ಕರ್ನಾಟಕ

karnataka

ETV Bharat / state

ಭಾರತೀಯರ ಮನಸ್ಸಿನಲ್ಲಿ ಕಾಫಿ ಬೀಜ ಬಿತ್ತಿದ ಸಿದ್ಧಾರ್ಥ್​... ಇದು ಕಾಫಿ ಡೇ ಸಕ್ಸಸ್​ ಸ್ಟೋರಿ! - ಸಿದ್ಧಾರ್ಥ್​ ನಾಪತ್ತೆ

ಸಿದ್ಧಾರ್ಥ್​ ಅವರನ್ನು ಮಾಜಿ ಸಿಎಂ ಎಸ್​ಎಂ ಕೃಷ್ಣ ಅವರ ಅಳಿಯ ಎಂದು ಗುರುತಿಸುವವರು ಬಹಳ ಮಂದಿ, ಅದಕ್ಕೂ ಮುನ್ನ ಅವರೊಬ್ಬ ಯಶಸ್ವಿ ಕಾಫಿ ಉದ್ಯಮಿ.

ಭಾರತೀಯರ ಮನಸ್ಸಿನಲ್ಲಿ ಕಾಫಿ ಬೀಜ ಬಿತ್ತಿದ ಸಿದ್ಧಾರ್ಥ್

By

Published : Jul 30, 2019, 2:15 PM IST

ಬೆಂಗಳೂರಿಂದ ಮೈಸೂರಿಗೆ ಪ್ರಯಾಣಿಸಿದರೆ ಪ್ರತೀ ಜಂಕ್ಷನ್​ನಲ್ಲೂ ಕಾಫಿ ಡೇ ಇದೆ. ಈ ಕಾಫಿ ಔಟ್​ಲೆಟ್​ಗಳು ಕರ್ನಾಟಕಕ್ಕಷ್ಟೇ ಸೀಮಿತವಲ್ಲ, ಭಾರತದಾದ್ಯಂತ ತನ್ನ ಕಬಂದ ಬಾಹುಗಳನ್ನು ಚಾಚಿವೆ. ವಿದೇಶಗಳಲ್ಲೂ ಕಾಫಿ ಡೇ ಶಾಖೆಗಳಿವೆ. ಇಂತಹ ಬೃಹತ್​ ಉದ್ಯಮ ಶುರುವಾಗಿದ್ದು ಕೇವಲ 2 ಲಕ್ಷ ರೂಪಾಯಿಯಿಂದ, ಅಚ್ಚರಿ ಎನಿಸಿದರೂ ಹೌದು, ಈ ಸಕ್ಸಸ್​ ಸ್ಟೋರಿಯ ಹೀರೋ ಉದ್ಯಮಿ ವಿ.ಜಿ. ಸಿದ್ಧಾರ್ಥ್​.

ಕುಟುಂಬದ ಜೊತೆ ಸಿದ್ಧಾರ್ಥ್

ಸಿದ್ಧಾರ್ಥ್​ ಅವರನ್ನು ಮಾಜಿ ಸಿಎಂ ಎಸ್​ಎಂ ಕೃಷ್ಣ ಅವರ ಅಳಿಯ ಎಂದು ಗುರುತಿಸುವವರು ಬಹಳ ಮಂದಿ, ಅದಕ್ಕೂ ಮುನ್ನ ಅವರೊಬ್ಬ ಯಶಸ್ವಿ ಕಾಫಿ ಉದ್ಯಮಿ.

140 ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ 350 ಎಕರೆ ಕಾಫಿ ಎಸ್ಟೇಟ್​ ಇರುವ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಸಿದ್ಧಾರ್ಥ್​ ಅವರು ಮಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಉದ್ಯಮ ಕ್ಷೇತ್ರದಲ್ಲಿ ಬಹಳಷ್ಟು ಆಸಕ್ತಿ ಇದ್ದ ಸಿದ್ಧಾರ್ಥ್​ ಅವರಿಗೆ ತಮ್ಮ ಕುಟುಂಬಕ್ಕಿಂತ ದೊಡ್ಡ ಉದ್ಯಮ ಸೃಷ್ಟಿ ಮಾಡುವ ಮಹತ್ವಾಕಾಂಕ್ಷೆ ಇತ್ತು.

ಪತ್ನಿ ಜೊತೆ ಸಿದ್ಧಾರ್ಥ್

ಅಪ್ಪ 5 ಲಕ್ಷ ರೂ. ಕೊಟ್ಟರು: ಸಿದ್ಧಾರ್ಥ್​ ಅವರ ತಂದೆ 5 ಲಕ್ಷ ರೂ. ಅನ್ನು ಮಗನಿಗೆ ಕೊಟ್ಟು ಉದ್ಯಮ ಶುರು ಮಾಡುವಂತೆ ಹೇಳಿದ್ದರು. ಇದರಲ್ಲಿ ಮೂರು ಲಕ್ಷ ರೂ.ಗೆ ತುಂಡು ಭೂಮಿ ಖರೀದಿಸಿದ ಅವರು, ಮಿಕ್ಕ ಎರಡು ಲಕ್ಷ ರೂಪಾಯನ್ನು ಉಳಿತಾಯವಾಗಿ ಇಟ್ಟುಕೊಂಡಿದ್ದರು.

ಎಲಿವೇಟರ್​ ಬಳಸದೆ 6 ಫ್ಲೋರ್​ ಹತ್ತಿದರು: ಸಿದ್ಧಾರ್ಥ್​ ಅವರು ಮಹೇಂದ್ರ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಮಹೇಂದ್ರ ಕಂಪಾನಿ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಮುಂಬೈ ಕಚೇರಿಗೆ ತೆರಳಿದರು. ಅಲ್ಲಿನ ಎಲಿವೇಟರ್​ ಕಂಡು ಹೇಗೆ ಬಳಸಬೇಕು ಎಂಬುದನ್ನೂ ತಿಳಿಯದ ಅವರು ಮೆಟ್ಟಿಲುಗಳ ಮೂಲಕ ಆರನೇ ಫ್ಲೋರ್​ ತಲುಪಿದರು. ಯಾವುದೇ ಅಪಾಯಿಂಟ್​ಮೆಂಟ್​ ಇಲ್ಲದೇ ಮಹೇಂದ್ರ ಅವರನ್ನು ಭೇಟಿ ಮಾಡುವುದು ಕಷ್ಟವಾಗಿತ್ತು ಆದರೆ, ಅವರ ಸೆಕ್ರೇಟರಿ ಬೆಂಗಳೂರಿನವರೇ ಆಗಿದ್ದರಿಂದ ನೇರವಾಗಿ ಭೇಟಿಯಾಗಲು ಅವಕಾಶ ಕೊಟ್ಟರು. ತಮ್ಮ ಆಕಾಂಕ್ಷೆಗಳನ್ನೇಲ್ಲಾ ಅವರ ಮುಂದೆ ಹೇಳಿದಾಗ ಒಂದು ಪರಿಚಯ ಪತ್ರವನ್ನು ಬರೆದುಕೊಡುವಂತೆ ಹೇಳಿದರು. ವರ್ಷಗಳ ಕಾಲ ಮಹೇಂದ್ರ ಕಂಪಾನಿ ಅವರ ಹತ್ತಿರದಲ್ಲೇ ಕೆಲಸ ಮಾಡಿದ ಸಿದ್ಧಾರ್ಥ್​ ಅವರು ಉದ್ಯಮದ ಏಳು ಬೀಳುಗಳನ್ನು ಸೂಕ್ಷ್ಮವಾಗಿ ಗಮನಿಸಿದರು.

ತಮ್ಮ ಕುಟುಂಬದೊಂದಿಗೆ

ಅಲ್ಲಿಂದ ಬೆಂಗಳೂರಿಗೆ ವಾಪಸ್​ ಬಂದ ಸಿದ್ಧಾರ್ಥ್​ ಅವರು ತಮ್ಮದೇ ಆದ ಸ್ವಂತ ಕಂಪನಿ ಆರಂಭಿಸುವತ್ತ ಮೊದಲ ಹೆಜ್ಜೆ ಇಟ್ಟರು. ಷೇರು ಮಾರುಕಟ್ಟೆ ಪಾತಾಳ ಕಂಡಿದ್ದ ಆ ದಿನಗಳಲ್ಲಿ ಸಿವನ್​ ಸೆಕ್ಯುರಿಟೀಸ್​ ಎಂಬ ಕಂಪನಿಯ 30 ಸಾವಿರ ರೂ. ಮೌಲ್ಯದ ಷೇರುಗಳನ್ನು ಖರೀದಿಸಿ ಸಂಸ್ಥೆಯ ಮುಖ್ಯ ಪಾಲುದಾರರಾದರು. ಅಲ್ಲಿಂದ ಅವರ ಉದ್ಯಮದ ಜೀವನ ಆರಂಭವಾಯಿತು. ತಮ್ಮ ಉಳಿತಾಯದಲ್ಲೇ ಸಿದ್ಧರ್ತ್​ ಆ 30 ಸಾವಿರ ವ್ಯಯಿಸಿದ್ದರು.

ಕಾಫಿ ಡೇ ಬೀಜ ಬಿತ್ತಿದ್ದು ಹೀಗೆ: ಸಿದ್ಧಾರ್ಥ್​ ಅವರು ಒಮ್ಮ ಜರ್ಮನಿಯ ಚಿಬೊ ಎನ್ನುವ ಕಾಫಿ ಬ್ರಾಂಡ್​ ಉದ್ಯಮಿಯನ್ನು ಭೇಟಿಯಾಗಿ ಮಾತನಾಡಿದ್ದರು. ಅಲ್ಲಿಂದೀಚೆಗೆ ಭಾರತದಲ್ಲೂ ಕಾಫಿ ಔಟ್​ಲೆಟ್​ಗಳನ್ನು ತೆರೆದು ಭಾರತೀಯರ ಪಾನೀಯ ಸಂಪ್ರದಾಯವನ್ನು ಬದಲಿಸಬೇಕೆಂಬ ಆಸೆ ಚಿಗುರೊಡೆಯಿತು.

1993ರ ವೇಳೆಗೆ ಅಮಲ್ಗ್​ಮೆಟೆಡ್​ ಬೀನ್​ ಕಾಫಿ ಟ್ರೇಡಿಂಗ್​ ಕಂಪನಿ(Amalgamated Bean Coffee Trading Company Ltd) ಹೆಸರಿನಲ್ಲಿ ಕಾಫಿ ರಫ್ತು ಮಾಡಿದರು. ಅದೇ ವೇಳೆಗೆ ಅವರು ಕಾಫಿ ಕ್ಯೂರಿಂಗ್​ ಯುನಿಟ್​ಗಳನ್ನು ಆರಂಭಿಸಿದರು. ಈ ಕಂಪನಿಯು ಎರಡೇ ವರ್ಷಗಳಲ್ಲಿ ಬೆಳೆಯಿತು. ಭಾರತದಲ್ಲಿ ಅತಿ ಹೆಚ್ಚು ಕಾಫಿ ರಫ್ತು ಮಾಡುವ ಸಂಸ್ಥೆಯ ಮಾಲೀಕರಾಗಿ ಸಿದ್ಧಾರ್ಥ್​ ಹೊರಹೊಮ್ಮಿದರು.

ಸಿದ್ಧಾರ್ಥ್​ ರವರ ಮನೆ

ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ಉದ್ಯಮ ಬಹಳ ಕಾಲ ಉಳಿಯಬೇಕೆಂದರೆ, ಟಾಪ್​ ಸೆಲ್ಲರ್​ ಆಗಬೇಕೆಂದರೆ ಒಂದು ಹೊಸ ಸಾಹಸವನ್ನೇ ಮಾಡಬೇಕೆಂದು ಅರಿತ ಅವರು, ಮೊದಲಿಗೆ ಕಾಫಿ ಮೇಲೆ ಕೇಂದ್ರ ಸರ್ಕಾರಕ್ಕಿದ್ದ ಏಕಸ್ವಾಮ್ಯತೆಯನ್ನು ಕೈಬಿಡುವಂತೆ ಮೇಲಿಂದ ಮೇಲೆ ಮನವಿ ಮಾಡಿದರು. 1996ರಲ್ಲಿ ಬೆಂಗಳೂರು, ಹಾಗೂ ಚೆನ್ನೈನಲ್ಲಿ ಕಾಫಿ ಔಟ್​ಲೆಟ್​ಗಳನ್ನು ಆರಂಭಿಸಿದರು. ಬೆಂಗಳೂರಿನ ಬ್ರಿಗೇಡ್​ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭವಾಯಿತು.

ಕಾಫಿ ಜೊತೆಯಲ್ಲಿ ಮಾರಾಟ ಮಾಡಬಹುದಾದ ಬಿಸ್ಕತ್ತು, ಇತರೇ ತಿನಿಸುಗಳನ್ನೂ ಅದೇ ಔಟ್​ಲೆಟ್​ಗಳಲ್ಲಿ ಕಾಫಿ ಡೇ ಹೆಸರಲ್ಲೇ ಖ್ಯಾತಿ ಪಡೆಯುವಂತೆ ಮಾಡಿದರು. ಕ್ರಮೇಣ ಕಾಫಿ ಡೇಗಳು ಯುವ ಸಮೂಹದ ಒಂದು ಅಡ್ಡೆಯಾಗಲು ಶುರುವಾಯಿತು.

ಕಾಫಿ ಡೇ

20 ವರ್ಷಗಳಲ್ಲಿ ಕೆಫೆ ಕಾಫಿ ಡೇ ಭಾರತ, ಮಲೇಷ್ಯಾ, ಈಜಿಪ್ಟ್​, ಆಸ್ಟ್ರೇಲಿಯಾ, ಜೆಕ್​ ಗಣರಾಜ್ಯ ಸೇರಿದಂತೆ ಹಲವು ದೇಶಗಳಲ್ಲಿ 1500 ಔಟ್​ಲೆಟ್​ಗಳು ಆರಂಭವಾದವು. 2015ರ ವೇಳೆಗೆ ಸಿಸಿಡಿ ಅಥವಾ ಕೆಫೆ ಕಾಫಿ ಡೇಯ ಒಟ್ಟು ಟರ್ನ್​ ಓವರ್​ 200 ಮಿಲಿಯನ್​ ಡಾಲರ್​ ತಲುಪಿತು.

ABOUT THE AUTHOR

...view details