ಬೆಂಗಳೂರು: ರಾಜ್ಯದಲ್ಲಿ ಇ-ಸಿಗರೇಟ್ ಮೇಲಿನ ನಿರ್ಬಂಧ ತೆರವುಗೊಳಿಸಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಮುಂಬೈನ ಕೌನ್ಸಿಲ್ ಫಾರ್ ಹಾರ್ಮ್ ರೆಡ್ಯೂಸ್ ಅಲ್ಟರ್ನೇಟಿವ್ ಕಂಪನಿಗೆ ಹೈಕೊರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಇ-ಸಿಗರೇಟ್ ನಿರ್ಬಂಧ ತೆರವು ಕೋರಿದ್ದ ಖಾಸಗಿ ಕಂಪೆನಿಗೆ 1 ಲಕ್ಷ ರೂ ದಂಡ: ಹೈಕೋರ್ಟ್ ಆದೇಶ
ರಾಜ್ಯದಲ್ಲಿ ಇ-ಸಿಗರೇಟ್ ಮೇಲಿನ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಕೋರಿ ಖಾಸಗಿ ಕಂಪನಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಗೆತ್ತಿಕೊಳ್ಳಲು ನಿರಾಕರಿಸಿರುವ ಹೈಕೋರ್ಟ್, ಸಿಗರೇಟ್ ಮೇಲಿನ ನಿರ್ಬಂಧ ತೆರವುಗೊಳಿಸಬೇಕೆಂದು ಕೋರುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಅರ್ಜಿ ತಿರಸ್ಕರಿಸಿದ್ದು, ದಂಡ ವಿಧಿಸಿದೆ.
ಇ-ಸಿಗರೇಟ್ ನಿರ್ಬಂಧ ತೆರವು ಮಾಡುವಂತೆ ಪಿಐಎಲ್ ಸಲ್ಲಿಸುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಎಲ್ಲಿದೆ? ಎಂದು ಅರ್ಜಿದಾರರನ್ನು ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದೆ. ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲವೆಂದು ಅಭಿಪ್ರಾಯಪಟ್ಟಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಅವರಿದ್ದ ಪೀಠ, ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕೆ ಭಾರಿ ಮೊತ್ತದ ದಂಡ ವಿಧಿಸಿ, ಅರ್ಜಿ ತಿರಸ್ಕರಿಸಿದೆ.
ಕೊರ್ಟ್ಗೆ ಪಿಐಎಲ್ ಸಲ್ಲಿಸಿದ್ದ ಮುಂಬೈ ಮೂಲದ ಕಂಪೆನಿಯು, ರಾಜ್ಯದಲ್ಲಿ ಇ-ಸಿಗರೇಟ್ ನಿರ್ಬಂಧ ಮಾಡಿದ್ದರಿಂದ ಉತ್ಪಾದಕರಿಗೆ ನಷ್ಟ ಆಗಿದೆ ಎಂದು PILನಲ್ಲಿ ತಿಳಿಸಿತ್ತು.