ಕರ್ನಾಟಕ

karnataka

ETV Bharat / state

ಪೌರತ್ವ ಕಾಯ್ದೆಗೂ ನೆಲಮಂಗಲದ ಬಂಧನ ಕೇಂದ್ರಕ್ಕೂ ಸಂಬಂಧವಿಲ್ಲ: ಬೊಮ್ಮಾಯಿ - Basavaraj Bommayi Latest News

ಪೌರತ್ವ ಕಾಯ್ದೆಗೂ ನೆಲಮಂಗಲ ಬಳಿ ನಿರ್ಮಿಸಿರುವ ಬಂಧನ ಕೇಂದ್ರಕ್ಕೂ ಸಂಬಂಧ‌ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

Bommayi
ಪೌರತ್ವ ಕಾಯ್ದೆಗೂ ಡಿಟೆಂಷನ್ ಸೆಂಟರ್​ಗೂ ಸಂಬಂಧವಿಲ್ಲ : ಬೊಮ್ಮಾಯಿ

By

Published : Dec 24, 2019, 5:14 PM IST

ಬೆಂಗಳೂರು: ಪೌರತ್ವ ಕಾಯ್ದೆಗೂ ನೆಲಮಂಗಲ ಬಳಿ ನಿರ್ಮಿಸಿರುವ ಡಿಟೆನ್ಷನ್​ ಸೆಂಟರ್ ಗೂ (ಬಂಧನ ಕೇಂದ್ರ) ಸಂಬಂಧ‌ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಪೌರತ್ವ ಕಾಯ್ದೆಗೂ ಡಿಟೆಂಷನ್ ಸೆಂಟರ್​ಗೂ ಸಂಬಂಧವಿಲ್ಲ : ಬೊಮ್ಮಾಯಿ
ವಿಧಾನಸೌಧದಲ್ಲಿ ಮಾತನಾಡಿದ ಅವರು, ನೆಲಮಂಗಲ ಬಳಿ ಸಮಾಜ ಕಲ್ಯಾಣ ಇಲಾಖೆಯವರು ಕಟ್ಟಡ ಕಟ್ಟಿದ್ದಾರೆ, ಈ ಕಟ್ಟಡವನ್ನು ಮಾದಕ ದ್ರವ್ಯವನ್ನು ಸೇವಿಸಿ ಪೊಲೀಸರ ಮೇಲೆ‌ ಹಲ್ಲೆ ನಡೆಸಿರುವ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿರುವ ನೈಜೀರಿಯಾ ಪ್ರಜೆಗಳನ್ನು ಇರಿಸಲು ನಿರ್ಮಿಸಲಾಗಿದೆ, ಅವರ ವಿರುದ್ಧದ ಪ್ರಕರಣಗಳು ಇತ್ಯರ್ಥವಾಗುವ ತನಕ ಅವರನ್ನು ಡಿಟೆನ್ಷನ್​ ಸೆಂಟರ್​ನಲ್ಲಿ ಇರಿಸಲಾಗುತ್ತದೆ.

ನಂತರ ಅವರನ್ನು ಅವರ ದೇಶಕ್ಕೆ ಕಳುಹಿಸಾಗುವುದು, ಇಲ್ಲಿ ಸಿಎಎ ಕಾಯ್ದೆ ಅಡಿ ಅಕ್ರಮ ವಲಸಿಗರನ್ನು ಬಂಧಿಸಿಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು ಅದು ಡಿಟೆನ್ಷನ್​ ಸೆಂಟರ್‌ ಅಲ್ಲ. ಅದರಲ್ಲಿ ಈವರೆಗೆ ಯಾರೂ ಬಂಧಿತರೂ ಆಗಿಲ್ಲ, ಅದು ಖಾಲಿ ಕಟ್ಟಡವಾಗಿದೆ ಎಂದು ತಿಳಿಸಿದರು.

ABOUT THE AUTHOR

...view details