ಬೆಂಗಳೂರು :ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಳೆದೂ ತೂಗಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿತು. 224 ಕ್ಷೇತ್ರಗಳ ಪೈಕಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಪಕ್ಷವು ವಲಸಿಗರನ್ನು ಉಳಿಸಿಕೊಂಡಿದ್ದು ಗಮನಾರ್ಹವಾಗಿದೆ.
ಟಿಕೆಟ್ ಪಡೆದ ವಲಸಿಗ ಅಭ್ಯರ್ಥಿಗಳು:
ಗೋಕಾಕ್-ರಮೇಶ್ ಜಾರಕಿಹೊಳಿ
ಅಥಣಿ- ಮಹೇಶ್ ಕುಮಟಳ್ಳಿ
ಕಾಗವಾಡ- ಶ್ರೀಮಂತ ಪಾಟೀಲ್
ಮಸ್ಕಿ- ಪ್ರತಾಪ್ ಗೌಡ ಪಾಟೀಲ್
ಯಲ್ಲಾಪುರ್-ಮುಂಡಗೋಡು- ಹೆಬ್ಬಾರ್
ಹಿರೇಕೆರೂರಿನಲ್ಲಿ- ಬಿ.ಸಿ.ಪಾಟೀಲ್
ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ
ಕೆ.ಆರ್.ಪುರ- ಭೈರತಿ ಬಸವರಾಜ
ಯಶವಂತಪುರ- ಎಸ್.ಟಿ.ಸೋಮಶೇಖರ್
ಆರ್.ಆರ್.ನಗರ- ಮುನಿರತ್ನ
ಮಹಾಲಕ್ಷ್ಮಿ ಲೇಔಟ್- ಗೋಪಾಲಯ್ಯ
ಹೊಸಕೋಟೆ- ಎಂಟಿಬಿ ನಾಗರಾಜ್
ಕೆ.ಆರ್.ಪೇಟೆ- ನಾರಾಯಣ ಗೌಡ
ವಲಸಿಗರಿಗೆಲ್ಲರಿಗೂ ಟಿಕೆಟ್ ನೀಡಲಾಗಿದೆ. ರಾಜ್ಯದಲ್ಲಿ ಮೇ 2018 ರಲ್ಲಿ ಚುನಾವಣೆ ನಡೆದಿದ್ದು, ಬಿಜೆಪಿ 104 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 80 ಸ್ಥಾನಗಳನ್ನು ಗಳಿಸಿತು. ಜೆಡಿಎಸ್ 37 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು. ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ, ಸರ್ಕಾರ ರಚನೆ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು. ಇದರಿಂದ ಚಡಪಡಿಸಿದ್ದ ಬಿಜೆಪಿ, ಆಪರೇಷನ್ ಕಮಲ ಮಾಡಿತು. ಅದು ಯಶಸ್ವಿಯೂ ಆಯಿತು. ಹಾಗಾಗಿ, ಈ ಬಾರಿ ಚುನಾವಣೆಯಲ್ಲೂ ಎಲ್ಲರಿಗೂ ಟಿಕೆಟ್ ಘೋಷಣೆ ಮಾಡಿ ತಮ್ಮ ಮಾತು ಉಳಿಸಿಕೊಂಡಿದೆ.
ಇದನ್ನೂ ಓದಿ:ಕರ್ನಾಟಕ ವಿಧಾನಸಭೆ ಚುನಾವಣೆ: 189 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ವರುಣದಲ್ಲಿ ಸಚಿವ ವಿ ಸೋಮಣ್ಣಗೆ ಟಿಕೆಟ್