ಕರ್ನಾಟಕ

karnataka

ETV Bharat / state

ಕಲಬುರಗಿ ಜನರ ಕನಸು ನನಸು: ಲೋಹದ ಹಕ್ಕಿ ಹಾರಾಟಕ್ಕೆ ಕ್ಷಣಗಣನೆ - latest bangalore cm yadiyurappa news

ಕಲಬುರಗಿ ಜನರ ದಶಕದ ಕನಸಾದ ವಿಮಾನ ಹಾರಾಟ ಇಂದು ನನಸಾಗಲಿದೆ. ಇದೊಂದು ಐತಿಹಾಸಿಕ ದಿನವೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜನರ ಕನಸಾದ ವಿಮಾನ ಹಾರಟ ಇಂದು ನೆರವೇರಲಿದೆ : ಸಿಎಂ ಬಿಎಸ್​ವೈ

By

Published : Nov 22, 2019, 12:04 PM IST

ಬೆಂಗಳೂರು: ಕಲಬುರಗಿ ಜನರ ಬಹು ದಿನಗಳ ಕನಸಾದ ವಿಮಾನ ಹಾರಾಟ ನನಸಾಗಲು ಕ್ಷಣಗಣನೆ ಆರಂಭವಾಗಿದೆ. ಕಲಬುರಗಿ ದೃಷ್ಟಿಯಿಂದ ಹೇಳುವುದಾದರೆ ಇದೊಂದು ಐತಿಹಾಸಿಕ ದಿನವೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜನರ ಕನಸಾದ ವಿಮಾನ ಹಾರಾಟ ಇಂದು ನನಸು: ಸಿಎಂ ಬಿಎಸ್​ವೈ

ಕಲಬುರಗಿಯಲ್ಲಿಂದು ವಿಮಾನಯಾನ ಚಾಲನೆಯ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೋನಿಯ ನಿವಾಸದ ಬಳಿ ಮಾತನಾಡಿದ ಅವರು, ಇಂದು ಐತಿಹಾಸಿಕ ದಿನ, ಕಲಬುರಗಿ ವಿಮಾನ ಹಾರಾಟದ ಕನಸು ಇಂದು ಕೈಗೂಡುತ್ತಿದೆ ಎಂದರು.

ಮೊದಲನೆಯ ವಿಮಾನಯಾನ ಇಂದು ಬೆಂಗಳೂರಿನಿಂದ ಮ. 12:30ಕ್ಕೆ ಹಾರಾಟ ನಡೆಸಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಹಲವು ಮುಖಂಡು ಕಲಬುರಗಿಗೆ ಇದೇ ವಿಮಾನದಲ್ಲಿ ತೆರಳುತ್ತೇವೆ ಎಂದು ಸಂಸದ ಉಮೇಶ್ ಜಾಧವ್ ತಿಳಿಸಿದರು.

ABOUT THE AUTHOR

...view details