ಕರ್ನಾಟಕ

karnataka

ETV Bharat / state

ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಕೂಡಿಟ್ಟ ಹಣ ದೋಚಿದ ದರೋಡೆಕೋರರು - ಚಿಕಿತ್ಸೆಗೆ ಕೂಡಿಟ್ಟ ಹಣ ದೋಚಿ ಪರಾರಿ

ಅ.17 ರಂದು ತಾಯಿಯ ಅಕೌಂಟ್​ಗೆ ಹಾಕಲು ಬ್ಯಾಂಕ್​ಗೆ ತೆರಳಿದ್ದ, ಇದೇ ವೇಳೆ ಯುವಕನ ಬಳಿ ಹಣ ಇರುವುದನ್ನು ಅರಿತ ದರೋಡೆಕೋರರು ಯುವಕನ ಬೈಕ್ ಅನ್ನು ಹಿಂಬಾಲಿಸಿ ಫೇಜರ್ ಟೌನ್​ನ ಐಟಿಸಿ ಬಳಿ ಅಡ್ಡಗಟ್ಟಿ ಚಾಕು ತೋರಿಸಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.

robbed
ದರೋಡೆ

By

Published : Oct 22, 2020, 11:43 PM IST

ಬೆಂಗಳೂರು:ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ ತನ್ನ ತಾಯಿಯ ವೈದ್ಯಕೀಯ ನೆರವಿಗಾಗಿ ಬ್ಯಾಂಕ್​ಗೆ ಹಣ ಹಾಕಲು ತೆರಳಿದ್ದವನಿಗೆ ಚಾಕು ತೋರಿಸಿ ದರೋಡೆ ಮಾಡಿರುವ ಘಟನೆ, ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪತ್ರಾಸ್ ಗುರಿಯಾ ಹಣ ಕಳೆದುಕೊಂಡ ಯುವಕ‌. ಅಸ್ಸಾಂನಲ್ಲಿರುವ ಈತನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿಯ ವೈದ್ಯಕೀಯ ಚಿಕಿತ್ಸೆಗೆ ತಗುಲುವ ಹಣ ಹೊಂದಿಸುತ್ತಿದ್ದ ಈತ ಹಲವು ತಿಂಗಳಿಂದ 27 ಸಾವಿರ ರೂ. ಕೂಡಿಟ್ಟಿದ್ದ. ಈ ಹಣವನ್ನು ಅ.17 ರಂದು ತಾಯಿಯ ಅಕೌಂಟ್​ಗೆ ಹಾಕಲು ಬ್ಯಾಂಕ್​ಗೆ ತೆರಳಿದ್ದ, ಇದೇ ವೇಳೆ ಯುವಕನ ಬಳಿ ಹಣ ಇರುವುದನ್ನು ಅರಿತ ದರೋಡೆಕೋರರು ಯುವಕನ ಬೈಕ್ ಅನ್ನು ಹಿಂಬಾಲಿಸಿ ಫೇಜರ್ ಟೌನ್​ನ ಐಟಿಸಿ ಬಳಿ ಅಡ್ಡಗಟ್ಟಿ ಚಾಕು ತೋರಿಸಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.

ದರೋಡೆಕೋರರು ಸೆರೆಯಾಗಿರುವ ವಿಡಿಯೋ

ಈ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆ ಹೋಗಿ ನಡೆದ ವಿಷಯ ಹೇಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರೋಡೆಕೋರರ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.

ABOUT THE AUTHOR

...view details