ಬೆಂಗಳೂರು:ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸೇವೆಗೆ ಗೈರು ಹಾಜರಾಗಿ ಪ್ರತಿಭಟಿಸುತ್ತಿದ್ದಾರೆ. ಇಂದು ಸಹ ಪ್ರತಿಭಟನೆ ಮುಂದುವರಿಸಲಿದ್ದು, ಈ ಕುರಿತು ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕೋವಿಡ್ ರಿಸ್ಕ್ ಭತ್ಯೆ ಪಾವತಿ ವಿಳಂಬದ ವಿರುದ್ಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಪ್ರತಿಭಟನೆ ಗಮನಕ್ಕೆ ಬಂದಿದೆ. ಈ ಕುರಿತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮೆಡಿಕಲ್ ಕಾಲೇಜುಗಳಿಗೆ ರಿಸ್ಕ್ ಭತ್ಯೆಯ ಒಟ್ಟು 73 ಕೋಟಿ ಮೊತ್ತದ ಮಂಜೂರು ಪ್ರಕ್ರಿಯೆಗಳು ಸೋಮವಾರ ಪೂರ್ಣಗೊಳ್ಳಲಿವೆ. ಮುಂದಿನ ಎರಡು - ಮೂರು ದಿನಗಳಲ್ಲಿ ರಿಸ್ಕ್ ಭತ್ಯೆಯನ್ನು ಎಲ್ಲ ವೈದ್ಯರಿಗೂ ಪಾವತಿಸಲಾಗುವುದು. ಆದ್ದರಿಂದ ಈ ಸಂದರ್ಭದಲ್ಲಿ ಪ್ರತಿಭಟನೆ ಹಿಂಪಡೆದು ಕರ್ತವ್ಯಕ್ಕೆ ಮರಳಬೇಕು ಎಂದು ಕೋರಿದ್ದಾರೆ.
ಓದಿ:ಹಾವೇರಿಯಲ್ಲಿ ದನ ಬೆದರಿಸುವ ಸ್ಪರ್ಧೆ: ವ್ಯಕ್ತಿಯನ್ನು ಮೇಲಕ್ಕೆತ್ತಿ ಎಸೆದ ಹೋರಿ.. VIDEO
ಬೃಹತ್ ಜಾಥಾಗೆ ಸಜ್ಜು :ಕೋವಿಡ್ ಭತ್ಯೆಯ ವಿಷಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರಿಂದ ಬಂದ ಭರವಸೆ ಮಾತ್ರ ಪ್ರತಿಕ್ರಿಯೆಯಾಗಿದೆ. ಇದನ್ನು ನಾವು ನಮ್ಮ ಹಿಂದಿನ ಮುಷ್ಕರಗಳಲ್ಲಿ ಸ್ವೀಕರಿಸಿದ್ದೇವೆ. ಆದರೆ, ಇಲ್ಲಿಯವರೆಗೆ ಯಾವುದೇ ಕಿರಿಯ ವೈದ್ಯರು ಒಂದೇ ಒಂದು ಪೈಸೆಯನ್ನು ಪಡೆದಿಲ್ಲ. ಕೋವಿಡ್ ಭತ್ಯೆ ನೀಡುವುದಷ್ಟೇ ಅಲ್ಲ, ನಮ್ಮ ಶೈಕ್ಷಣಿಕ ಶುಲ್ಕಗಳ ಪುನಾರಚನೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ನಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೂ ಈ ಮುಷ್ಕರ ಮುಂದುವರಿಯಲಿದೆ ಅಂತ ತಿಳಿಸಿದ್ದಾರೆ.
ಇಂದು ಎರಡನೇ ದಿನದಂದು ಕರ್ನಾಟಕದಾದ್ಯಂತ ಆಯಾ ಡಿಸಿ ಕಚೇರಿಗಳಿಗೆ ಮೆರವಣಿಗೆ ಹಮ್ಮಿಕೊಂಡಿದ್ದು, ಬೆಂಗಳೂರಿನಲ್ಲಿ ಬಿಎಂಸಿಆರ್ಎಲ್ ನಿಂದ ಟೌನ್ಹಾಲ್ವರೆಗೆ ಮೆರವಣಿಗೆ ನಡೆಸಲು ವೈದ್ಯರ ಸಂಘ ಸಜ್ಜಾಗಿದೆ.