ಕರ್ನಾಟಕ

karnataka

By

Published : Mar 18, 2019, 1:32 PM IST

ETV Bharat / state

ಬಿಬಿಎಂಪಿ ಪೌರಕಾರ್ಮಿಕರಿಗೆ ನೀಡ್ತಿರೋದು ವಿಷಕಾರಿ ಆಹಾರ, 6 ತಿಂಗಳು ತಿಂದ್ರೆ ಸಾವು ಖಚಿತ: ಉಮೇಶ್​ ಶೆಟ್ಟಿ

ಪೌರ ಕಾರ್ಮಿಕರಿಗೆ ನೀಡುತ್ತಿರುವ ಇಂದಿರಾ ಕ್ಯಾಂಟೀನ್​​ ಊಟ ವಿಷಕಾರಿಯಾಗಿದೆ ಎಂದು ಗೋವಿಂದರಾಜನಗರ ವಾರ್ಡ್ ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಆರೋಪಿಸಿದ್ದಾರೆ.

ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ

ಬೆಂಗಳೂರು: ಇಂದಿರಾ ಕ್ಯಾಂಟೀನ್​​​ನಿಂದ ಪೌರಕಾರ್ಮಿಕರಿಗೆ ನೀಡುತ್ತಿರುವ ಆಹಾರ ವಿಷಕಾರಿಯಾಗಿದೆ. ಬಿಬಿಎಂಪಿ ಬಡವರ ಬದುಕಿನ ಜೊತೆ ಆಟ ಆಡ್ತಿದೆ. ಆರು ತಿಂಗಳು ಇದೇ ಆಹಾರ ತಿಂದ್ರೆ ಸಾವು ಖಚಿತ ಎಂದು ಗೋವಿಂದರಾಜನಗರ ವಾರ್ಡ್ ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಆರೋಪಿಸಿದ್ದಾರೆ.

16,000 ಸಾವಿರ ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ ಊಟ ಕೊಡಲಾಗ್ತಿದೆ ಎಂಬ ಲೆಕ್ಕ ಇದೆ.ಆದರೆ ಎರಡು ಸಾವಿರ ಪೌರಕಾರ್ಮಿಕರೂ ಊಟ ಮಾಡುತ್ತಿಲ್ಲ. ಸುಳ್ಳು ಲೆಕ್ಕ ನೀಡಿ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಅಲ್ಲದೆ ಕೊಡುವ ಊಟವನ್ನು ರಾಮಯ್ಯ ಆಸ್ಪತ್ರೆ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯ ಜಂಟಿ ನಿರ್ದೇಶಕರು ವೈದ್ಯಕೀಯಪರೀಕ್ಷೆ ಮಾಡಿದಾಗ ವಿಷಕಾರಿ ಅಂಶಗಳಾದ ಫಂಗಸ್, ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಮನುಷ್ಯರು ತಿನ್ನಲು ಯೋಗ್ಯವೇ ಇಲ್ಲ ಎಂದು ವರದಿ ನೀಡಿದ್ದಾರೆ ಎಂದರು.

ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ

ವಿಷಕಾರಿ ಆಹಾರ ಸೇವೆನೆ ಮಾಡಿದರೆ ಪೌರಕಾರ್ಮಿಕರಿಗೆ ವಾಂತಿ-ಭೇದಿ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆ, ಲೋ ಬಿಪಿಯಿಂದ ನರಳುವ ಸಾಧ್ಯತೆ ಇದೆ. ಇಂದಿರಾ ಕ್ಯಾಂಟೀನ್​​​ನಲ್ಲಿ ಉಳಿದ ಆಹಾರವಾದ ಅನ್ನ, ಸಾಂಬರ್​​​ಅನ್ನು ಪೌರಕಾರ್ಮಿಕರಿಗೆ ನೀಡಲಾಗುತ್ತಿದೆ. ಹಾಗೆ ಪೌರಕಾರ್ಮಿಕರಿಗೆ ಕೊಡುವ ಆಹಾರವನ್ನು ಪೈಂಟ್ ಡಬ್ಬಿಗಳಲ್ಲಿ ಕೊಡಲಾಗ್ತಿದೆ. ಟಾಯ್ಲೆಟ್ ಪಕ್ಕ, ರಸ್ತೆ, ಪಾರ್ಕ್​ಗಳ ಪಕ್ಕಗಳಲ್ಲಿಟ್ಟು ಕೊಡಲಾಗ್ತಿದೆ ಎಂದು ಆರೋಪಿಸಿದರು.

ಚೆಫ್ಟಾಕ್ ಮತ್ತು ರೀವಾರ್ಡ್ ಕಂಪನಿಗಳು ಪೌರ ಕಾರ್ಮಿಕರಿಗೆ ಊಟ ಸರಬರಾಜು ಮಾಡುವ ಗುತ್ತಿಗೆ ಪಡೆದಿವೆ. ಆದ್ರೆ ಯಾವುದೇ ಇಂದಿರಾ ಕ್ಯಾಂಟೀನ್​​​ಗಳ ಸಿಸಿ ಕ್ಯಾಮರಾಗಳು, ಜನರ ಲೆಕ್ಕ ತೋರಿಸುವ ಡಿಸ್​​​ಪ್ಲೇಗಳು ವರ್ಕ್ ಆಗ್ತಿಲ್ಲ. ಹೀಗಾಗಿ ತಪ್ಪು ಲೆಕ್ಕ ತೋರಿಸಿ ಗುತ್ತಿಗೆ ಸಂಸ್ಥೆಗಳು ಜನರ ತೆರಿಗೆ ಹಣ ಕೊಳ್ಳೆ ಹೊಡೀತಿವೆ.ಎರಡು ಕಂಪನಿಗಳ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು ಎಂದರು.

For All Latest Updates

TAGGED:

ABOUT THE AUTHOR

...view details