ಬೆಂಗಳೂರು:ಕೊರೊನಾ ವೈರಸ್ ಸೋಂಕು ಹರಡದಂತೆ ರಾಜ್ಯದ ನ್ಯಾಯಾಲಯಗಳು ಹೇಗೆ ಕಾರ್ಯನಿವರ್ಹಿಸಹಬೇಕು ಎಂಬುದರ ಕುರಿತು ಈಗಾಗಲೇ ಎಸ್ಒಪಿ ಮಾರ್ಗಸೂಚಿಗಳನ್ನು ನೀಡಿರುವ ಹೈಕೋರ್ಟ್ ಮತ್ತೇನಾದರೂ ಸಲಹೆಗಳಿದ್ದರೆ ಅವನ್ನು ತಿಳಿಸುವಂತೆ ವಕೀಲರಿಗೆ ಸೂಚಿಸಿದೆ.
ನ್ಯಾಯಾಲಯಗಳ ಕಾರ್ಯನಿರ್ವಹಣೆ ವಿಚಾರ: ಸಲಹೆ ನೀಡಲು ವಕೀಲರಿಗೆ ಹೈಕೋರ್ಟ್ ಸೂಚನೆ - High Court heard
ರಾಜ್ಯದಲ್ಲಿ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳನ್ನು ನಡೆಸಲು ಹೈಕೋರ್ಟ್ ಈಗಾಗಲೇ ಹಲವು ಮಾರ್ಗಸೂಚಿಗಳನ್ನು ನೀಡಿದ್ದು, ಮತ್ತೇನಾದರೂ ಸಲಹೆಗಳಿದ್ದರೆ ಅವನ್ನು ತಿಳಿಸುವಂತೆ ಸೂಚಿಸಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ಸೂಚನೆ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ನೋಟಿಫಿಕೇಷನ್ ಹೊರಡಿಸಿದ್ಜಾರೆ. ರಾಜ್ಯದಲ್ಲಿ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳನ್ನು ನಡೆಸಲು ಹೈಕೋರ್ಟ್ ಈಗಾಗಲೇ ಹಲವು ಮಾರ್ಗಸೂಚಿಗಳನ್ನು ನೀಡಿದೆ. ಈ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ಒಪಿ)ಗೆ ಯಾವುದಾದರೂ ಬದಲಾವಣೆ ತರುವ ಅಗತ್ಯವಿದೆ ಅನ್ನಿಸಿದಲ್ಲಿ ಅಂತಹ ಮಾಹಿತಿಯನ್ನು ನೀಡುವಂತೆ ವಕೀಲ ಸಮುದಾಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಎಸ್ಒಪಿ ಮಾರ್ಗಸೂಚಿಗಳಿಗೆ ಬದಲಾವಣೆ ತರಬೇಕೆಂಬ ಮಾಹಿತಿಗಳಿದ್ದರೆ ಅವನ್ನು ಹೈಕೋರ್ಟ್ನ ಇ-ಮೇಲ್ regadmin@hck.gov.in ಐಡಿಗೆ ಜೂ. 7ರ ಒಳಗೆ ಕಳುಹಿಸಿಕೊಡುವಂತೆ ತಿಳಿಸಲಾಗಿದೆ. ಹೈಕೋರ್ಟ್ ಮೇ 26ರಂದು ಕೊರೊನಾ ವೈರಸ್ ಸೋಂಕು ಹರಡದಂತೆ ರಾಜ್ಯದ ಜಿಲ್ಲಾ ಮತ್ತು ವಿಚಾರಣಾ ಕೋರ್ಟ್ಗಳು ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿತ್ತು.