ಬೆಂಗಳೂರು :ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅಫ್ರೋಜ್ ಬಿ ಎಂಬುವರನ್ನು ಜುಲೈ 13ರಂದು ವೈಟ್ ಫೀಲ್ಡ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕೆಂದಿದ್ದರು. ಈ ಸುದ್ದಿ ಕೇಳಿದಾಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಬಂದಿದ್ದ ಆಕೆಯ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಂದೆಯ ಅಂತ್ಯಕ್ರಿಯೆ ಮುಗಿಸಿಬಂದ ಪುತ್ರನಿಗೂ ಹೃದಯಾಘಾತವಾಗಿದೆ. 2 ದಿನದ ಬಳಿಕ ಆತನೂ ಸಾವನ್ನಪ್ಪಿದ್ದಾನೆ.
ಇತ್ತ ಆಸ್ಪತ್ರೆಯಲ್ಲಿದ್ದ ಮಹಿಳೆ ಕೊರೊನಾ ಸೋಂಕಿನಿಂದ ಉಸಿರಾಟ ಸಮಸ್ಯೆ ಉಂಟಾಗಿ ಮೃತರಾಗಿದ್ದಾರೆ. ಆಸ್ಪತ್ರೆಯವರು ಮೃತದೇಹ ನೀಡಲು ₹9 ಲಕ್ಷ ಪಾವತಿ ಮಾಡುವಂತೆ ಹೇಳಿದ್ದಾರೆ. ಆಸ್ಪತ್ರೆಯಿಂದ ಮೃತದೇಹ ಕೊಡಬೇಕಾದ್ರೆ ಬಿಲ್ ಪಾವತಿಗೆ ಒತ್ತಡ ಹಾಕಿದ್ದಾರೆ. ಬಿಬಿಎಂಪಿ ಅಧಿಕಾರಿಯವರು ಹೇಳಿದ್ರೂ ಮೃತದೇಹ ಕೊಡದೇ ಹಣಕ್ಕಾಗಿ ಪೀಡಿಸಿದ್ದಾರೆ.