ಕರ್ನಾಟಕ

karnataka

ETV Bharat / state

ರಾಜ್ಯ, ಕೇಂದ್ರ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದ ಕಾಂಗ್ರೆಸ್ ಟ್ವೀಟ್ ಡಿಲೀಟ್

ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರವನ್ನು ಮನಬಂದಂತೆ ಟ್ವೀಟ್​ನಲ್ಲಿ ಟೀಕಿಸಿದ್ದ ಕಾಂಗ್ರೆಸ್​. ಸಂಜೆಯಾಗುತ್ತಿದ್ದಂತೆ ಟ್ವಿಟ್​ ಅಳಿಸಿ ಹಾಕಿದೆ. ಫೋನ್​ ಕದ್ದಾಲಿಕೆ, ಸಿಬಿಐ ತನಿಖೆ ಸೇರಿದಂತೆ ಬಿಜೆಪಿಯನ್ನು ಟೀಕಿಸಿದ್ದ ಟ್ವೀಟ್​ ಇದಾಗಿತ್ತು.

ಕಾಂಗ್ರೆಸ್​ ಪಕ್ಷದ ಚಿಹ್ನೆ

By

Published : Aug 19, 2019, 2:11 AM IST

ಬೆಂಗಳೂರು: ತುಘಲಕ್ ಮೋದಿ, ನಾಲಾಯಕ್ ಬಿಎಸ್​ವೈ ಎಂದು ಹೇಳುವ ಮೂಲಕ ಆಗಸ್ಟ್ 18ರ ಬೆಳಗ್ಗೆ ಟ್ವೀಟ್ ಮಾಡಿದ್ದ ರಾಜ್ಯ ಕಾಂಗ್ರೆಸ್ ಸಂಜೆಯಾಗುತ್ತಲೇ ತನ್ನ ಟ್ವೀಟ್​ನ್ನು ಡಿಲೀಟ್ ಮಾಡಿದೆ.

ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿಲ್ಲ ಎಂಬ ಬೇಸರವನ್ನು ಈ ರೀತಿ ಟ್ವೀಟ್ ಮೂಲಕ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಜೆ ಹೊತ್ತಿಗೆ ಅದನ್ನು ಅಳಿಸಿ ಹಾಕುವ ಮೂಲಕ ಅಚ್ಚರಿ ಮೂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಕ್ಕೆ ದ್ರೋಹ ವೆಸಗಿದ್ದಾರೆ. ಮಧ್ಯಂತರ 5 ಸಾವಿರ ಕೋಟಿ ನೆರವು ನೀಡಿಲ್ಲ. ರಾಷ್ಟ್ರೀಯ ವಿಪತ್ತೆಂದು ಪ್ರವಾಹ ಪರಿಸ್ಥಿತಿ ಘೋಷಿಸಿಲ್ಲ. ಜವಾಬ್ದಾರಿ, ಕರ್ತವ್ಯ ನಿರ್ವಹಿಸದೆ ಕೇಂದ್ರ ಕಣ್ಮುಚ್ಚಿದೆ ಎಂದು ಟ್ವೀಟ್​ನಲ್ಲಿ ಟೀಕಿಸಿತ್ತು.

ಮೋದಿ ಆಳ್ವಿಕೆಯಲ್ಲಿ ಸಿಬಿಐ ಬಿಜೆಪಿಯ ಮುಂಚೂಣಿ ಘಟಕವಾಗಿ ಕೆಲಸ ಮಾಡುತ್ತಿದೆ. ಫೋನ್ ಕದ್ದಾಲಿಕೆ ಎಂಬುದೊಂದು ಸುಳ್ಳು, ದ್ವೇಷ ರಾಜಕಾರಣದ ಸಂಚು! ಎಂದು ಹೇಳಿದೆ.

ಅಳಿಸಿದ್ದು ಏಕೆ?: ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರ ನಡುವೆಯೇ ಗೊಂದಲ ಇರುವ ಹಿನ್ನೆಲೆ ಟ್ವೀಟ್ ಡಿಲೀಟ್ ಆಗಿದೆ ಎನ್ನಲಾಗುತ್ತಿದೆ. ತನಿಖೆಗೆ ಸಿದ್ದರಾಮಯ್ಯ, ಖರ್ಗೆಯಂತಹ ನಾಯಕರಿಂದ ಪೂರಕ ಸ್ಪಂದನೆ ಸಿಕ್ಕಿದೆ. ಆದರೆ, ಮಾಜಿ ಸಿಎಂ ಹೆಚ್.ಡಿ.ಕೆ ಜೊತೆ ಆಪ್ತರಾಗಿದ್ದ ಕಾಂಗ್ರೆಸ್ ನಾಯಕರಲ್ಲಿ ಅಪಸ್ವರ ಇದೆ. ಇಂದು ಟ್ವೀಟ್ ಕೂಡ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.

ದಿನೇಶ್ ಗುಂಡೂರಾವ್ ಅವರ ಆದೇಶದ ಹಿನ್ನೆಲೆ ಟ್ವೀಟ್ ಡಿಲೀಟ್ ಆಗಿದೆ. ಒಟ್ಟಾರೆ ಅಧ್ಯಕ್ಷರ ಗಮನಕ್ಕೆ ಬಾರದೆ ಟ್ವೀಟ್ ಪ್ರಕಟಿಸಿ, ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಇನ್ನೊಂದು ಎಡವಟ್ಟು ಮಾಡಿಕೊಂಡಿದೆ ಎಂಬುದು ಸಾಬೀತಾಗಿದೆ.

ABOUT THE AUTHOR

...view details