ಕರ್ನಾಟಕ

karnataka

ETV Bharat / state

ಒಂದಂಕಿ ಲಾಟರಿ ಕೇಸ್​ನಲ್ಲಿ ಕ್ಲೀನ್​ ಚಿಟ್... ದೇವರು ಕೈಬಿಡಲಿಲ್ಲವೆಂದು ಭಾವುಕರಾದ ಅಲೋಕ್​ ಕುಮಾರ್ - CBI Clean Cheat to Alok Kumar

ಒಂದಂಕಿ ಲಾಟರಿ ಪ್ರಕರಣದಲ್ಲಿ ಹಾಲಿ ಕೆಎಸ್ಆರ್​ಪಿ ಎಡಿಜಿಪಿ ಅಲೋಕ್‌ ಕುಮಾರ್​ಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಈ ಕುರಿತು ಅಲೋಕ್​ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

The god i trusted never left my hand: ADGP Alok kumar
ನಾನು ನಂಬಿದ ದೇವರು ನನ್ನ ಕೈಬಿಟ್ಟಿಲ್ಲ: ಭಾವುಕರಾಗಿ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್

By

Published : Feb 6, 2020, 9:14 PM IST

ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಒಂದಂಕಿ ಲಾಟರಿ ಪ್ರಕರಣದಲ್ಲಿ ಹಾಲಿ ಕೆಎಸ್ಆರ್​ಪಿ ಎಡಿಜಿಪಿ ಅಲೋಕ್‌ ಕುಮಾರ್​ಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ. ಈ ಬೆನ್ನಲೇ ಅಲೋಕ್​ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ನನ್ನನ್ನು ಸಿಲುಕಿಸಲಾಗಿತ್ತು. ನನ್ನ ಮೇಲೆ ಆರೋಪ ಕೇಳಿಬಂದಾಗಿನಿಂದಲೂ ನಾನು ಯಾರನ್ನು ನಂಬಿರಲಿಲ್ಲ. ನಾನು ನಂಬಿದ್ದು ದೇವರನ್ನು.‌ ಆ ದೇವರು ನನ್ನ ಕೈಬಿಡಲಿಲ್ಲ.‌ ಪ್ರಕರಣದಲ್ಲಿ ನನಗೆ ಜಯ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದರು.

ನಾನು ನಂಬಿದ ದೇವರು ನನ್ನ ಕೈಬಿಟ್ಟಿಲ್ಲ: ಭಾವುಕರಾಗಿ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್

ನಾನು ಪ್ರಮಾಣಿಕವಾಗಿದ್ದೆ. ದೇವರು ನನ್ನ ಕೈಬಿಟ್ಟಿಲ್ಲ. ನನ್ನ ಮೇಲಿನ ಆರೋಪದಿಂದ ನನ್ನ ಕುಟುಂಬ ತೀವ್ರ ದುಃಖಕ್ಕೆ ಒಳಗಾಗಿತ್ತು. ಮಾನಸಿಕವಾಗಿ ತುಂಬಾ ನೊಂದಿದ್ದೆವು. ಬರಬೇಕಿದ್ದ ಸಂಬಳ, ಪ್ರಶಸ್ತಿ ಕೈತಪ್ಪಿದವು. ಅಮೆರಿಕಾದಿಂದ ಬರಬೇಕಿದ್ದ ಸ್ಕಾಲರ್​ಶಿಪ್ ಕೈತಪ್ಪಿತು‌. ಆದರೂ ಕರ್ನಾಟಕದ ಜನತೆ ನನ್ನ ಮೇಲೆ ವಿಶ್ವಾಸ ಇಟ್ಟಿದ್ದರು. ಕೆಲವು ಪೊಲೀಸ್ ಅಧಿಕಾರಿಗಳು ನನ್ನ ವೃತ್ತಿ ಜೀವನವನ್ನು ಮುಗಿಸಲು ಪಣ ತೊಟ್ಟಿದ್ದರು. ಮೊದಲಿನಿಂದಲೂ ನಾನು ಪ್ರಾಮಾಣಿಕನಾಗಿದ್ದೆ. ಈಗ ಜಯ ಸಿಕ್ಕಿದೆ. ನನ್ನ ಪ್ರಾಮಾಣಿಕತೆ ನನ್ನನ್ನು ಈ ಸ್ಥಾನಕ್ಕೆ ನಿಲ್ಲಿಸಿದೆ‌ ಎಂದರು.

ಒಂದಂಕಿ ಲಾಟರಿ ಪ್ರಕರಣದಲ್ಲಿ ಕಳೆದ ಜ.21ರಂದು ಬೆಂಗಳೂರಿನ ಸಿಬಿಐ ಕೋರ್ಟ್​ಗೆ ನಿವೃತ್ತ ಐಜಿ ಸೇರಿ ಹತ್ತು ಪೊಲೀಸರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿತ್ತು. ಸುಳ್ಳು ಕೇಸ್ ಆರೋಪದಡಿ ಎಡಿಜಿಪಿ ಅಲೋಕ್ ಕುಮಾರ್ ಮತ್ತು ನಿವೃತ್ತ ಎಸ್​ಪಿ ಧರಣೇಂದ್ರಗೆ ಕ್ಲೀನ್ ಚಿಟ್ ನೀಡಿದೆ.

ABOUT THE AUTHOR

...view details