ಕರ್ನಾಟಕ

karnataka

ETV Bharat / state

ಮೆರಿಟ್​​ ಸರ್ಕಾರಿ ಕೋಟಾ‌ದ ಮೆಡಿಕಲ್​​ ಸೀಟು ಶುಲ್ಕ ವಿಚಾರ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಸೂಚನೆ - ಮೆರಿಟ್ ಸರ್ಕಾರಿ ಕೋಟಾ‌ ಮೆಡಿಕಲ್ ಸೀಟು

ಮೆರಿಟ್ ಆಧಾರದಲ್ಲಿ ಸರ್ಕಾರಿ ಸೀಟು ಪಡೆದ ವೈದ್ಯಕೀಯ ವಿದ್ಯಾರ್ಥಿಗಳ ಶುಲ್ಕದಲ್ಲಿನ ತಾರತಮ್ಯದ ಬಗ್ಗೆ ಸರ್ಕಾರ ಹಾಗೂ ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳಿಗೆ 4 ವಾರಗಳಲ್ಲಿ ಮರು ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.

ಹೈಕೋರ್ಟ್ ಆದೇಶ

By

Published : Aug 22, 2019, 10:14 AM IST

ಬೆಂಗಳೂರು:ಮೆರಿಟ್ ಆಧಾರದಲ್ಲಿ ಸರ್ಕಾರಿ ಸೀಟು ಪಡೆದ ವೈದ್ಯಕೀಯ ವಿದ್ಯಾರ್ಥಿಗಳ ಶುಲ್ಕದಲ್ಲಿನ ತಾರತಮ್ಯದ ಬಗ್ಗೆ ಸರ್ಕಾರ ಹಾಗೂ ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳಿಗೆ 4 ವಾರಗಳಲ್ಲಿ ಮರು ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ.

ನಗರದ ಡಾ. ಕೆ.ಆರ್.ರವಿಕಿರಣ್ ಸೇರಿ 13 ವೈದ್ಯರು ಸಲ್ಲಿಸಿರುವ ರಿಟ್ ಅರ್ಜಿ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಕೀಲರು‌ ವಾದಿಸಿ ಮೆರಿಟ್ ಆಧಾರದಲ್ಲಿ ಸರ್ಕಾರಿ ವೈದ್ಯಕೀಯ ಸೀಟುಗಳಿಗೆ 2017-18ರ ಶೈಕ್ಷಣಿಕ ಸಾಲಿನಲ್ಲಿ ಇದ್ದ 6 ಲಕ್ಷ ರೂ. ಶುಲ್ಕವನ್ನು 2018-19ರ ಸಾಲಿನಲ್ಲಿ 2,74,250 ರೂ. ಗಳಿಗೆ ಇಳಿಕೆ ಮಾಡಿದ್ದಾರೆ .

ಹೀಗಾಗಿ‌ ಶುಲ್ಕ ನಿಗದಿಯಲ್ಲಿನ‌ ತಾರತಮ್ಯ ಸರಿಪಡಿಸಬೇಕೆಂದು ನ್ಯಾಯಲಯಕ್ಕೆ ಮನವಿ ಮಾಡಿದರು. ಈ ವೇಳೆ ನ್ಯಾಯಪೀಠ ಸರ್ಕಾರ ಹಾಗೂ ವೃತ್ತಿಪರ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಸಂಘಕ್ಕೆ 4 ವಾರಗಳಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿಕೆ ಮಾಡಿದೆ.

ABOUT THE AUTHOR

...view details