ಬೆಂಗಳೂರು:ಎಲ್ಲರಿಗೂ ಅಪೇಕ್ಷೆ ಇರುತ್ತದೆ. ಆದ್ರೆ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಉಮೇಶ್ ಕತ್ತಿ ಸಹೋದರನಿಗೆ ರಾಜ್ಯಸಭೆ ಸೀಟ್ ನೀಡಬೇಕೆಂಬ ವಿಚಾರವಾಗಿ ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವರನ್ನು ಪಕ್ಷವೇ ಗುರುತಿಸುತ್ತದೆ, ಇನ್ನೂ ಕೆಲವರು ಕೇಳುತ್ತಾರೆ. ಕೇಳೋದರಲ್ಲಿ ತಪ್ಪೇನಿಲ್ಲ. ಆದರೆ ಅಂತಿಮವಾಗಿ ಟಿಕೆಟ್ ನೀಡುವುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದರು.