ನೆಲಮಂಗಲ: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾಂಕ್ರೀಟ್ ಮಿಕ್ಸರ್ ಲಾರಿ ಪಲ್ಟಿ ಹೊಡೆದು ಕಾಲುವೆಗೆ ಬಿದ್ದ ಪರಿಣಾಮ ಚಾಲಕ ಮತ್ತು ಕ್ಲೀನರ್ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ಸೊಂಡೆಕೊಪ್ಪ ಬಳಿ ನೆಡೆದಿದೆ. ಘಟನೆಯಲ್ಲಿ ಬಿಜಾಪುರ ಜಿಲ್ಲೆ ಅಂಬಳನೂರು ಗ್ರಾಮದ ಸಿದ್ದಪ್ಪ (31) ಮತ್ತು ರಾಯಚೂರಿನ ಮಿಟೆಕೇಲೂರು ಗ್ರಾಮದ ಮುತ್ತು (25) ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಕಾಂಕ್ರೀಟ್ ಮಿಕ್ಸರ್ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಸಾವು - ಮಿಕ್ಸರ್ ಲಾರಿ ಪಲ್ಟಿ ಹೊಡೆದು ಕಾಲುವೆಗೆ
ನಿಯಂತ್ರಣ ತಪ್ಪಿದ ಲಾರಿ - ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು - ಮಾದನಾಯಕನಹಳ್ಳಿಯಲ್ಲಿ ಪ್ರಕರಣ
the-driver-lost-control-and-the-concrete-mixer-lorry-overturned-driver-cleaner-died
ಮೃತರಿಬ್ಬರು ಮಲ್ಲಾಪುರ ಗ್ರಾಮದ ಕಾಂಕ್ರೀಟ್ ಮಿಸ್ಕ್ ಪ್ಲಾಂಟ್ನಲ್ಲಿ ಕೆಲಸ ಮಾಡುತ್ತಿದ್ದರು. ಮಾಗಡಿ ರಸ್ತೆಯ ತಾವರೆಕೆರೆಗೆ ಸಂಚರಿಸುವ ಮಾರ್ಗಮಧ್ಯ ಸೊಂಡೇಕೊಪ್ಪ ಬಳಿ ನಿಯಂತ್ರಣ ತಪ್ಪಿ ಲಾರಿ ಕಾಲುವೆಗೆ ಬಿದ್ದು ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸರ್ವಧರ್ಮ ಸಮಾವೇಶದಲ್ಲಿ ಭಗವದ್ಗೀತೆ ಶ್ಲೋಕ ಪಠಿಸಿದ ಮುಸ್ಲಿಂ ಬಾಲಕ- ವಿಡಿಯೋ