ಬೆಂಗಳೂರು:ಬಂದ ಬಂದವರನ್ನ ಸೇರಿಸಿಕೊಳ್ಳುವುದಕ್ಕೆ ಇದೇನು ಲಾಡ್ಜ್ ಅಲ್ಲವೆಂದು ವೈದ್ಯರೊಬ್ಬರು ಬೇಜವಬ್ದಾರಿಯಾಗಿ ಜವಾಬು ಕೊಟ್ಟಿದ್ದಾರೆ ಎನ್ನಲಾದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಲಾಡ್ಜ್ಲ್ಲ, ಇದು ಹಾಸ್ಪಿಟಲ್: ಮಹಿಳಾ ರೋಗಿ ಸಂಬಂಧಿಕರ ಮೇಲೆ ಸರ್ಕಾರಿ ವೈದ್ಯನ ದರ್ಪ! ವಿಡಿಯೋ... - government doctor mistreatment on female patient,
ಬಂದ ಬಂದವರನ್ನ ಸೇರಿಸಿಕೊಳ್ಳುವುದಕ್ಕೆ ಇದೇನು ಲಾಡ್ಜ್ ಅಲ್ಲ.. ಇಲ್ಲಿಂದ ಹೋಗ್ತಿರಿ ಎಂದು ಮಹಿಳಾ ರೋಗಿವೋರ್ವರ ಸಂಬಂಧಿಕರ ಜೊತೆ ಸರ್ಕಾರಿ ವೈದ್ಯ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ಯಲಹಂಕ ಸರ್ಕಾರಿ ಆಸ್ಪತ್ರೆಗೆ ರೋಗಿವೋರ್ವರು ವೈದ್ಯ ಚೇತನ್ ಬಳಿ ತೆರಳಿದ್ದಾರೆ. ಈ ವೇಳೆ ಡಾ. ಚೇತನ್ ಕಷ್ಟ ಅಂತ ಬಂದವರಿಗೆ ಇದು ಲಾಡ್ಜ್ ಅಲ್ಲ.. ಇಲ್ಲಿಂದ ಹೋಗ್ತಿರಿ ಎಂದು ಮಹಿಳಾ ರೋಗಿಯ ಸಂಬಂಧಿಕರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರಿ ಆಸ್ಪತ್ರೆಯ ವೈದ್ಯನ ಈ ದರ್ಪಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಹಿಳೆ ವಾಂತಿಯಿಂದ ಬಳಲುತ್ತಿದ್ದು, ಅಡ್ಮಿಟ್ ಆಗ್ಬೇಕಾ.. ಬೇಡ್ವಾ.. ಅಂತ ಕೇಳಿದ್ದೇ ತಪ್ಪಾಗೋಯ್ತು ಎಂದು ಅಳಲು ತೋಡಿಕೊಂಡಿದ್ದಾರೆ. ಈ ವೈದ್ಯ ಚೇತನ್ ಪ್ರತಿನಿತ್ಯ ರೋಗಿಗಳ ಜೊತೆ ಕಿರಿಕ್ ಮಾಡ್ತಾನೆ ಅನ್ನೋ ಆರೋಪಗಳು ಕೇಳಿ ಬಂದಿವೆ. ವೈದ್ಯನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೋಗಿಯ ಸಂಬಂಧಿಕರು ಆಗ್ರಹಿಸಿದ್ದಾರೆ.