಟ್ರಾವೆಲ್ ಮಾಲಿಕರು, ಹಾಗೂ ವಿವಿಧ ತೆರನಾದ ವಾಹನ ಮಾಲಿಕರು ಸಾರಿಗೆ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಸರ್ಕಾರದ ಅರ್ಥಿಕ ನಿರ್ಧಾರಗಳು ಮತ್ತು ಬಿಡುಗಡೆ ಮಾಡುವ ಸೌಲಭ್ಯಗಳ ಬಗ್ಗೆ ಉದ್ಯಮ ಕಾಯುತ್ತಿದೆ. ಅರ್ಥಿಕ ಪರಿಸ್ಥಿತಿ ಮುಂದಿನ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ನಮ್ಮ ಈ ಬೇಡಿಕೆಗಳು ದೇಶದ ಹಲವಾರು ರಾಜ್ಯಗಳು ಹೊರಡಿಸಿದ ಪ್ಯಾಕೇಜ್ ಆಗಿದೆ ಎಂದು ಅವರು ವಿವರಿಸಿದ್ದಾರೆ.