ಬೆಂಗಳೂರು:ಶಾಸಕರ ಹನಿಟ್ರ್ಯಾಪ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಆರೋಪಿಗಳಿಂದ ದಿನೇ ದಿನೆ ರೋಚಕ ಸಂಗತಿಗಳನ್ನು ಬಯಲು ಮಾಡುತ್ತಿದ್ದಾರೆ.
ಹನಿ ಟ್ರ್ಯಾಪ್ನಲ್ಲಿ ತಗ್ಲಾಕೊಂಡಿದ್ದ ಕಾಂಗ್ರೆಸ್ ನಾಯಕ... 5 ಲಕ್ಷ ಪೀಕಿದ್ದ ಆರೋಪಿ, ರೋಚಕ ಸಂಗತಿ ಬಯಲು - ಹನಿಟ್ರ್ಯಾಪ್ ಪ್ರಕರಣ ಬೆಂಗಳೂರು ಸುದ್ದಿ
ಹನಿಟ್ರ್ಯಾಪ್ ಪ್ರಕರಣದ ತನಿಖೆಯ ವೇಳೆ ಸಿಡಿ, ಪೆನ್ ಡ್ರೈವ್ ಸೇರಿದಂತೆ ವಿವಿಧ ದಾಖಲೆಗಳನ್ನು ಜಪ್ತಿ ಮಾಡಿದಾಗ ಪ್ರಕರಣದ ಕರಾಳ ಮುಖ ಅನಾವರಣಗೊಂಡಿದೆ.
ಹನಿಟ್ರ್ಯಾಪ್ ಪ್ರಕರಣ
ಶುಕ್ರವಾರ ಆರೋಪಿ ರಾಘವೇಂದ್ರ ಮನೆಯಲ್ಲಿ ಶೋಧ ನಡೆಸಿ ಸಿಡಿ, ಪೆನ್ ಡ್ರೈವ್ ಸೇರಿದಂತೆ ವಿವಿಧ ದಾಖಲೆಗಳನ್ನು ಜಪ್ತಿ ಮಾಡಿಕೊಂಡು ತೀವ್ರ ವಿಚಾರಣೆಗೊಳಪಡಿಸಿದಾಗ ಪ್ರಕರಣದ ಕರಾಳ ಮುಖ ಅನಾವರಣಗೊಂಡಿದೆ. ಆರೋಪಿಯು ಕಾಂಗ್ರೆಸ್ ನಾಯಕರೊಬ್ಬರ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ 5 ಲಕ್ಷ ರೂಪಾಯಿ ಪೀಕಿದ್ದಾನೆಎಂದು ತಿಳಿದು ಬಂದಿದೆ.
ಈ ಸಂಬಂಧ ನವೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ನಾಯಕನನ್ನು ಭೇಟಿ ಮಾಡಿ ವಿಡಿಯೋ ಸ್ಕ್ರೀನ್ ಶಾಟ್ ತೋರಿಸಿರುವುದಾಗಿ ಸಿಸಿಬಿ ತನಿಖಾಧಿಕಾರಿಗಳ ಮುಂದೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.