ಬೆಂಗಳೂರು:ಇನ್ನೂ ಮಂತ್ರಿ ಮಂಡಲವನ್ನೇ ರಚನೆ ಮಾಡದ ಬಿಜೆಪಿ ಸರ್ಕಾರ 'ಅತೃಪ್ತ ಆತ್ಮಗಳ’ ಸರ್ಕಾರವೆಂದು ಜೆಡಿಎಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.
'ಅತೃಪ್ತ ಆತ್ಮಗಳ’ ಸರ್ಕಾರ : ಟ್ವೀಟ್ ಮೂಲಕ ಜೆಡಿಎಸ್ ವ್ಯಂಗ್ಯ - ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ರಾಜ್ಯಾದ್ಯಂತ ಬರ ಹಾಗೂ ಕೆಲವೆಡೆ ನೆರೆಯ ಪರಿಸ್ಥಿತಿಯಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ವಾರವಾದರೂ ಮಂತ್ರಿಮಂಡಲ ರಚಿಸದಿರುವುದು ರಾಜ್ಯದ ಪಾಲಿಗೆ ಅತೃಪ್ತ ಆತ್ಮಗಳ ಸರ್ಕಾರವಾಗಿದೆಯೆಂದು ಜೆಡಿಎಸ್ ಟ್ವೀಟ್ ಮಾಡುವ ಮೂಲಕ ನೂತನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

The government of unhappy souls: JDS criticise BJP in tweet, 'ಅತೃಪ್ತ ಆತ್ಮಗಳ’ ಸರ್ಕಾರ : ಟ್ವೀಟ್ ಮೂಲಕ ಜೆಡಿಎಸ್ ವ್ಯಂಗ್ಯ
ರಾಜ್ಯಾದ್ಯಂತ ಬರ ಹಾಗೂ ಕೆಲವೆಡೆ ನೆರೆಯ ಪರಿಸ್ಥಿತಿಯಿದೆ. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ವಾರವಾದರೂ ಮಂತ್ರಿಮಂಡಲವನ್ನು ರಚಿಸದೇ ಕಾಲಹರಣ ಮಾಡುವ ಮೂಲಕ ಸರ್ಕಾರದ ಆಡಳಿತ ಯಂತ್ರವನ್ನೇ ಸ್ಥಗಿತಗೊಳಿಸಲು ಮುಂದಾಗಿದ್ದಾರೆಂದು ಜೆಡಿಎಸ್ ಟೀಕಿಸಿದೆ.
ಮಂತ್ರಿ ಮಂಡಲ ರಚನೆಯಾಗದಿರುವುದು ರಾಜ್ಯದ ಜನಸಾಮಾನ್ಯರ ಪಾಲಿಗೆ ಒಂಥರಾ ‘ಅತೃಪ್ತ ಆತ್ಮಗಳ’ ಸರ್ಕಾರವಾಗಿದೆ ' ಎಂದು ಜೆಡಿಎಸ್ ಟ್ವೀಟ್ ಮಾಡುವ ಮೂಲಕ ನೂತನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.