ಬೆಂಗಳೂರು: ಮಹದಾಯಿ ಹೋರಾಟಗಾರರ ನಾಲ್ಕು ಜನ ರೈತರ ಭೇಟಿಗೆ ರಾಜ್ಯಪಾಲ ವಜುಬಾಯಿ ವಾಲಾ ಕಡೆಗೂ ಅವಕಾಶ ನೀಡಿದ್ದಾರೆ.
ಮಹದಾಯಿ ವಿವಾದ: ರೈತರ ಭೇಟಿಗೆ ಅನುಮತಿ ನೀಡಿದ ರಾಜ್ಯಪಾಲರು - Governor vajubai Wala permitesd to the formers visit
ರಾಜ್ಯಪಾಲ ವಜುಬಾಯಿ ವಾಲಾ ಅವರು ಮಹದಾಯಿ ಹೋರಾಟಗಾರರಲ್ಲಿ ನಾಲ್ಕು ಮಂದಿ ರೈತರ ಭೇಟಿಗೆ ಅವಕಾಶ ನೀಡಿದ್ದಾರೆ.

ಮಹದಾಯಿ ಹೋರಾಟಗಾರರು
ಧರಣಿ ನಡೆಸುತ್ತಿರುವ ರೈತರು
ಬೆಂಗಳೂರಿನಲ್ಲಿ ಎರಡನೇ ದಿನದ ಅಹೋರಾತ್ರಿ ಧರಣಿ ನಡೆಸುತ್ತಿರುವ ಮಹದಾಯಿ ಹೋರಾಟಗಾರರು ರಾಜ್ಯಪಾಲರನ್ನು ಭೇಟಿ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದರಿಂದ ಈ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯಪಾಲರ ಭೇಟಿ ವೇಳೆ ಮಹದಾಯಿ ನೀರು ಬಿಡುಗಡೆಗೆ ಅಧಿಸೂಚನೆ ಹೊರಡಿಸಲು ರೈತರು ಮನವಿ ಮಾಡಿಕೊಳ್ಳಲಿದ್ದಾರೆ. ರೈತ ಮುಖಂಡ ವೀರೇಶ್ ಸೊಬರದಮಠ ನೇತೃತ್ವದಲ್ಲಿ ರೈತರು ರಾಜಭವನಕ್ಕೆ ತೆರಳಿದ್ದಾರೆ. ಇತ್ತ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಧರಣಿ ಕುಳಿತಿರುವ ರೈತರನ್ನು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಬಂದು ಭೇಟಿ ಮಾಡಿದ್ದರು.