ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ವಕೀಲರು ಆಗಮಿಸದೇ ಇದ್ದುದರಿಂದ ವಿಚಾರಣೆಗೆ ನಿಗದಿಪಡಿಸಿದ್ದ ಪ್ರಕರಣಗಳನ್ನು ಮುಂದೂಡಲಾಯಿತು.
ಕೊರೊನಾ ವೈರಸ್ ತಡೆಗಟ್ಟಲು ಹೈಕೋರ್ಟ್ ಮತ್ತು ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಏಪ್ರಿಲ್ 6ರವರೆಗೆ ರಜೆ ನೀಡಲಾಗಿದೆ. ಹಾಗಿದ್ದೂ ಹೈಕೋರ್ಟ್ನ ಮೂರು ಪೀಠಗಳಲ್ಲಿ ತುರ್ತು ಪ್ರಕರಣಗಳ ವಿಚಾರಣೆ ನಡೆಯಿತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಲು ಹಾಜರಾಗಬೇಕಿದ್ದ ವಕೀಲರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಕೋರ್ಟ್ಗೆ ಬಂದಿರಲಿಲ್ಲ. ಹೀಗಾಗಿ ವಕೀಲರು ಹಾಜರಿರದ ಪ್ರಕರಣಗಳನ್ನು ಖುದ್ದು ನ್ಯಾಯಮೂರ್ತಿಗಳೇ ಕಾಸ್ ಲಿಸ್ಟ್ ಹಿಡಿದು ನಂಬರ್ಗಳನ್ನು ಕೂಗಿ ವಿಚಾರಣೆ ಮುಂದೂಡಿದರು.