ಬೆಂಗಳೂರು: ಇಂದು ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಹಾಗೂ ಸಹಚರರ ಅರ್ಜಿ ವಿಚಾರಣೆಯು, ವಿಡಿಯೋ ಕಾನ್ಫರೆನ್ಸ್ ಮುಖಾಂತರ ನ್ಯಾಯಾಲಯದಲ್ಲಿ ನಡೆಯಲಿದೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬರುವ ನಿರೀಕ್ಷೆಯಲ್ಲಿ ಇಮ್ರಾನ್ ಪಾಷಾ ಇದ್ದಾರೆ.
ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಕೋವಿಡ್ ಭೀತಿ ಮರೆತು, ಗುಂಪು ಗೂಡಿ ಸಂಭ್ರಮಾಚರಣೆ ಮಾಡಿ ಕಾನೂನು ಉಲ್ಲಂಘನೆ ಆರೋಪದಡಿ ಜೈಲು ಸೇರಿದ್ದಾರೆ.
ಜೂನ್ 8 ರಂದು ಇಮ್ರಾನ್ ಪಾಷಾ ಆಸ್ಪತ್ರೆಯಿಂದ ಬಿಡುಗಡೆ ಆಗಿ ರೋಡ್ ಶೋ ನಡೆಸಿದ್ದರು. ಈ ಕುರಿತು ಜೆ ಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇಮ್ರಾನ್ ಪಾಷಾ ಸೇರಿ ಒಟ್ಟು 27 ಜನರನ್ನ ವಶಕ್ಕೆ ಪಡೆಯಲಾಗಿತ್ತು.