ಕರ್ನಾಟಕ

karnataka

ETV Bharat / state

ಅಧಿಕಾರ ಬೇಕು ಎನ್ನುವ ಆಸೆ‌ ಸಹಜ, ಅದನ್ನು ವರಿಷ್ಠರು ನೋಡಿಕೊಳ್ತಾರೆ: ಲಕ್ಷ್ಮಣ ಸವದಿ - ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದೆ. ಅದನ್ನು ನಿರ್ವಹಿಸುತ್ತೇನೆ. ಅಧಿಕಾರ ಬೇಕು ಎನ್ನುವ ಆಸೆ‌ ಸಹಜವಾಗಿ ಎಲ್ಲರಲ್ಲಿಯೂ ಇರುತ್ತದೆ. ಇದನ್ನು ವರಿಷ್ಠರು ಪರಿಹರಿಸಲಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

By

Published : Aug 27, 2019, 4:26 PM IST

ಬೆಂಗಳೂರು:ಅಧಿಕಾರ ಬೇಕು ಎನ್ನುವ ಆಸೆ‌ ಸಹಜವಾಗಿ ಎಲ್ಲರಲ್ಲಿಯೂ ಇರುತ್ತದೆ. ಇದನ್ನೆಲ್ಲಾ ವರಿಷ್ಠರು ಪರಿಹರಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಂದಿಗೆ ಮಾತನಾಡಿದ ಅವರು, ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದೆ. ಅದನ್ನು ನಿರ್ವಹಿಸುತ್ತೇನೆ. ಯಾರಿಗೂ ಅಸಮಾಧಾನ ಇಲ್ಲ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಮಂತ್ರಿಯಾಗಬೇಕು, ಉಪ ಮುಖ್ಯಮಂತ್ರಿಯಾಗಬೇಕು ಎಂದು ಎಲ್ಲರಿಗೂ ಆಸೆ ಇರುವುದು ಸಹಜ. ಎಲ್ಲರೂ ನನ್ನ ಸ್ನೇಹಿತರೇ ತಾನೆ. ಅವರೆಲ್ಲರ ಸಹಕಾರ ಪಡೆದುಕೊಂಡೇ ಪಕ್ಷ ಮತ್ತು ಸರ್ಕಾರದ ಕೆಲಸ ಮಾಡುತ್ತೇನೆ. ಎಲ್ಲ ಸರಿ ಹೋಗುತ್ತದೆ‌ ಎಂದರು.

ABOUT THE AUTHOR

...view details