ಕರ್ನಾಟಕ

karnataka

ETV Bharat / state

ಬಿಬಿಎಂಪಿ ಚುನಾವಣೆ ವಿಚಾರಣೆ ಆಗಸ್ಟ್ 29ಕ್ಕೆ ಮುಂದೂಡಿದ ಹೈಕೋರ್ಟ್.. ಕಾಂಗ್ರೆಸ್ ನಾಯಕ ನಾಗರಾಜು

ಬಿಬಿಎಂಪಿ ಚುನಾವಣೆಯ ಆಕ್ಷೇಪಣೆಯ ವಿಚಾರಣೆ ಹೈಕೋರ್ಟ್ ಆಗಸ್ಟ್​ 29ಕ್ಕೆ ಮುಂದೂಡಿದೆ ಎಂದು ಕಾಂಗ್ರೆಸ್ ನಾಯಕ ಎನ್​ ನಾಗರಾಜು ತಿಳಿಸಿದ್ದಾರೆ.

the-high-court-adjourned-the-hearing-of-bbmp-election
ಬಿಬಿಎಂಪಿ ಚುನಾವಣೆ ವಿಚಾರಣೆಯನ್ನು ಆಗಸ್ಟ್ 29 ಕ್ಕೆ ಮುಂದೂಡಿದ ಹೈಕೋರ್ಟ್.. ಕಾಂಗ್ರೆಸ್ ನಾಯಕ ನಾಗರಾಜು

By

Published : Aug 18, 2022, 11:30 AM IST

ಬೆಂಗಳೂರು: ಬಿಬಿಎಂಪಿ ಚುನಾವಣೆ ಆಕ್ಷೇಪಣೆ ಬಗ್ಗೆ ಸುಪ್ರೀಂಕೋರ್ಟ್ ನಿಂದಲೇ ಸ್ಪಷ್ಟನೆ ಪಡೆಯುವುದು ಸೂಕ್ತ ಎಂದು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಈ ಬಗ್ಗೆ ಹೈಕೋರ್ಟ್ ತನ್ನ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ ಎಂದು ಕಾಂಗ್ರೆಸ್ ನಾಯಕ ಎನ್.ನಾಗರಾಜು ತಿಳಿಸಿದ್ದಾರೆ.

ಇಂದು ಪಾಲಿಕೆ ಚುನಾವಣೆ ಸಂಬಂಧ ಹೈಕೋರ್ಟ್ ವಿಚಾರಣೆ ಬಳಿಕ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಶೀಘ್ರವಾಗಿ ಚುನಾವಣೆ ನಡೆಸಲು ಸೂಚಿಸಿದೆ. ಅರ್ಜಿದಾರರಿಗೆ ಆಕ್ಷೇಪಣೆಗಳಿದ್ದರೆ ಸುಪ್ರೀಂಕೋರ್ಟ್​​​ಗೆ ಅರ್ಜಿ ಸಲ್ಲಿಸಿ, ಅಲ್ಲಿಂದನೇ ಸ್ಪಷ್ಟನೆ ಪಡೆಯಲು ಹೇಳಿದೆ ಎಂದು ಹೇಳಿದರು. ಸೆಪ್ಟೆಂಬರ್ 22 ರೊಳಗೆ ಮತದಾರರ ಪಟ್ಟಿ ಅಂತಿಮಗೊಳಿಸಲಾಗುವುದು. ನಂತರ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಚುನಾವಣಾ ಆಯೋಗ ಕೋರ್ಟ್​​ಗೆ ತಿಳಿಸಿರುವುದಾಗಿ ಮಾಹಿತಿ ನೀಡಿದರು.

ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಚುನಾವಣೆ ವಿಳಂಬವಾಗಲು ಬಿಜೆಪಿ ಸರ್ಕಾರ ಹೊಣೆ. ವಾರ್ಡ್ ವಿಂಗಡನೆಯಲ್ಲಿ ರಾಜಕೀಯ ದುರುದ್ದೇಶ ಇದೆ. ಕಾಂಗ್ರೆಸ್ ಪಕ್ಷದ ಶಾಸಕರು ಇರುವ ಕ್ಷೇತ್ರದಲ್ಲಿ 39 ಸಾವಿರ ಮತದಾರರಿಗೆ ವಾರ್ಡ್ ಮಾಡಿದ್ದಾರೆ. ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲಿ 30 ಸಾವಿರ ಮತದಾರರಿಗೆ ವಾರ್ಡ್ ರೂಪಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು ವಾರ್ಡ್ ವಿಂಗಡನೆ ಮಾಡಬೇಕು : ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರದಲ್ಲಿ ಮತದಾರರು ಸಂಖ್ಯೆ ಹೆಚ್ಚಿದ್ದರೂ ವಾರ್ಡ್ ಸಂಖ್ಯೆ ಕಡಿಮೆ ಮಾಡಿದ್ದಾರೆ. ಹಾಗಾಗಿ ಆಯುಕ್ತರು, ಜಿಲ್ಲಾಧಿಕಾರಿಗಳು ವಾರ್ಡ್ ವಿಂಗಡನೆ ಮಾಡಬೇಕು. ಬಿಜೆಪಿ ಶಾಸಕರ ಆದೇಶದ ಮೇರೆಗೆ ವಾರ್ಡ್ ವಿಂಗಡನೆ ಮಾಡಲಾಗಿದೆ ಎಂದು ದೂರಿದರು.

ನ್ಯಾಯಾಲಯದ ತೀರ್ಮಾನಕ್ಕೆ ಬದ್ಧ: ನ್ಯಾಯಯುತವಲ್ಲದ, ಜನ ಪರ ಮಾನದಂಡವಿಲ್ಲದ, ಬಿಜೆಪಿ ಶಾಸಕರ ಹಿತಾಸಕ್ತಿ ಅನುಗುಣವಾಗಿ ವಾರ್ಡ್ ವಿಂಗಡನೆಯಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ, ನ್ಯಾಯಾಲಯ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ :ಜಂಬೂಸವಾರಿಗೆ ದಿನಗಣನೆ: ಗಜಪಡೆ ಕ್ಯಾಪ್ಟನ್ ಅಭಿಮನ್ಯುಗೆ ಭಾರದ ತಾಲೀಮು

ABOUT THE AUTHOR

...view details