ಬೆಂಗಳೂರು :ಪಾಲಿಕೆಯ ನಿರ್ಲಕ್ಷ್ಯದಿಂದ ನಗರದ ಗವಿಪುರಂನಲ್ಲಿ ಕೊರೊನಾ ವೈರಸ್ಗೆ ಬಲಿಯಾಗಿದ್ದ ಹನುಮಂತರಾಜು ಎಂಬುವರ ಮನೆಗೆ ಬಿಬಿಎಂಪಿ ಆಯುಕ್ತರು ಇಂದು ಭೇಟಿ ನೀಡಿ ಕ್ಷಮೆಯಾಚಿಸಿದ್ದಾರೆ.
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮನೆಗೆ ಭೇಟಿ ನೀಡಿ ಕ್ಷಮೆಯಾಚಿಸಿದ ಆಯುಕ್ತರು - ಬೆಂಗಳೂರಿನಲ್ಲಿ ಕೊರೊನಾಗೆ ವ್ಯಕ್ತಿ ಸಾವು
ಆಯುಕ್ತರು ಬರುತ್ತಿರುವ ಹಿನ್ನೆಲೆ ಮನೆ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ್ದರು. ಆ್ಯಂಬುಲೆನ್ಸ್ ಸಮಸ್ಯೆಯಿಂದಲೇ ಮೃತಪಟ್ಟಿದ್ದಾಗಿ ಸ್ಥಳೀಯರೂ ಆಯುಕ್ತರಿಗೆ ದೂರಿದರು..
ಪಾಲಿಕೆ ನಿರ್ಲಕ್ಷ್ಯ, ಆ್ಯಂಬುಲೆನ್ಸ್ ಕಳುಹಿಸುವುದು ವಿಳಂಬವಾಗಿ ಹನುಮಂತನಗರದ ಗವಿಪುರಂನಲ್ಲಿ ಹನುಮಂತರಾಜು ನಿನ್ನೆ ಮೃತಪಟ್ಟಿದ್ದರು. ಇಂದು ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತರಾದ ಬಿ ಹೆಚ್ ಅನಿಲ್‌ಕುಮಾರ್, ಮೃತರ ಪತ್ನಿಯ ಬಳಿ ಕ್ಷಮೆಯಾಚಿಸಿದರು. ಅಧಿಕಾರಿ, ಸಿಬ್ಬಂದಿ ತಪ್ಪಿಗೆ ನಾನು ಅವರ ಪರ ಕ್ಷಮೆಯಾಚಿಸುತ್ತೇನೆ ಎಂದು ಸಾಂತ್ವನ ಹೇಳಿದರು.
ಆಯುಕ್ತರು ಬರುತ್ತಿರುವ ಹಿನ್ನೆಲೆ ಮನೆ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ್ದರು. ಆ್ಯಂಬುಲೆನ್ಸ್ ಸಮಸ್ಯೆಯಿಂದಲೇ ಮೃತಪಟ್ಟಿದ್ದಾಗಿ ಸ್ಥಳೀಯರೂ ಆಯುಕ್ತರಿಗೆ ದೂರಿದರು. ಬಳಿಕ ಶಾಸಕ ರವಿ ಸುಬ್ರಹ್ಮಣ್ಯ ಸಹ ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.