ಕರ್ನಾಟಕ

karnataka

ETV Bharat / state

ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ, ಆಪರೇಷನ್ ಕಮಲದ ಅಗತ್ಯವೂ ಇರಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ - ಮೋದಿ ರೋಡ್ ಶೋ

ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 120ರಿಂದ 125ರ ವರೆಗೆ ಸ್ಥಾನ ಲಭಿಸಲಿದ್ದು, ಆಪರೇಷನ್ ಕಮಲದ ಅಗತ್ಯವೂ ಇರಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಮತ

Union Minister Shobha Karandlaje spoke at a press conference.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By

Published : May 11, 2023, 5:29 PM IST

Updated : May 11, 2023, 5:51 PM IST

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು:ಮಾಧ್ಯಮಗಳಲ್ಲಿ ಬಂದಿರುವ ಮತದಾನೋತ್ತರ ವರದಿ ಸುಳ್ಳಾಗಲಿದೆ. ನಮ್ಮ ಕಾರ್ಯಕರ್ತರು ನೀಡಿರುವ ಮಾಹಿತಿಯಂತೆ 120-125 ಸ್ಥಾನ ನಮಗೆ ಬರಲಿದೆ. ಮತ್ತೊಂದು ಪಕ್ಷದ ಅವಲಂಬನೆ ಬರಲ್ಲ, ಆಪರೇಷನ್ ಕಮಲದ ಅಗತ್ಯವೂ ಇರಲ್ಲ, ಈ ಬಾರಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತೇವೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

125ರ ವರೆಗೆ ಸೀಟ್ ಬರುವ ವಿಶ್ವಾಸ: ನಗರದ ಖಾಸಗಿ ಹೋಟೆಲ್​ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಎಕ್ಸಿಟ್ ಪೋಲ್ಅನ್ನು ರಾಜ್ಯದ ಜನರು ಸುಳ್ಳು ಮಾಡುತ್ತಾರೆ ಎಂಬ ನಂಬಿಕೆ ಇದೆ. ಜನ ಉತ್ಸುಕರಾಗಿ ಮಾಡಿದ ಮತದಾನ ಎಕ್ಸಿಟ್ ಪೋಲ್ ಸುಳ್ಳು ಮಾಡುತ್ತೇವೆ. ಮತದಾನಕ್ಕೂ ಮೊದಲು ವರದಿ ನೋಡಿದ್ದೇವೆ ಎಂದರು.

ಮತದಾನ ಮುಗಿದ ಬಳಿಕ ಕೆಲವು ಬದಲಾವಣೆ ಆಗಿದೆ ಹೀಗಾಗಿ ನಮ್ಮ ಕಾರ್ಯಕರ್ತರಿಗೆ ಕಂಡು ಬಂದಿರುವ ಅಭಿಪ್ರಾಯದ ಪ್ರಕಾರ ಬಿಜೆಪಿ ಸರ್ಕಾರ ಬರುತ್ತದೆ. ಕಾರ್ಯಕರ್ತರು ನಿನ್ನೆ ರಾತ್ರಿವರೆಗೂ ಬೂತ್ ನಲ್ಲೇ ಇದ್ದರು ಅವರಿಗೆ ಕಂಡು ಬಂದಿರುವ ವರದಿಯಂತೆ ನಾವು ಅಧಿಕಾರಕ್ಕೆ ಬರುತ್ತೇವೆ. 120ರಿಂದ 125ರ ವರೆಗೆ ನಮಗೆ ಸೀಟ್ ಬರಬಹುದು. ಪ್ರಾಥಮಿಕ ವರದಿ ಪ್ರಕಾರ 120 ಕ್ರಾಸ್ ಮಾಡುತ್ತೇವೆ ಎಂಬ ನಂಬಿಕೆ ಇದೆ ಎಂದರು.

ಚುನಾವಣೋತ್ತರ ಸಮೀಕ್ಷೆಯಲ್ಲಿ ಬೆಂಗಳೂರಲ್ಲಿ ಕಡಿಮೆ ಸ್ಥಾನ ಬಂದಿದೆ. ಆದರೆ ಫಲಿತಾಂಶದಂದು ಬೆಂಗಳೂರಲ್ಲಿ ಹೆಚ್ಚು ಸೀಟು ಗಳಿಸುವ ವಿಶ್ವಾಸ ಇದೆ. ಬಹುಮತದ ಸರ್ಕಾರ ರಚನೆ ಮಾಡುತ್ತೇವೆ ಅಂತಾ ಹೇಳಿದ್ದೆವು. ಅದರಂತೆ ಜನತೆ ಈ ಬಾರಿ ಬಹುಮತದ ಸರ್ಕಾರ ಕೊಡ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಯಡಿಯೂರಪ್ಪನವರ ಹೇಳಿಕೆ ಸುಳ್ಳಾಗಿಲ್ಲ: ಕೇಂದ್ರದ ನಾಯಕರು ರಾಜ್ಯದ ಜನತೆಗೆ ಬಹುಮತದ ಸರ್ಕಾರ ಕೊಡಿ ಎಂದು ಕೇಳಿಕೊಂಡಿದ್ದರು. ಯಡಿಯೂರಪ್ಪನವರ ಹೇಳಿಕೆ ಯಾವತ್ತೂ ಸುಳ್ಳಾಗಿಲ್ಲ. ಅವರ ವರದಿ ಯಾವತ್ತೂ ಸತ್ಯ ಇರುತ್ತದೆ. ಯಾವುದೇ ರೀತಿಯ ಆಪರೇಷನ್ ಕಮಲ‌ ಮಾಡುವ ಪರಿಸ್ಥಿತಿ ಬರಲ್ಲ. ಬಹುಮತದ ಸರ್ಕಾರ ಬರುತ್ತದೆ. ಕಳೆದ ಬಾರಿ ನಮಗೆ 104 ಸೀಟು ಬಂದಿತ್ತು. ಆಗ ನಾಯಿ ನರಿಗಳಂತೆ ಕಿತ್ತಾಡುತ್ತಿದ್ದವರು ಒಟ್ಟಾದರು ಎಂದು ಆರೋಪಿಸಿದರು.

ವರುಣಾದಲ್ಲಿ ಸಿದ್ದರಾಮಯ್ಯ ಸೋಲುತ್ತಾರೋ ಗೊತ್ತಿಲ್ಲ, ವರುಣಾದ ಜನತೆ ಹೇಳಬೇಕು. ಸೋಮಣ್ಣ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಕಟ್ಟಿ ಹಾಕುವ ಕೆಲಸ ಮಾಡಿದ್ದಾರೆ. ಬೆಂಗಳೂರು ಮೋದಿ ರೋಡ್ ಶೋ ಪರಿಣಾಮ ಆಗಿದೆ. ಅದಕ್ಕಾಗಿ ನಾವು ಇಷ್ಟು ನಿರೀಕ್ಷೆ ಮಾಡಿದ್ದೇವೆ ಎಂದರು.

ಮೋದಿ ರೋಡ್ ಶೋ ಮತದಾನ ಹೆಚ್ಚಳ:ಮೋದಿಯವರ ರೋಡ್ ಶೋ ದಿಂದಲೇ ಬೆಂಗಳೂರಿನಲ್ಲಿ 52% ಸರಾಸರಿ ಮತದಾನ ಆಗಿದೆ. ರೋಡ್ ಶೋಗಳಿಲ್ಲದಿದ್ದಿದ್ರೆ ನಗರದಲ್ಲಿ ಇನ್ನೂ ಮತದಾನ ಕಮ್ಮಿ ಆಗುತ್ತಿತ್ತು, ಮೋದಿಯವರಿಗೆ ಜನರು ಆಕರ್ಷಣೆ ಆಗಿದ್ದಾರೆ. ಅದಕ್ಕಾಗಿ ಇಷ್ಟೊಂದು ಮತ ಗಳಿಸುವ ನಿರೀಕ್ಷೆ ಮಾಡಿದ್ದೇವೆ ಎನ್ನುವ ಮೂಲಕ ಮೋದಿಯ ಶಕ್ತಿಯಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ನಿನ್ನೆ 7-6 ಗಂಟೆಯ ವರೆಗೂ ನಡೆದ ಚುನಾವಣೆಯಲ್ಲಿ 72.67ರಷ್ಟು ಮತದಾನ ಮಾಡಿದ್ದಾರೆ. ಕೆಲ ಜಿಲ್ಲೆಗಳಲ್ಲಿ 80ರಷ್ಟು ಮತದಾನ ಆಗಿದೆ. ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆ ನಿಂತಿರೋದೆ ಚುನಾವಣೆ ಮೇಲೆ. ಬಹಳಷ್ಟು ಹಿರಿಯರಿಗೆ ಆನ್ ಲೈನ್ ವ್ಯವಸ್ಥೆ ಮಾಡಿದ್ದರೂ, ಬೂತ್​ಗೆ ಬಂದು ಮತದಾನ ಮಾಡಿದ್ದಾರೆ.ಕೆಲವರು ಆನ್ ಲೈನ್‌ನಲ್ಲಿ ಮತ ಹಾಕಿದ್ದಾರೆ. ಫಸ್ಟ್ ಟೈಮ್ ವೋಟರ್ಸ್ ಮತಗಟ್ಟೆಗೆ ಬಂದು ಮತ ಹಾಕಿದ್ದಾರೆ.ಅದನ್ನ ಡಿಪಿಗೆ, ಸ್ಟೇಟಸ್‌ಗೆ ಹಾಕಿಕೊಂಡಿದ್ದಾರೆ ಎಂದು ಹೇಳಿದರು.

2008, 2013, 2018ರ ಮತದಾನಕ್ಕಿಂತ ಹೆಚ್ಚು ಮತದಾನ ಆಗಿದೆ. ಬೆಂಗಳೂರಿನಲ್ಲಿ ಹೆಚ್ಚು ಮತದಾನ ಆಗಬೇಕು ಅಂತ ಇತ್ತು. ಶೇ.53ರಷ್ಟು ಮಾತ್ರ ಆಗಿದೆ. ವೀಕೆಂಡ್ ಇದ್ದರೆ ಹೊರಗೆ ಹೋಗ್ತಾರೆ ಅಂತ, ವಾರದ ಮಧ್ಯದಲ್ಲಿ ಮತದಾನ ಇಡಲಾಗಿತ್ತು. ಎಲ್ಲಿ ಹೋದರೂ ಬೆಂಗಳೂರಿನಲ್ಲಿ ಮತದಾನ ಆಗಲ್ಲ ಅಂತ ಹೇಳ್ತಾರೆ.

ಬೆಂಗಳೂರಿನ ಜನ ಮುಂದೆ ಉತ್ಸುಕತೆಯಿಂದ ಮತದಾನ ಮಾಡಬೇಕು.ಬಿಜೆಪಿ ಮಾತ್ರವಲ್ಲದೆ, ಎಲ್ಲಾ ರಾಜಕೀಯ ಪಕ್ಷಗಳು ಕೂಡ ಮತದಾನ ಹೆಚ್ಚಾಗಬೇಕು ಅಂತ ಭಾವಿಸುತ್ತಾರೆ. ಬೆಂಗಳೂರಿನ ಜನ ಎಜುಕೇಟೆಡ್ ಆದರೂ ಕೂಡ ಮತದಾನ ಮಾಡಲ್ಲ ಅಂತಿದೆ. ಮತದಾನಕ್ಕೆ ಬಂದ ಎಲ್ಲಾ ನಾಗರಿಕರಿಗೆ ಬಿಜೆಪಿ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.

ಇದನ್ನೂಓದಿ:ಚುನಾವಣೆ ಮಾಡೋದರಲ್ಲಿ ಪಿಹೆಚ್​ಡಿ ಮಾಡಿದ್ದೇನೆ, ಫಲಿತಾಂಶದ ಬಗ್ಗೆ ಭಯವೇ ಇಲ್ಲ : ಸಿ ಎಸ್ ಪುಟ್ಟರಾಜು

Last Updated : May 11, 2023, 5:51 PM IST

ABOUT THE AUTHOR

...view details