ಕರ್ನಾಟಕ

karnataka

ETV Bharat / state

ಕೋವಿಡ್‌ ವಾರಿಯರ್ಸ್​​​​​ ಟೆಸ್ಟ್‌ಗೆ ₹1500 ಪಾವತಿಸ್ಬೇಕಂತೆ.. ಆಳೋರಿಗೆ ಇದೂ ಕಷ್ಟವೇ?? - ಖಾಸಗಿ ಲ್ಯಾಬ್​

ಈಗ ಕೋವಿಡ್ ಪರೀಕ್ಷೆಯಲ್ಲಿ ಸರ್ಕಾರಿ ಲ್ಯಾಬ್​ಗಳ ವರದಿ ವಿಳಂಬ ಹಿನ್ನೆಲೆ ಖಾಸಗಿ ಲ್ಯಾಬ್‌ಗಳ ಮೊರೆ ಹೋಗುತ್ತಿರುವ ಕೆಲ ಪೊಲೀಸರು ತಮ್ಮಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಬಳಿಕ ಆತಂಕಗೊಂಡಿದ್ದಾರೆ..

Corona
ಕೊರೊನಾ

By

Published : Jul 5, 2020, 8:26 PM IST

ಬೆಂಗಳೂರು: ಇಷ್ಟು ದಿನ ಸಾರ್ವಜನಿಕರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಹಣ ತೆರಬೇಕಿತ್ತು. ಇದೀಗ ವಾರಿಯರ್ಸ್​ಗಳಾದ ಪೊಲೀಸರು ಕೂಡಾ ಹಣ ಪಾವತಿಸಬೇಕಾದ ಸ್ಥಿತಿ ಬಂದೊದಗಿದೆ.

ಇಷ್ಟು ದಿನ ಕೊರೊನಾ ವಾರಿಯರ್ಸ್​ಗೆ ಉಚಿತ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ಬೆಂಗಳೂರಿನ ಉತ್ತರ ಹಾಗೂ ಈಶಾನ್ಯ ವಿಭಾಗದ ಕೆಲ ಠಾಣೆಗಳ ಪೊಲೀಸರು ಖಾಸಗಿ ಲ್ಯಾಬ್​ಗಳಲ್ಲಿ ತಾವೇ ₹1500 ಖರ್ಚು ಮಾಡಿ ಪರೀಕ್ಷೆ ಮಾಡಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ.

ಜ್ಞಾಪನ ಪತ್ರ

ಈಗ ಕೋವಿಡ್ ಪರೀಕ್ಷೆಯಲ್ಲಿ ಸರ್ಕಾರಿ ಲ್ಯಾಬ್​ಗಳ ವರದಿ ವಿಳಂಬ ಹಿನ್ನೆಲೆ ಖಾಸಗಿ ಲ್ಯಾಬ್‌ಗಳ ಮೊರೆ ಹೋಗುತ್ತಿರುವ ಕೆಲ ಪೊಲೀಸರು ತಮ್ಮಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದ ಬಳಿಕ ಆತಂಕಗೊಂಡಿದ್ದಾರೆ. ಹೀಗಾಗಿ ನಗರದ ಕೆಲವು ಪೊಲೀಸ್ ಠಾಣೆ ಸಿಬ್ಬಂದಿ ಹೊರಗೆ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇಚ್ಛೆಯುಳ್ಳವರು ಹಣ ಪಾವತಿಸಿ ಕೋವಿಡ್ ಟೆಸ್ಟ್ ಪರೀಕ್ಷೆ ಮಾಡಿಸುವಂತೆ ಠಾಣೆಯ ಹಿರಿಯ ಅಧಿಕಾರಿಗಳಿಂದ ಸೂಚನೆ ನೀಡಲಾಗಿದೆ.

ಠಾಣೆಗಳ ನಾಮಫಲಕದಲ್ಲಿ ಜ್ಞಾಪಕ ಪತ್ರ :ಬೆಂಗಳೂರು ಈಶಾನ್ಯ ಮತ್ತು ಉತ್ತರ ಭಾಗದ ಠಾಣೆಗಳ ಕೆಲ ನಾಮಫಲಕದಲ್ಲಿ ಜ್ಞಾಪನ ಪತ್ರ ಹಾಕುವ ಮೂಲಕ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ‌. ಅದರಲ್ಲಿ ಖಾಸಗಿ ಲ್ಯಾಬ್‌ಗೆ ಪ್ರತಿಯೋರ್ವ ಸಿಬ್ಬಂದಿ 1500 ರೂ.ಪಾವತಿಸಿ ಕೋವಿಡ್ ಪರೀಕ್ಷೆ ಮಾಡಿಸಬೇಕೆಂದಿದೆ. ಅದರಂತೆ ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ಬಳಿ ಪರೀಕ್ಷೆ ಮಾಡಲಾಗುತ್ತಿದೆ. ಹಾಗೆಯೇ ಅಕ್ಕ-ಪಕ್ಕದ ಕೆಲ ಠಾಣೆ ಸಿಬ್ಬಂದಿಗೆ ಈ ನೋಟಿಸ್​​ ಮೂಲಕ ಸೂಚನೆ ನೀಡಲಾಗಿದೆ.

ABOUT THE AUTHOR

...view details